ಬ್ರೇಕಿಂಗ್ ನ್ಯೂಸ್
22-08-25 04:21 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.22 : ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ಧಾರೆಂದು ಗಿರೀಶ್ ಮಟ್ಟಣ್ಣನವರ್, ಜಯಂತ್ ಸೇರಿದಂತೆ 7ರಿಂದ 10 ಮಂದಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಮಾತನಾಡಿದ ಆರೋಪದಲ್ಲಿ ಉಡುಪಿ ಬಿಜೆಪಿ ಮುಖಂಡರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತಿಮರೋಡಿಗೆ ಎರಡು ಬಾರಿ ವಿಚಾರಣೆಗೆ ನೋಟಿಸ್ ಕೊಟ್ಟಿದ್ದರೂ ಬಂದಿರಲಿಲ್ಲ. ಗುರುವಾರ ಬೆಳಗ್ಗೆ 9 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ, ಪೊಲೀಸರ ನೋಟಿಸ್ಗೆ, ‘15 ದಿನದೊಳಗೆ ಹಾಜರಾಗುತ್ತೇನೆ’ ಎಂದು ಮಹೇಶ್ ಶೆಟ್ಟಿ ಅದೇ ನೋಟಿಸ್ನಲ್ಲೇ ಉತ್ತರಿಸಿ ಸಹಿ ಮಾಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಅವರ ನಿವಾಸಕ್ಕೆ ದೌಡಾಯಿಸಿ ಅವರನ್ನು ವಶಕ್ಕೆ ಪಡೆದಿದ್ದರು.

ಈ ವೇಳೆ, ಜೊತೆಗಿದ್ದ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಅಲ್ಲಿದ್ದ ಇತರ ಕಾರ್ಯಕರ್ತರು ಬಂಧನಕ್ಕೆ ಅಡ್ಡಿಪಡಿಸಿದ್ದರು. ಇದಲ್ಲದೆ, ಕೆಲವು ಕಾರ್ಯಕರ್ತರು ಉಡುಪಿ ವರೆಗೂ ಪೊಲೀಸ್ ವಾಹನ ಹಿಂಬಾಲಿಸಿದ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ನಾನೇ ಸರೆಂಡರ್ ಆಗ್ತೀನಿ, ತ್ರಾಸ ಯಾಕೆ ?
ತಮ್ಮ ವಿರುದ್ಧ ಕೇಸ್ ದಾಖಲಾದ ವಿಚಾರ ಗೊತ್ತಾಗುತ್ತಿದ್ದಂತೆ ಗಿರೀಶ್ ಮಟ್ಟಣ್ಣನವರ್ ಶುಕ್ರವಾರ ಬೆಳಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದಿದ್ದು, ಪೊಲೀಸರು ಡೀಸೆಲ್ ಖರ್ಚು ಬಂಧನಕ್ಕೆ ತ್ರಾಸ ಪಡೋದು ಬೇಡ, ನಾನೇ ಸರೆಂಡರ್ ಆಗುವೆ ಎಂದು ಹೈಡ್ರಾಮಾ ಸೃಷ್ಟಿಸಿದ್ದಾರೆ. ಈ ವೇಳೆ ಮಾತನಾಡಿದ ಮಟ್ಟಣನವರ್, ಕೋರ್ಟ್ ಹಾಗೂ ಪೊಲೀಸ್ ಸ್ಟೇಷನ್ ಅಂದ್ರೆ ನನಗೆ ಬೀಗರ ಮನೆಯಂತಾಗಿದೆ. ಮಾನವ ಹಕ್ಕುಗಳ ಆಯೋಗದ ಜೊತೆಗೆ ಬಂದಿದ್ದೇವೆ. ನಿನ್ನೆ ನೂರು ಜನ ಪೊಲೀಸರು ಬಂಧನಕ್ಕೆ ಬಂದಿದ್ದರು. ಈ ವೇಳೆ ನಾವು ಯಾರ ಕೆಲಸಕ್ಕೂ ಅಡ್ಡಿಪಡಿಸಿಲ್ಲ. ಮಹೇಶ್ ತಿಮರೋಡಿ, ಜಯಂತ್ ಮತ್ತು ನನ್ನ ವಿರುದ್ಧ ಸೇರಿ 30 ಜನರ ಮೇಲೆ ಕೇಸ್ ಹಾಕಿದ್ದಾರೆ. ಸುಮ್ಮನೆ ಅವರ ಪೆಟ್ರೋಲ್ ವೇಸ್ಟ್ ಆಗೋದು ಬೇಡ. ಹೀಗಾಗಿ ಬಂಧನ ಮಾಡೋದಾದ್ರೆ ಮಾಡಲಿ ಅಂತ ಬಂದಿದ್ದೇನೆ. ಎಸ್ ಐ ಟಿಗೆ ಭೀಮಾ ಸುಳ್ಳು ಹೇಳಿದ್ದಕ್ಕೆ ಬಂಧನ ಅಂತ ಸುಳ್ಳು ಹೇಳ್ತಾ ಇದ್ದಾರೆ.
ನಮ್ಮನ್ನ ಭಯ ಪಡಿಸೋ ಕೆಲಸ ಆಗ್ತಾ ಇದೆ. ನಾವು ಯಾವುದೇ ಕಾರಣಕ್ಕೂ ಭಯ ಪಡೋದಿಲ್ಲ. ನಮ್ಮ ಮೇಲೆ ಕೇಸ್ ಮೇಲೆ ಕೇಸ್ ಹಾಕ್ತಾ ಇದ್ದಾರೆ. ಇದುವರೆಗೂ ನನ್ನ ಮೇಲೆ ನಾಲ್ಕೈದು ಕೇಸ್ ಹಾಕಿದ್ದಾರೆ. ಮಹೇಶ್ ಶೆಟ್ಟಿ ಮೇಲೆ 10ಕ್ಕೂ ಹೆಚ್ಚು ಕೇಸ್ ಹಾಕಿದ್ದಾರೆ. ಪ್ರತಿನಿತ್ಯ ಒಂದಲ್ಲಾ ಒಂದು ಕೇಸ್ ಹಾಕ್ತಾನೆ ಇದ್ದಾರೆ. ಎಲ್ಲವನ್ನು ಎದುರಿಸೋಕೆ ನಾವು ಸಿದ್ದರಿದ್ದೇವೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿಕೆ ನೀಡಿದ್ದಾರೆ. ಬೆಳ್ತಂಗಡಿ ಪೊಲೀಸರು ಅವರನ್ನು ಘಟನೆ ಸಂಬಂಧಿಸಿ ವಿಚಾರಣೆ ನಡೆಸಿದ್ದಾರೆ.
A case has been registered against Girish Mattannavar, Jayanth, and 7–10 others at Belthangady Police Station for allegedly obstructing police duty during the arrest of activist Mahesh Shetty Timarodi. The complaint was filed by a Sub-Inspector from Brahmavar Police Station.
01-07-26 09:49 pm
HK News Desk
ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನ...
29-06-26 10:33 pm
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
30-06-26 08:06 pm
HK News Staffer
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
ಮೊಹರಂ ಮೆರವಣಿಗೆಯಲ್ಲಿ 15,000 ಜನರ ಹತ್ಯೆಗೆ ಸ್ಕೆಚ್...
29-06-26 03:35 pm
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
01-07-26 09:58 pm
HK News Desk
ನಾಗುರಿ ದುರಂತ ನಮಗೆಲ್ಲ ಎಚ್ಚರಿಕೆ ಕರೆಗಂಟೆ, ವಿಕೋಪಗ...
01-07-26 09:18 pm
Mangalore Garodi Landslide: ನಾಗುರಿ ದುರಂತ ; ಗು...
01-07-26 08:41 pm
ಕಡೆಗೂ ಮಳೆ ಬಿರುಸು ; ತೊಕ್ಕೊಟ್ಟಿನಲ್ಲಿ ಮನೆ ಮೇಲೆರ...
01-07-26 11:46 am
ಸುರತ್ಕಲ್ ನಿಂದ 33 ನಾಟಿಕಲ್ ಮೈಲು ದೂರದಲ್ಲಿ ಅಪಾಯಕ್...
30-06-26 11:39 am
01-07-26 09:34 pm
HK News Desk
ಹೋಂ ಸ್ಟೇನಲ್ಲಿ ಯುವತಿ ನಿಗೂಢ ಸಾವು ; ನನ್ನ ಪ್ರಿಯತಮ...
01-07-26 06:52 pm
ಭಗ್ನ ಪ್ರೇಮಿಯಿಂದ ಕಾರು ಸ್ಫೋಟ ಕೇಸ್ ; ಕಚ್ಚಾ ಬಾಂಬ್...
01-07-26 04:51 pm
ಕಂಕನಾಡಿ ಗರೋಡಿಯಲ್ಲಿ ನಾಲ್ಕು ಬಾಡಿಗೆ ಮನೆಗಳಿದ್ದ ಕಟ...
01-07-26 08:59 am
Panambur Gold Robbery, Update: ಪಣಂಬೂರಿನಲ್ಲಿ ಚ...
30-06-26 11:02 pm