ಬ್ರೇಕಿಂಗ್ ನ್ಯೂಸ್
27-08-25 11:02 pm Mangalore Correspondent ಕರಾವಳಿ
ಮಂಗಳೂರು, ಆ.27 : ಅಂತಾರಾಷ್ಟ್ರೀಯ ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ಬೆಳ್ತಂಗಡಿಗೆ ಬಂದು ಡ್ರಾಮಾ ಸೃಷ್ಟಿಸಿರುವ ಹುಬ್ಬಳ್ಳಿಯ ರೌಡಿಶೀಟರ್ ಮದನ್ ಮುಗಡಿ ಮತ್ತು ಬೆಂಗಳೂರಿನ ಪ್ಯಾಸ್ಟರ್ ಜಾನ್ ಶೈಮನ್ ವಿರುದ್ಧ ಭಾರೀ ಟೀಕೆ ಕೇಳಿಬಂದಿದೆ. ತಮ್ಮ ಬಗ್ಗೆ ಟೀಕೆ ಕೇಳಿಬರುತ್ತಲೇ ಜಾನ್ ಶೈಮನ್, ತನ್ನ ಕ್ರೈಸ್ತ ಬಳಗದವರನ್ನು ಉದ್ದೇಶಿಸಿ ಯೂಟ್ಯೂಬ್ ನಲ್ಲಿ ವಿಡಿಯೋ ಬಿಟ್ಟಿದ್ದಾನೆ.
ಮದನ್ ಮುಗಡಿ ಹಿಂದೆ ರೌಡಿಸಂ ಮಾಡುತ್ತಿದ್ದರೂ, ಈಗ ಅಪರಾಧ ಚಟುವಟಿಕೆಯಿಂದ ದೂರ ಇರುವುದಲ್ಲದೆ, ಕ್ರಿಶ್ಚಿಯನ್ ಆಗಿ ಮತಾಂತರ ಆಗಿದ್ದಾರೆ. ನಮ್ಮಲ್ಲಿ ಸನ್ನಡತೆಯಿಂದ ನಡೆದುಕೊಳ್ಳುವುದಾಗಿ ಮತ್ತು ಆಯೋಗದ ಸದಸ್ಯನೆಂದು ಪ್ರಮಾಣವಚನ ಸ್ವೀಕರಿಸಿದ್ದಾನೆ. ಆದರೆ ಕೆಲವು ಸುದ್ದಿ ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ವಿನಾಕಾರಣ ಸುದ್ದಿ ಪ್ರಸಾರಿಸಿ ಮಾನಹಾನಿ ಮಾಡಲಾಗಿದೆ. ನಮ್ಮ ವಿರುದ್ಧ ಸುದ್ದಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಈ ವಿಡಿಯೋದಲ್ಲಿ ತಿಳಿಸಿದ್ದಾನೆ.

ಅಲ್ಲದೆ, ಈ ಸುದ್ದಿಯನ್ನು ಯಾರೂ ನಂಬಬೇಡಿ. ಸಮಾಜದಲ್ಲಿ ಶೋಷಿತರು, ದಲಿತರು, ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾದವರು, ಧ್ವನಿ ಇಲ್ಲದವರ ಪರವಾಗಿ ಧ್ವನಿ ಎತ್ತಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಆಯೋಗ ಮಾಡಿದ್ದೆವು. ನಮ್ಮ ಸಂಘಟನೆ ಕೇಂದ್ರ ಸರ್ಕಾರದ ನೀತಿ ಆಯೋಗದಲ್ಲಿ ರಿಜಿಸ್ಟರ್ ಆಗಿದ್ದು ಸರ್ಕಾರದ ನಿಯಮಗಳ ಪ್ರಕಾರವೇ ಕೆಲಸ ಮಾಡುತ್ತಿದೆ. ಯಾರೋ ಒಬ್ಬರು ಫೋನ್ ಕರೆ ಮಾಡಿದ್ದಕ್ಕೆ ಬೆಳ್ತಂಗಡಿಗೆ ಹೋಗಿದ್ದೆವು, ಅಲ್ಲಿ ಬೇರಾವುದೇ ಅಪಚಾರ ಮಾಡಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ವಿಡಿಯೋದಲ್ಲಿ ಹೆಡ್ ಲೈನ್ ಕರ್ನಾಟಕದಲ್ಲಿ ಬಂದಿರುವ ಸುದ್ದಿ ತುಣುಕನ್ನೂ ಹಾಕ್ಕೊಂಡಿದ್ದಾನೆ.

ಮಟ್ಟೆಣ್ಣನವರ್ ವಿರುದ್ದ ಆಯೋಗಕ್ಕೆ ದೂರು
ಇದೇ ವೇಳೆ, ಬೆಂಗಳೂರಿನ ಸುರೇಶ್ ಗೌಡ ಎಂಬವರು ಗಿರೀಶ್ ಮಟ್ಟೆಣ್ಣನವರ್ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ರೌಡಿಯೊಬ್ಬನನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿಯೆಂದು ಗಿರೀಶ್ ಮಟ್ಟೆಣ್ಣನವರ್ ಮಾಧ್ಯಮ ಮತ್ತು ಧರ್ಮಸ್ಥಳ ಪೊಲೀಸರ ಮುಂದೆ ಹೇಳಿಕೊಂಡಿದ್ದು ಆಮೂಲಕ ಇಲಾಖೆಯ ಹೆಸರನ್ನು ದುರುಪಯೋಗ ಪಡಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.
Madan Bugadi, a known rowdy-sheeter from Hubballi who has reportedly converted to Christianity, and Pastor John Shaiman from Bengaluru are now facing severe criticism for allegedly staging a “drama” in Belthangady under the banner of the International Human Rights Commission. In response to growing backlash, Pastor John Shaiman released a video on YouTube addressing his Christian followers. In the video, he defended Madan Bugadi, stating that although he had a criminal past, he has since reformed, embraced Christianity, and taken an oath as a member of their commission.
31-03-26 10:13 am
HK News Staffer
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
31-03-26 11:00 pm
HK News Staffer
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
31-03-26 10:06 pm
HK News Desk
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
31-03-26 11:11 am
HK News Staffer
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm