ಬ್ರೇಕಿಂಗ್ ನ್ಯೂಸ್
09-09-25 05:59 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.9 : ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಇಂದು ಬೆಳ್ತಂಗಡಿ ಕಚೇರಿಯಲ್ಲಿ ಕೇರಳದ ಯೂಟ್ಯೂಬರ್ ಮುನಾಫ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ನೋಟಿಸ್ ಜಾರಿಗೊಳಿಸಿದ್ದಕ್ಕೆ ಮುನಾಫ್ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದು ವಿಚಾರಣೆಗೆ ಒಳಗಾಗಿದ್ದಾರೆ.
ವಿಚಾರಣೆ ಮುಗಿಸಿದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಮಾತನಾಡಿದ ಮುನಾಫ್, ನೀವು ಹೇಳಿದ ರೀತಿಯಲ್ಲಿ ಎಸ್ಐಟಿ ತನಿಖೆ ನಡೆಯೋದಿಲ್ಲ. ಸುಜಾತಾ ಭಟ್, ಅನನ್ಯಾ ಬಗ್ಗೆ ತನಿಖೆ ಇರೋದಲ್ಲ. ದೂರುದಾರ 164 ಹೇಳಿಕೆಯಡಿ ನೀಡಿರುವ ಮಾಹಿತಿ ಆಧರಿಸಿ ಎಸ್ಐಟಿ ರಚನೆಯಾಗಿದ್ದು, ಅದರಲ್ಲಿರುವ ಎಲ್ಲ ವಿಚಾರವನ್ನೂ ತನಿಖೆ ನಡೆಸುತ್ತಾರೆ. ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ, ಅದಕ್ಕೆ ಉತ್ತರ ನೀಡಿದ್ದೇನೆ ಎಂದರು.
ನಾನು ಶಿರೂರಿನಲ್ಲಿ ಗುಡ್ಡ ಕುಸಿತದಿಂದ ನಮ್ಮ ಲಾರಿ ಮುಳುಗಡೆಯಾದಾಗ 72 ದಿನಗಳ ಕಾಲ ಹೋರಾಟ ನಡೆಸಿದ್ದೆ. ಅದಕ್ಕೆ ಮಲಯಾಳದ ಎಲ್ಲ ವಾಹಿನಿಗಳು ಬೆಂಬಲ ನೀಡಿದ್ದವು. ಕೊನೆಗೆ, ನಮ್ಮ ಲಾರಿಯೂ ಸಿಕ್ಕಿತ್ತು. ನಾವು ನಮ್ಮ ಕುಟುಂಬ ಸಾಗರದಲ್ಲಿದ್ದು ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದವನು. ಈಗ ಹತ್ತು ವರ್ಷಗಳಿಂದ ಕೇರಳದಲ್ಲಿ ಸೆಟ್ಲ್ ಆಗಿದ್ದೇನೆ.
ಸೌಜನ್ಯಾ ಪರ ಹೋರಾಟದಲ್ಲಿ ನಾನೂ ಇದ್ದೇನೆ, ಸಾಯೋ ವರೆಗೂ ಹೋರಾಟ ಮಾಡುತ್ತೇನೆ. ಅದರಲ್ಲಿ ಹಿಂಜರಿಕೆ ಇಲ್ಲ. ನಿಮ್ಮ ಕನ್ನಡದ ಟಿವಿಗಳು ನನ್ನನ್ನು ವಿಲನ್ ಮಾಡಿದವು. ಕೇರಳದಿಂದ ಪೊಲೀಸ್ ಭದ್ರತೆಯಲ್ಲಿ ಬರ್ತಾನೆ ಅಂತ ಸುದ್ದಿ ಮಾಡಿದ್ದವು. ಅಂಥ ಅನಿವಾರ್ಯತೆ ನನಗೆ ಬಂದಿಲ್ಲ. ಒಬ್ಬನೇ ಬಂದಿದ್ದೇನೆ, ವಿಚಾರಣೆ ಎದುರಿಸಿ ಹೋಗಿದ್ದೇನೆ. ಕೇರಳದ ಲಿಂಕ್ ಅಂತ ಸುದ್ದಿ ಮಾಡಿದ್ದನ್ನೂ ನೋಡಿದ್ದೇನೆ. ನಾನು ಎರಡು ತಿಂಗಳು ಮೊದಲು ಬಂದಿದ್ದು ಹೌದು. ಸುದ್ದಿ ಮಾಡಿದ್ದೂ ಹೌದು. ನನ್ನ ಪಾಲಿಗೆ ನಾವು ಮಾಡಿದ್ದು ಸುದ್ದಿ ಸತ್ಯ. ಅದು ಸುಳ್ಳು ಅಂತ ನೀವು ಸಾಬೀತು ಮಾಡಿ ಎಂದು ಸವಾಲೆಸೆದರು.
ನೀವು ಸತ್ಯ ತೋರಿಸಿದರೆ ಜನ ನಂಬುತ್ತಾರೆ, ಇಲ್ಲಾಂದ್ರೆ ನಂಬಲ್ಲ ಎಂದೂ ಹೇಳಿದ ಮುನಾಫ್, ಸುಜಾತಾ ಭಟ್ ಬಗ್ಗೆ ಕೇಳಿದ್ದಕ್ಕೆ ಅದೊಂದೇ ಯಾಕೆ ಕೇಳ್ತೀರಿ. ಒಂದೇ ವಿಷಯ ಇರೋದಲ್ಲ ಅಲ್ವಾ ಎಂದು ಪ್ರಶ್ನಿಸಿದರು. ಪದ್ಮಲತಾ, ಸೌಜನ್ಯಾ ಹೀಗೆ ಹಲವಾರು ಜನ ಸತ್ತಿದ್ದಾರೆ. ಅದನ್ನೆಲ್ಲ ನೀವು ಯಾಕೆ ಕೇಳಲ್ಲ ಎಂದು ಪ್ರಶ್ನಿಸಿದರು. ಅದೆಲ್ಲ ತನಿಖೆ ಆಗುತ್ತಾ ಎಂದು ಕೇಳಿದಾಗ, ಎಸ್ಐಟಿ ಸರಿಯಾದ ರೀತಿಯಲ್ಲೇ ತನಿಖೆ ಮಾಡುತ್ತಾರೆ, ಆದರೆ ನೀವು ಅಂದುಕೊಂಡ ರೀತಿ ಇಲ್ಲ. ಸತ್ಯ ಬಂದೇ ಬರುತ್ತದೆ ಎಂದರು.
ನಾಲ್ಕು ದಿನದಿಂದ ಅಭಿಷೇಕ್ ಬಂಧನ ಆಗುತ್ತದೆ, ವಿಠಲ ಗೌಡ ಬಂಧನ ಆಗುತ್ತದೆ ಎಂದು ತೋರಿಸ್ತಿದೀರಿ, ಯಾಕೆ ಇನ್ನೂ ಬಂಧನ ಮಾಡಿಲ್ಲ ಎಂದು ಪ್ರಶ್ನಿಸಿದರು.
Kerala-based YouTuber Munaf, who has been actively commenting on the ongoing Dharmasthala case, appeared before the Special Investigation Team (SIT) at the Belthangady office today for questioning. This follows a notice issued to him two days ago. After the interrogation, Munaf addressed the media and made several bold remarks regarding the investigation and the way he has been portrayed by certain Kannada news channels.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm