ಬ್ರೇಕಿಂಗ್ ನ್ಯೂಸ್
25-08-25 10:28 pm Mangalore Correspondent ಕರಾವಳಿ
ಬೆಳ್ತಂಗಡಿ, ಆ 25 : ಯೂಟ್ಯೂಬರ್ ಸಮೀರ್ ಎಂ.ಡಿ. ವಿಚಾರಣೆ ಬೆಳ್ತಂಗಡಿ ಠಾಣೆಯಲ್ಲಿ ಸೋಮವಾರ ನಿರಂತರ ಆರೂವರೆ ತಾಸು ನಡೆದಿದೆ. ಎರಡನೇ ದಿನದ ವಿಚಾರಣೆಗೆ ವಕೀಲರನ್ನು ಜತೆ ಕರೆತಂದಿದ್ದು ಠಾಣೆಯ ಮೆಟ್ಟಲೇರಿದ್ದಾರೆ. ತನಿಖೆಯನ್ನು ತನಿಖಾಧಿಕಾರಿ ನಾಗೇಶ್ ಕದ್ರಿ ಕೈಗೆತ್ತಿಕೊಂಡಿದ್ದಾರೆ. ಇನ್ನೊಬ್ಬ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರೂ ತನಿಖೆಗೆ ಸೇರಿಕೊಂಡಿದ್ದಾರೆ.
ಮೊದಲಿಗೆ ಅಧಿಕಾರಿಗಳು ಸಮೀರ್ನ ಯೂಟ್ಯೂಬ್ ಆದಾಯದ ಮೂಲದತ್ತ ವಿಚಾರಿಸಿದ್ದಾರೆ. ಪ್ರಕರಣದ ತನಿಖೆಗೆ ಬಹಳ ಮುಖ್ಯವಾದ ಹಣಕಾಸು ಸಾಕ್ಷ್ಯ ಸಂಗ್ರಹದ ದಾಖಲೆ ತಪಾಸಣೆಗೆ ಅನುವಾಗಿದ್ದಾರೆ. ವಿಡಿಯೋ ಮಾಡಿದ ಉದ್ದೇಶ 'ಹಣಕಾಸು ಲಾಭ' ಆಗಿದೆಯೇ ಎಂದು ಪತ್ತೆ ಮಾಡಿದ್ದಾರೆ. ಹೆಚ್ಚಿನ ಅದಾಯಕ್ಕಾಗಿ ತಪ್ಪು ಹಾಗೂ ಸುಳ್ಳು ವಿಷಯ ಹಂಚಿದ್ದಾನೆಯೇ ಎಂದು ದೃಢಪಡಿಸಿಕೊಂಡಿದ್ದಾರೆ.
ಯೂಟ್ಯೂಬ್, ಗೂಗಲ್ ಮೂಲಕ ಬಂದ ಆದಾಯ, ಬ್ಯಾಂಕ್ ಖಾತೆಗೆ ಟ್ರಾನ್ಸ್ಫರ್ ಆದ ಹಣದ ದಾಖಲೆಯನ್ನು ಪರಿಶೀಲಿಸಿ ದಾಖಲಿಸಿಕೊಂಡಿದ್ದಾರೆ. ಸಿಕ್ಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಚಾನಲ್ನ್ನು ಸಮೀರ್ ಆರಂಭಿಸಿದ್ದಾ ಅಥವಾ ಯಾರಾದರೂ ಜತೆಯಾಗಿ ನಡೆಸುತ್ತಿದ್ದಾರಾ? ಚಾನಲ್ ಆಡ್ ಸೆನ್ಸ್ ಯಾರ ಹೆಸರಿನಲ್ಲಿದೆ? ಯೂಟ್ಯೂಬ್ ಚಾನಲ್ನಿಂದ ತಿಂಗಳಿಗೆ ಸರಾಸರಿ ಎಷ್ಟು ಆದಾಯ ಬರುತ್ತದೆ ಎಂಬ ವಿವರವನ್ನು ಕಲೆ ಹಾಕಿದ್ದಾರೆ.
2025ರ ಜುಲೈ ತಿಂಗಳಲ್ಲಿ ಈ ವೀಡಿಯೊ ಪಬ್ಲಿಷ್ ಆದ ನಂತರ ಆದಾಯದಲ್ಲಿ ಏರಿಕೆ ಕಂಡಿದ್ದು, ಅದರ ಮಾಹಿತಿ, ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂಬ ವಿವರಗಳನ್ನು ನಮೂದಿಸಿಕೊಂಡಿದ್ದಾರೆ. 'ಧೂತ' ಚಾನಲ್ಗೆ ಯಾವುದೇ ರಾಜಕೀಯ/ಸಾಮಾಜಿಕ ಸಂಘಟನೆಗಳಿಂದ ಹಣಕಾಸು ಸಹಾಯ ಸಿಕ್ಕಿದೆಯೇ ಎಂಬ ವಿವರಗಳನ್ನೂ ದಾಖಲಿಸಿಕೊಂಡಿದ್ದಾರೆ.
ಎಸ್ಐಟಿ ತನಿಖೆಗೆ ಮೊದಲೇ ಅನಾಮಿಕನ ಗುರುತು ಪತ್ತೆ, ಸಾವಿರಾರು ಕೊಲೆಗಳಾಗಿವೆ, ಕ್ಷೇತ್ರ ವಿರುದ್ಧ ಜನ ದಂಗೆ ಏಳುವಂತೆ ಪ್ರಚೋದನಕಾರಿ ವಿಡಿಯೋ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣದಡಿ ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 6.30ರವರೆಗೆ ವಿಚಾರಣೆ ನಡೆಯಿತು.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ದಾಖಲೆಗಳ ಮೂಲಕ ವಿಚಾರಣೆ ನಡೆಸಿದ್ದು, ಈ ವೇಳೆ ಸಮೀರ್ನ ಧ್ವನಿಯನ್ನು ತಜ್ಞರ ಸಮ್ಮುಖದಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಮತ್ತೆ ಅಗತ್ಯ ಇದ್ದರೆ ವಿಚಾರಣೆಗೆ ಬರಲು ತಿಳಿಸಿ ನೋಟಿಸ್ ನೀಡಿ ಸೂಚನೆ ಕೊಟ್ಟು ದಾಖಲೆಗಳಿಗೆ ಸಹಿ ಪಡೆದು ಕಳುಹಿಸಿದ್ದಾರೆ.
ಸಮೀರ್ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಮತ್ತು ಮೊಬೈಲ್ ವಶಕ್ಕೆ ಪಡೆಯಲು ಬಾಕಿ ಇರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
In a significant development in the Dharmasthala skull case, YouTuber Sameer MD underwent intense interrogation for over six and a half hours at the Belthangady Police Station on Monday. He appeared with his legal team for the second consecutive day of questioning, as part of the ongoing probe into the controversial video that sparked outrage and prompted an SIT investigation.
12-05-26 02:26 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 04:04 pm
HK News Staffer
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am