ಬ್ರೇಕಿಂಗ್ ನ್ಯೂಸ್
29-08-25 08:13 pm Mangalore Correspondent ಕರಾವಳಿ
ಮಂಗಳೂರು, ಆ.29: ಕೊಂಕಣಿ ಸಾಹಿತ್ಯ, ಕಲಾ ಸಂಘಟಕ, ಮಾಂಡ್ ಸೊಭಾಣ್ ಸಂಸ್ಥೆಯ ಸ್ಥಾಪಕ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಕೊಂಕಣಿ ಭಾಷಾ ಚಳವಳಿಯ ಹರಿಕಾರ, ವಿಶ್ವ ಕೊಂಕಣಿ ಕಲಾರತ್ನ ಎಂಬ ಬಿರುದು ಪಡೆದಿದ್ದ ಎರಿಕ್ ಅಲೆಕ್ಸಾಂಡರ್ ಒಝಾರಿಯೋ(76) ಇನ್ನಿಲ್ಲ.
ಕೆಲವು ವರ್ಷಗಳಿಂದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಡಯಾಲಿಸಿಸ್ ಚಿಕಿತ್ಸೆ ಮಾಡಲಾಗಿತ್ತು. ಕಳೆದ 18 ದಿನಗಳಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಗಸ್ಟ್ 29ರಂದು ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಒಜಾರಿಯೋ ಅವರು ಪತ್ನಿ ಜೋಯ್ಸ್, ಮಗಳು ರಶ್ಮಿ ಕಿರಣ್, ಮಗ ರಿತೇಶ್ ಕಿರಣ್ ಅವರನ್ನು ಅಗಲಿದ್ದಾರೆ.

ಮೃತದೇಹವನ್ನು ಆಗಸ್ಟ್ 31ರಂದು ಕಲಾಂಗಣ್ ನಲ್ಲಿ ಅಂತಿಮ ನಮನಕ್ಕೆ ಇರಿಸಲಾಗುವುದು. ವೆಲೆನ್ಸಿಯಾ ಸೈಂಟ್ ವಿನ್ಸೆಂಟ್ ಚರ್ಚ್ ನಲ್ಲಿ ಮಾಸ್ ನಡೆಸಲಿದ್ದು ಅಂದು ಸಂಜೆ ಬೋಳೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಕೊಂಕಣಿ ಸಂಗೀತ ಸಂಯೋಜಕ, ಸಾಂಸ್ಕೃತಿಕ ಕಾರ್ಯಕರ್ತ, ಟ್ರೇಡ್ ಯೂನಿಯನ್ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಎರಿಕ್ ಒಜಾರಿಯೋ ಮಂಗಳೂರಿನಲ್ಲಿ ಕೊಂಕಣಿ ಸಾಂಸ್ಕೃತಿಕ ಚಳವಳಿ ಹುಟ್ಟುಹಾಕಿದ್ದರು. ಕೊಂಕಣಿ ಸಂಸ್ಕೃತಿ, ಸಂಗೀತ ಚಳವಳಿ ಉದ್ದೇಶಕ್ಕಾಗಿ 1986ರಲ್ಲಿ ಮಂಗಳೂರಿನಲ್ಲಿ ಮಾಂಡ್ ಸೋಭಾಣ್ ಎಂಬ ಹೊಸ ಪ್ರತಿಷ್ಠಾನ ಸ್ಥಾಪನೆ ಮಾಡಿದ್ದರು. ಕೊಂಕಣಿ ಪರಂಪರೆಯ ಕೇಂದ್ರವಾದ ಕಲಾಂಗಣ್ ಕೂಡ ಅವರ ಗರಡಿಯಲ್ಲೇ ಸ್ಥಾಪನೆಗೊಂಡಿತ್ತು. ಕರ್ನಾಟಕ ರಾಜ್ಯದಲ್ಲಿ ಶಾಲಾ ಶಿಕ್ಷಣದಲ್ಲಿ ಕೊಂಕಣಿಯನ್ನು ಐಚ್ಛಿಕ ಭಾಷೆಯಾಗಿ ಅಂಗೀಕರಿಸುವಲ್ಲಿ ಒಜಾರಿಯೊ ಪ್ರಮುಖ ಪಾತ್ರ ವಹಿಸಿದರು. ದೇಶ ವಿದೇಶದಲ್ಲಿ 200ಕ್ಕು ಹೆಚ್ಚು ಮಾಂಡ್ ಸೊಭಾಣ್ ಕಾರ್ಯಕ್ರಮ ನೀಡಿದ್ದರು.ಅಲ್ಲದೆ, ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಕೊಟ್ಟು ಜನರಿಗೆ ಹತ್ತಿರವಾಗಿಸಿದ್ದರು.
2005-08ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗಲೂ ಹಲವಾರು ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಲ್ಲದೆ, ಜಗತ್ತಿನಾದ್ಯಂತ ಇರುವ 145 ಕೊಂಕಣಿ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತರುವಲ್ಲಿ ಶ್ರಮಿಸಿದ್ದರು. ಗೋವಾದಿಂದ ಮಂಗಳೂರು ವರೆಗಿನ ಕರಾವಳಿಯಲ್ಲಿ ಕುಡುಬಿ, ಸಿದ್ಧಿ, ಖಾರ್ವಿ ಜನಾಂಗ ಮಾತನಾಡುವ ಕೊಂಕಣಿಗರ ಜನಪದ, ಸಾಹಿತ್ಯಗಳನ್ನು ಒಂದೇ ವೇದಿಕೆಗೆ ತಂದು ಅವುಗಳ ಮಧ್ಯ ಸಾಂಸ್ಕೃತಿಕ ಸಂಬಂಧ ಏರ್ಪಡುವಂತೆ ಮಾಡಿದ್ದರು. 1993ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದ ಅವರು, ದೂರದರ್ಶನ ಸೇರಿದಂತೆ ವಿವಿಧ ಕಡೆ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರಿಂದ ದೇಶ- ವಿದೇಶದಲ್ಲಿ ಗೌರವ, ಅಭಿಮಾನಿಗಳನ್ನು ಪಡೆದಿದ್ದರು.
Mangalore Renowned Konkani cultural activist, music composer, and founder of Mandd Sobhann, Eric Alexander Ozario, passed away on Thursday at the age of 76. He was a key force in uniting Konkani-speaking communities across India and abroad through his music and cultural initiatives.
22-07-26 06:00 pm
HK News Staffer
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 04:21 pm
HK News Staffer
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm