ಬ್ರೇಕಿಂಗ್ ನ್ಯೂಸ್
10-08-25 04:32 pm Udupi Correspondent ಕರಾವಳಿ
ಉಡುಪಿ, ಆ.10 : ಸಾವಿರಾರು ಕೋಟಿಯ ಕಂಪನಿ ಕಟ್ಟಲು ಕಾರಣವಾಗಿದ್ದ ಇನ್ಫೋಸಿಸ್ ಸುಧಾಮೂರ್ತಿ ಯಾವುದೇ ಹಮ್ಮು ಬಿಮ್ಮಿಲ್ಲದೆ ಶ್ರೀಕೃಷ್ಣ ಮಠದಲ್ಲಿ ನೆಲದಲ್ಲಿ ಕುಳಿತು ಹೊಸ್ತಿಲು ಬರೆದಿದ್ದಲ್ಲದೆ, ದೇವರ ಪಾತ್ರೆ ತೊಳೆದು ದೇವರ ನಾಮ ಹಾಡುತ್ತಾ ಹೂಗಳನ್ನು ಕಟ್ಟಿ ಕಾಲ ಕರೆದಿದ್ದಾರೆ. ಈ ವೇಳೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಯಾದರು.
ಮಠದ ಗೋ ಶಾಲೆಯಲ್ಲಿ ಗೋಪೂಜೆ ನೆರವೇರಿಸಿ, ಗೋವುಗಳಿಗೆ ಗೋಗ್ರಾಸ ನೀಡಿದರು. ಭೋಜನ ಶಾಲೆಯಲ್ಲಿ ದೇವರ ಪಾತ್ರೆಗಳನ್ನು ತೊಳೆವಾಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಜೊತೆಗಿದ್ದು ಉಡುಪಿ ಮಣಿಪಾಲದ ತನ್ನ ನೆನಪಿನ ನಂಟನ್ನು ಹೇಳಿಕೊಂಡರು. ಆಟಿ ಹುಣ್ಣಿಮೆ ಅಂಗವಾಗಿ ಶ್ರೀಕೃಷ್ಣ ಮಠದ ಹೊಸ್ತಿಲು ಬರೆದ ಸುಧಾಮೂರ್ತಿ ಚಂದ್ರಶಾಲೆಯಲ್ಲಿ ಕುಳಿತು ದಾರವನ್ನು ಸುತ್ತುತ್ತ ಕನಕಾಂಬರ ಹೂವುಗಳನ್ನು ಪೋಣಿಸಿ ದ್ವಾದಶ ಸ್ತೋತ್ರ ಹಾಡಿದರು.






ಕೃಷ್ಣ ಮಠದ ಹೊಸ್ತಿಲು ಬರೆಯಲು ಇವರಿಬ್ಬರೂ ದಿಲ್ಲಿಯಿಂದ ಬಂದಿದ್ದರು. ಕೃಷ್ಣನ ಮಹಾದ್ವಾರ, ಸಿಂಹಾಸನ ಬಾಗಿಲಲ್ಲಿ ಹೊಸ್ತಿಲು ಬರೆದು ಲಕ್ಷ್ಮೀ ಪೂಜೆಯನ್ನೂ ನೆರವೇರಿಸಿದರು. ಇಬ್ಬರೂ ಜಗದ ಪರಿವೆ ಇಲ್ಲದೆ ಕೃಷ್ಣನ ಸ್ತೋತ್ರಗಳನ್ನು ಹಾಡುತ್ತ ಕಾಲ ಕಳೆದರು.
ಶ್ರೀಮಠದ ವತಿಯಿಂದ ಇಬ್ಬರಿಗೂ ಮುತ್ತೈದೆಯರ ಮೂಲಕ ಬಾಗಿನ ನೀಡಲಾಯಿತು. ಸರ್ವಜ್ಞ ಪೀಠದಲ್ಲಿ ಕುಳಿತಿದ್ದ ಶ್ರೀಗಳು ಇಬ್ಬರಿಗೂ ವಿಶೇಷ ಪ್ರಸಾದ ನೀಡಿದರು. ಸಚಿವೆ ನಿರ್ಮಲಾ ಅವರು ತನ್ನ ಮನೆಯಿಂದ ತಂದಿದ್ದ ನಾಲ್ಕು ಮುಷ್ಟಿ ಅವಲಕ್ಕಿಯನ್ನು ಶ್ರೀಗಳಿಗೆ ಅರ್ಪಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುತ್ತಿನ ಸರಗಳ ವಿಶೇಷ ಅಲಂಕಾರದಲ್ಲಿದ್ದ ಶ್ರೀಕೃಷ್ಣನನ್ನು ಕಣ್ತುಂಬಿಕೊಂಡರು. ತಲೆಗೆ ಮಲ್ಲಿಗೆ ಮುಡಿದಿದ್ದ ಸುಧಾಮೂರ್ತಿ ಶ್ರೀಕೃಷ್ಣನನ್ನು ನವಗ್ರಹ ಕಿಂಡಿಯಲ್ಲಿ ಕಂಡರು.
ಹಣ, ಚಿನ್ನ ಬದುಕಿಗೆ ಸಾಧನವೇ ಹೊರತು ಜೀವನವಲ್ಲ. ಹಣ, ಚಿನ್ನದ ಅಕ್ಕಿ ಇದೆಯೆಂದು ಅದನ್ನು ತಿನ್ನಲಾಗದು. ಹಣಕ್ಕಿಂತ ಬದುಕಿಗೆ ಅಧ್ಯಾತ್ಮದ ಅಗತ್ಯ ಬಹಳಷ್ಟಿದೆ. ಎಷ್ಟು ಹಣ ಕೊಟ್ಟರೂ ಖರೀದಿಸಲಾಗದ ಸಂಪತ್ತು ಆಧ್ಯಾತ್ಮ ಮಾತ್ರ ಎಂದು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಹೇಳಿದರು.
ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ವತಿಯಿಂದ ಶ್ರೀಕೃಷ್ಣ ಮಠದ ಯಾಳಿ (ಸುತ್ತು ಪೌಳಿ) ಹಾಗೂ ಗೀತಾಮಂದಿರದಲ್ಲಿ ಶ್ರೀಪುತ್ತಿಗೆ ವಿಶ್ವ ವಿದ್ಯಾಪೀಠದ ಉದ್ಘಾಟನೆ ಬಳಿಕ ಸುಧಾಮೂರ್ತಿ ರಾಜಾಂಗಣದಲ್ಲಿ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಶನಿವಾರ ಮಾತನಾಡಿದರು.
Infosys Foundation Chairperson and Rajya Sabha member Sudha Murty, known for her simplicity despite her role in building a billion-dollar company, spent her day at Udupi Sri Krishna Matha engaging in humble service. She was seen sitting on the floor writing hostilu (ritual door decorations), washing temple utensils, singing devotional hymns, and stringing flowers. Joining her in this act of devotion was Union Finance Minister Nirmala Sitharaman.
01-07-26 09:49 pm
HK News Desk
ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನ...
29-06-26 10:33 pm
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
30-06-26 08:06 pm
HK News Staffer
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
ಮೊಹರಂ ಮೆರವಣಿಗೆಯಲ್ಲಿ 15,000 ಜನರ ಹತ್ಯೆಗೆ ಸ್ಕೆಚ್...
29-06-26 03:35 pm
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
01-07-26 10:37 pm
HK News Desk
ಭಾರಿ ಮಳೆ ; ಜುಲೈ 2 ದಕ್ಷಿಣ ಕನ್ನಡ ಶಾಲೆ - ಕಾಲೇಜಿಗ...
01-07-26 09:58 pm
ನಾಗುರಿ ದುರಂತ ನಮಗೆಲ್ಲ ಎಚ್ಚರಿಕೆ ಕರೆಗಂಟೆ, ವಿಕೋಪಗ...
01-07-26 09:18 pm
Mangalore Garodi Landslide: ನಾಗುರಿ ದುರಂತ ; ಗು...
01-07-26 08:41 pm
ಕಡೆಗೂ ಮಳೆ ಬಿರುಸು ; ತೊಕ್ಕೊಟ್ಟಿನಲ್ಲಿ ಮನೆ ಮೇಲೆರ...
01-07-26 11:46 am
01-07-26 09:34 pm
HK News Desk
ಹೋಂ ಸ್ಟೇನಲ್ಲಿ ಯುವತಿ ನಿಗೂಢ ಸಾವು ; ನನ್ನ ಪ್ರಿಯತಮ...
01-07-26 06:52 pm
ಭಗ್ನ ಪ್ರೇಮಿಯಿಂದ ಕಾರು ಸ್ಫೋಟ ಕೇಸ್ ; ಕಚ್ಚಾ ಬಾಂಬ್...
01-07-26 04:51 pm
ಕಂಕನಾಡಿ ಗರೋಡಿಯಲ್ಲಿ ನಾಲ್ಕು ಬಾಡಿಗೆ ಮನೆಗಳಿದ್ದ ಕಟ...
01-07-26 08:59 am
Panambur Gold Robbery, Update: ಪಣಂಬೂರಿನಲ್ಲಿ ಚ...
30-06-26 11:02 pm