ಬ್ರೇಕಿಂಗ್ ನ್ಯೂಸ್
02-09-25 10:26 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.2 : ಧರ್ಮಸ್ಥಳ ಪ್ರಕರಣ ಮತ್ತೆ ತಿರುವು ಪಡೆಯುತ್ತಿದ್ದು, ಅಲ್ಲಿ ವಿವಿಧ ಕಾರಣಕ್ಕೆ ಹತ್ಯೆಗೀಡಾದವರ ಸಮಾಧಿ ತೋರಿಸಲು ಸಿದ್ಧ ಎಂದು ಧರ್ಮಸ್ಥಳ ಗ್ರಾಮಸ್ಥರು ಎನ್ನಲಾದ ಗುಂಪೊಂದು ವಿಶೇಷ ತನಿಖಾ ತಂಡಕ್ಕೆ ಪತ್ರ ಬರೆದಿದೆ. ಆಮೂಲಕ ದೂರುದಾರನ ಜಾಗಕ್ಕೆ ಹೊಸಬರು ಎಂಟ್ರಿಯಾಗಿದ್ದಾರೆ.
ಗ್ರಾಮಸ್ಥರ ಪರವಾಗಿ ಧರ್ಮಸ್ಥಳ ನಿವಾಸಿ ತುಕಾರಾಮ ಗೌಡ ಎಂಬವರು ಎಸ್ಐಟಿಗೆ ಪತ್ರ ಸಲ್ಲಿಸಿದ್ದಾರೆ. ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ನಾವು ಭಯದಲ್ಲಿ ಬದುಕುವಂತಾಗಿದೆ. ಆದರೆ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಸ್ಐಟಿ ರಚಿಸಿರುವುದು ನಮ್ಮ ವಿಶ್ವಾಸ ಹೆಚ್ಚುವಂತೆ ಮಾಡಿದೆ. ಮಾಧ್ಯಮಗಳಲ್ಲಿ ತೋರಿಸಿರುವ ವ್ಯಕ್ತಿಯನ್ನು ನಾವು ಗುರುತಿಸಿದ್ದೇವೆ. ಆತ ವಿವಿಧ ಸ್ಥಳಗಳಿಗೆ ಶವಗಳನ್ನು ಸಾಗಿಸಿ, ಹೂತು ಹಾಕಿರುವುದನ್ನು ನೋಡಿದ್ದೇವೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಶವ ಹೂತ ಘಟನೆಗಳು ರಹಸ್ಯವಾಗಿ ನಡೆದಿದ್ದರೂ, ಹಳ್ಳಿ ಜನರಿಗೆ ತಿಳಿಯದ ವಿಷಯವಲ್ಲ. ಅಸ್ಥಿಪಂಜರಗಳನ್ನು ಹೂತಿರುವುದಾಗಿ ಸಾಕ್ಷಿದಾರ ವ್ಯಕ್ತಿ ಮೊದಲಿಗೆ ಹೇಳಿದ್ದ. ಆದರೆ, ನಂತರ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾನೆಂದು ಮಾಧ್ಯಮಗಳು ವರದಿ ಮಾಡಿವೆ. ಆತ ತನ್ನ ಹೇಳಿಕೆಯನ್ನೇಕೆ ಹಿಂತೆಗೆದುಕೊಂಡ ಎಂಬುದು ಗೊಂದಲ ಸೃಷ್ಟಿಸುತ್ತಿದೆ.
ಆ ವ್ಯಕ್ತಿ ಜನಸಂಚಾರ ಕಡಿಮೆ ಇರುವ ಜಾಗಗಳನ್ನು ಆರಿಸಿಕೊಂಡು ಶವಗಳನ್ನು ಹೂಳುತ್ತಿದ್ದ. ಅವನು ಹೇಳಿದ ಸ್ಥಳಗಳಿಗೆ ಹೋಗಿ ಶೋಧ ಕಾರ್ಯ ನಡೆಸಲು ಎಸ್ಐಟಿಗೆ ನಾವು ಸಹಕರಿಸುತ್ತೇವೆ. ಸಮಾಧಿ ಮಾಡಿದ ಸ್ಥಳಗಳನ್ನು ಎಸ್ಐಟಿಗೆ ತೋರಿಸಲು ನಾವು ಸಿದ್ಧರಿದ್ದೇವೆ. ಸತ್ಯ ಮತ್ತು ನ್ಯಾಯಕ್ಕಾಗಿ ಎಸ್ಐಟಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧರಿದ್ದೇವೆಂದು ಪತ್ರದಲ್ಲಿ ತಿಳಿಸಿದ್ದಾರೆ.
The sensational Dharmasthala case has taken yet another dramatic turn, with a group of locals claiming they are willing to show the locations where bodies of murder victims were allegedly buried. A letter submitted to the Special Investigation Team (SIT) by a resident of Dharmasthala has brought new allegations and witnesses into the spotlight.
22-07-26 06:00 pm
HK News Staffer
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 04:21 pm
HK News Staffer
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm