ಬ್ರೇಕಿಂಗ್ ನ್ಯೂಸ್
26-08-25 10:36 am Mangalore Correspondent ಕರಾವಳಿ
ಬೆಳ್ತಂಗಡಿ, ಆ.26 : ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರನನ್ನೇ ಬಂಧಿಸಿರುವ ಎಸ್ಐಟಿ ಅಧಿಕಾರಿಗಳು ಆತನನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿಸಿ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆಯೇ, ಆರೋಪಿಗೆ ಆಶ್ರಯ ಕೊಟ್ಟಿರುವವರ ಮನೆಯನ್ನು ಪೊಲೀಸರು ಶೋಧಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದಿರುವ ಪೊಲೀಸರು ಆರೋಪಿಗೆ ಆಶ್ರಯ ನೀಡಿದ್ದ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಂದು ಬೆಳಗ್ಗೆಯೇ ದೂರುದಾರ ಕಂ ಆರೋಪಿ ಚಿನ್ನಯ್ಯನನ್ನು ಮಹೇಶ್ ಶೆಟ್ಟಿ ಅವರ ತಿಮರೋಡಿ ಗ್ರಾಮದ ಮನೆಗೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.
ಆಶ್ರಯ ಕೊಟ್ಟ ಸಂದರ್ಭದಲ್ಲಿನ ಸಾಕ್ಷ್ಯಗಳನ್ನು ಸಂಗ್ರಹ ಮಾಡಲಿದ್ದಾರೆ. ಇದಕ್ಕಾಗಿ ಪುತ್ತೂರು, ಬೆಳ್ತಂಗಡಿಯಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಈ ವೇಳೆ, ಮಾಧ್ಯಮದವರನ್ನು ಎರಡು ಕಿಮೀ ದೂರದಲ್ಲೇ ತಡೆಯಲಾಗಿದೆ. ಧರ್ಮಸ್ಥಳ ತನಿಖೆ ಆರಂಭಗೊಂಡ ಸಂದರ್ಭದಲ್ಲಿ ಚಿನ್ನಯ್ಯನಿಗೆ ಮಹೇಶ್ ಶೆಟ್ಟಿ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್ದಾರೆ ಎನ್ನಲಾಗುತ್ತಿದ್ದು ಈ ಕಾರಣದಿಂದ ಎಸ್ಐಟಿ ತನಿಖೆ ಶುರು ಮಾಡಿದೆ. ಈಗಾಗಲೇ ಆರೋಪಿ ಚಿನ್ನಯ್ಯನನ್ನು ಬಂಧಿಸಿದ್ದು ಸಂಪೂರ್ಣ ವಿಚಾರಣೆ ನಡೆಸಿದೆ. ಆಶ್ರಯ ಕೊಟ್ಟವರು ಯಾರು, ಷಡ್ಯಂತ್ರ ರೂಪಿಸಿದ್ದು ಯಾರು, ತಲೆಬುರುಡೆ ತಂದು ಕೊಟ್ಟಿದ್ದು ಯಾರು ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಪಡೆದಿದೆ.
ಇದರಂತೆ, ಎಸ್ಐಟಿ ತನಿಖೆ ಮುಂದುವರಿಯುವ ಸಾಧ್ಯತೆಗಳಿದ್ದು ಈ ಕಾರಣಕ್ಕೆ ಮಹೇಶ್ ಶೆಟ್ಟಿ, ಗಿರೀಶ್ ಮಟ್ಟೆಣ್ಣನವರ್ ಸೇರಿದಂತೆ ಹೋರಾಟ ತಂಡದ ಸದಸ್ಯರನ್ನು ಪೊಲೀಸರು ಮತ್ತೆ ಬಂಧಿಸುವ ಸಾಧ್ಯತೆ ಅಲ್ಲಗಳೆಯಲಾಗದು.
In the Dharmasthala case, the SIT, which recently arrested the complainant Chinnayya and turned him into an accused, has now expanded its probe to those who allegedly sheltered him. Acting on a search warrant issued by the Beltangady court, SIT officials today raided the house of activist Mahesh Shetty of Timarodi, known for supporting Soujanya’s cause. This morning, the SIT brought accused Chinnayya to Mahesh Shetty’s residence and conducted a spot inspection
18-02-26 09:02 pm
HK Desk
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್...
17-02-26 10:33 pm
Mohan Das Pai: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾ...
17-02-26 09:12 pm
ಫೇಲಾದವರನ್ನು ಪಾಸು ಮಾಡುವುದೇ ತಪ್ಪು ; ಕೇರಳದಲ್ಲಿ ಶ...
17-02-26 08:56 pm
17-02-26 08:50 pm
HK Desk
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
18-02-26 11:24 pm
Mangaluru Staffer
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ್ ಔಟ್ ಪೋಸ್ಟ್...
18-02-26 10:46 pm
MIR Group, Mangalore: ಮಂಗಳೂರಿನಲ್ಲಿ ಇಟಲಿಯ ಮೀರ್...
18-02-26 10:24 pm
CA Raghavendra Rao, Death: ಶ್ರೀನಿವಾಸ ಸಮೂಹ ಶಿಕ...
18-02-26 11:19 am
Parameshwara in Mangalore: ಶಾಸಕರು ವಿದೇಶಕ್ಕೆ ತ...
17-02-26 12:42 pm
18-02-26 09:16 pm
Mangaluru Staffer
Mangalore Shivabagh Suicide: ಕೈ ಕೊಯ್ದುಕೊಂಡು ರ...
18-02-26 07:42 pm
Hassan Murder: ಆಸ್ತಿ ವಿಚಾರಕ್ಕೆ ತಕರಾರು, ಕೋರ್ಟ್...
18-02-26 07:10 pm
ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ, ಹಡಗುಗಳ ರಹಸ್ಯ ಮಾ...
18-02-26 01:52 pm
ಬೆಚ್ಚಿಬೀಳಿಸಿದ ಎಂಬಿಎ ವಿದ್ಯಾರ್ಥಿನಿ ಹತ್ಯೆ ಪ್ರಕರಣ...
17-02-26 03:03 pm