ಬ್ರೇಕಿಂಗ್ ನ್ಯೂಸ್
28-08-25 08:31 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.28 : ಧರ್ಮಸ್ಥಳ ಹೆಣ ಹೂತ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಚಿನ್ನಯ್ಯನನ್ನು ಸಾಕ್ಷಿಯಾಗಿಸಿ ತನಿಖೆ ನಡೆಸಬೇಕೆಂದು ಆಕೆಯ ತಾಯಿ ಕುಸುಮಾವತಿ ದೂರು ನೀಡಿದ್ದಾರೆ. ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಭೇಟಿ ನೀಡಿದ ಕುಸುಮಾವತಿ, ಈ ಬಗ್ಗೆ ದೂರು ನೀಡಿದ್ದಾರೆ.
ಸದ್ಯ ಎಸ್ಐಟಿ ವಶದಲ್ಲಿರುವ ಚಿನ್ನಯ್ಯ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸೌಜನ್ಯಾ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾನೆ. ಈತನ ಹೇಳಿಕೆ ವೈರಲ್ ಆಗಿದ್ದು ಈ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಸಾಕ್ಷಿಯಾಗಿ ಪರಿಗಣಿಸಿ ಮರು ತನಿಖೆ ಮಾಡಬೇಕೆಂದು ಕುಸುಮಾವತಿ ಕೇಳಿಕೊಂಡಿದ್ದಾರೆ.
'ತಾನು ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ 2012 ರಲ್ಲಿ ಸೌಜನ್ಯ ಹತ್ಯೆ ಘಟನೆ ಆಗಿತ್ತು. ಆಕೆಯ ಹೆಣ ಹೊತ್ತುಕೊಂಡು ಹೋಗುವುದನ್ನು ನೋಡಿದ್ದೆ. ದೇವಸ್ಥಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ರವಿ ಪೂಜಾರಿ ಎನ್ನುವವರು, ಸೌಜನ್ಯಾ ಅತ್ಯಾಚಾರವನ್ನು ಇಂಥವರೇ ಮಾಡಿದ್ದರು ಎಂದು ಹೇಳುತ್ತಿದ್ದರು. ಆನಂತರ, ರವಿಯನ್ನು ಕೂಡ ದೇವಸ್ಥಾನ ಕಚೇರಿಯಲ್ಲಿ ಕೊಲ್ಲಲಾಗಿತ್ತು. ಅಲ್ಲದೆ, ಸೌಜನ್ಯಾ ಹೆಣ ಸಿಕ್ಕಿದ್ದ ಮಣ್ಣಸಂಕ ಎಂಬಲ್ಲಿ ಹಲವಾರು ಶವಗಳನ್ನು ಹೂತಿದ್ದೇನೆ. ಹೆಚ್ಚಿನ ಮಹಿಳೆಯರ ಹೆಣಗಳು ನಗ್ನವಾಗಿರುತ್ತಿದ್ದವು. ಕೆಲವು ಶವ ಕೊಳೆತು ಹೋಗಿದ್ದವು. ಪೋಸ್ಟ್ ಮಾರ್ಟಂ ಆಗಿಲ್ಲದಿದ್ದರೂ ಮೇಲ್ವಿಚಾರಕರ ಸೂಚನೆಯಂತೆ ನಾವು ಶವಗಳನ್ನು ಹೂಳಬೇಕಿತ್ತು. ಸೌಜನ್ಯಾ ಪ್ರಕರಣ ನಡೆದ ಬಳಿಕ ಪ್ರಾಣ ಭೀತಿಯಿಂದಾಗಿ ಧರ್ಮಸ್ಥಳ ಬಿಟ್ಟು ಹೋಗಿದ್ದೆ ಎಂದು ಸಂದರ್ಶನದಲ್ಲಿ ಚಿನ್ನಯ್ಯ ಹೇಳಿಕೊಂಡಿದ್ದಾನೆ. ಬಂಧನ ಆಗೋದಕ್ಕು ಮೊದಲು ರೆಕಾರ್ಡ್ ಮಾಡಿರುವ ಸಂದರ್ಶನದ ವಿಡಿಯೋವನ್ನು ಈಗ ಪ್ರಸಾರ ಮಾಡಲಾಗಿದೆ.
ಸೌಜನ್ಯಾ ಪ್ರಕರಣದಲ್ಲಿ ಚಿನ್ನಯ್ಯನನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಕುಸುಮಾವತಿ ತನ್ನ ದೂರಿನಲ್ಲಿ ಹೇಳಿದ್ದಾರೆ. ದೂರನ್ನು ಸ್ವೀಕರಿಸಿರುವ ಎಸ್ಐಟಿ ತಂಡದ ಎಸ್ಪಿ ಹಿಂಬರಹ ನೀಡಿದ್ದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಅಸಹಜ ಸಾವುಗಳ ಕುರಿತು ತನಿಖೆ ನಡೆಯುತ್ತಿದ್ದು ಪರಿಶೀಲಿಸಿ ಸೂಕ್ತ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದಾಗಿ ಭಾರೀ ಸಂಚಲನ ಮೂಡಿಸಿರುವ ಸೌಜನ್ಯಾ ಪ್ರಕರಣದ ಬಗ್ಗೆಯೂ ಎಸ್ಐಟಿ ತನಿಖೆ ನಡೆಸುತ್ತಾ ಎಂಬ ಕುತೂಹಲ ಮೂಡುವಂತೆ ಮಾಡಿದೆ. ಸೌಜನ್ಯಾ ಪ್ರಕರಣ ನಡೆದು 13 ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಹಾಗಾಗಿ, ಘಟನೆ ಸಂದರ್ಭ ಸಾಕ್ಷಿಗಾರನಾಗಿದ್ದ ಚಿನ್ನಯ್ಯನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಕುಸುಮಾವತಿ ದೂರಿನಲ್ಲಿ ಒತ್ತಾಯಿಸಿದ್ದಾರೆ.
In a fresh development in the Soujanya murder case, Kusumavathi, mother of the victim, has filed a complaint with the Special Investigation Team (SIT), urging them to treat Chinnayya as a key witness and reopen the probe based on his recent revelations.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 11:22 am
HK News Staffer
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm