ಬ್ರೇಕಿಂಗ್ ನ್ಯೂಸ್
12-09-25 10:58 pm Mangalore Correspondent ಕರಾವಳಿ
ಮಂಗಳೂರು, ಸೆ.12 : ಮೈಕ್, ಧ್ವನಿವರ್ಧಕ ಹೆಸರಲ್ಲಿ ಯಾವುದೇ ಹೊಸ ನಿಯಮ ಹೇರಲಾಗಿಲ್ಲ. ಇರೋ ಕಾನೂನನ್ನೇ ಅನುಷ್ಠಾನ ಮಾಡಿದ್ದೇವೆ. ಅಷ್ಟಮಿ, ಗಣೇಶೋತ್ಸವದಲ್ಲಿ ಧಾರ್ಮಿಕ ಆಚರಣೆ, ಉತ್ಸವಕ್ಕೆ ತೊಂದರೆ ಆಗಿಲ್ಲ. ದಸರಾ ಉತ್ಸವಕ್ಕೂ ಪೊಲೀಸ್ ಇಲಾಖೆ ಅಡ್ಡಿ ಮಾಡುವುದಿಲ್ಲ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಕಮಿಷನರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ, ನೆಹರು ಮೈದಾನದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ರಾತ್ರಿ 3.30ರ ವರೆಗೂ ನಡೆದಿತ್ತು. ಯಾವುದೇ ಹಬ್ಬಗಳ ಸಾರ್ವಜನಿಕ ಆಚರಣೆಗಳಿಗೆ ಪೊಲೀಸ್ ಇಲಾಖೆ ಅಡ್ಡಿ ಪಡಿಸುವುದಿಲ್ಲ. ಆದರೆ ಇತರರಿಗೆ ಸಮಸ್ಯೆಯಾಗದಂತೆ ಶಬ್ಧದ ಮಿತಿಯನ್ನು ಪಾಲಿಸಿ ಆಯೋಜಿಸುವುದು ಸಂಘಟಕರ ಜವಾಬ್ದಾರಿ. ನಾಟಕ, ಯಕ್ಷಗಾನಗಳಿಗೂ ಇದೇ ಮಾರ್ಗಸೂಚಿಯಿದ್ದು, ಎಷ್ಟು ಬೇಕಾದರೂ ಸೌಂಡ್ ಬಳಕೆ ಮಾಡುವ ಅವಕಾಶ ಇಲ್ಲ. ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮಗಳ ವ್ಯಾಪ್ತಿಗೆ ಎಷ್ಟು ಜನ ಸೇರುತ್ತಾರೆ ಎನ್ನುವುದನ್ನು ಆಧರಿಸಿ ಮೈಕ್ ಬಳಕೆ ಮಾಡಲು ಅವಕಾಶ ಇದೆ. ಆದರೆ ಸಂಘಟಕರು ಕಾರ್ಯಕ್ರಮದ ಬಗ್ಗೆ ಸ್ಪಷ್ಟ ವಿವರ ನೀಡಿ ಅನುಮತಿ ಪಡೆದುಕೊಳ್ಳಬೇಕು. ಅದನ್ನು ಉಲ್ಲಂಘಿಸಿದರೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
10 ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ಪತ್ತೆ
ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆ ಬಿಗುಗೊಳಿಸಿದ್ದು, ಒಂದೂವರೆ ತಿಂಗಳ ಅವಧಿಯಲ್ಲಿ 10 ಮಂದಿ ವಿದ್ಯಾರ್ಥಿಗಳು ಸೇರಿದಂತೆ 488 ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ. ಡ್ರಗ್ಸ್ ನಿಯಮಿತ ತಪಾಸಣೆಗೆ 113 ಕಾಲೇಜುಗಳು ಮುಂದೆ ಬಂದಿವೆ. ಅದರಲ್ಲಿ 40 ಕಾಲೇಜುಗಳಲ್ಲಿ ತಪಾಸಣೆ ನಡೆಸಲಾಗಿದ್ದು, 10 ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ಕಂಡುಬಂದಿದೆ. ಸಾರ್ವಜನಿಕವಾಗಿ 1200ಕ್ಕೂ ಅಧಿಕ ಮಂದಿಯ ತಪಾಸಣೆ ನಡೆಸಲಾಗಿದ್ದು, 478 ಮಂದಿ ಡ್ರಗ್ಸ್ ಸೇವಿಸಿರುವುದು ಕಂಡುಬಂದಿದೆ ಎಂದರು.
ಡ್ರಗ್ಸ್ ಸೇವನೆ ಅಥವಾ ಪೂರೈಕೆಗೆ ಸಂಬಂಧಿಸಿ ಪೊಲೀಸರಿಗೆ ಮಾಹಿತಿ ನೀಡಲು ಸಹಾಯವಾಗಲು ಕಾಲೇಜುಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸುವ ಕಾರ್ಯ ನಡೆದಿದೆ. ಇದರಿಂದ ಸಾಕಷ್ಟು ದೂರುಗಳು ಬಂದಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ನೆರವಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದವರು ಹೇಳಿದರು.
ಡ್ರಗ್ಸ್ ಪೆಡ್ಲರ್ ಗಳಿಗೆ ಜಾಮೀನು ಆಗಿಲ್ಲ
ಕಳೆದ ಮೂರು ತಿಂಗಳ ಅವಧಿಯಲ್ಲಿ 37 ಮಂದಿ ಡ್ರಗ್ಸ್ ಪೂರೈಕೆದಾರರನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, ಯಾರಿಗೂ ಜಾಮೀನು ಆಗಿಲ್ಲ. ಎಲ್ಲರೂ ಜೈಲಿನಲ್ಲಿದ್ದಾರೆ. ಕಳೆದ ವರ್ಷ 190 ಜನ ಡ್ರಗ್ಸ್ ಪೂರೈಕೆದಾರರನ್ನು ಬಂಧಿಸಲಾಗಿದ್ದರೆ, ಈ ವರ್ಷ ಈವರೆಗೆ ಒಟ್ಟು 132 ಮಂದಿಯನ್ನು ಬಂಧಿಸಲಾಗಿದೆ ಎಂದವರು ಹೇಳಿದರು. ಗೋಷ್ಠಿಯಲ್ಲಿ ಡಿಸಿಪಿಗಳಾದ ಮಿಥುನ್ ಮತ್ತು ರವಿಶಂಕರ್ ಉಪಸ್ಥಿತರಿದ್ದರು.
There are no new restrictions on the use of mics or loudspeakers during religious or cultural celebrations, clarified Police Commissioner Sudheer Kumar Reddy. The existing rules are simply being enforced, he said. Speaking at a press meet at the Commissioner’s office, he noted that the Ganeshotsav procession at Nehru Maidan went on till 3:30 a.m. without any disruption.
17-10-25 05:27 pm
Bangalore Correspondent
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
ನವೆಂಬರಲ್ಲಿ ಅಧಿಕಾರ ಬಿಡಲು ಹೈಕಮಾಂಡ್ ಹೇಳಿಲ್ಲ, ಸಿದ...
16-10-25 04:44 pm
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
ರಾಜ್ಯದಲ್ಲಿ 800 ಸರಕಾರಿ ಶಾಲೆ ಕರ್ನಾಟಕ ಪಬ್ಲಿಕ್ ಶಾ...
15-10-25 10:59 pm
17-10-25 05:25 pm
HK News Desk
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
16-10-25 10:37 pm
Mangalore Correspondent
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ...
16-10-25 05:09 pm
ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನ ಕೋಗಿಲೆ ದಿನೇಶ...
16-10-25 01:11 pm
Pumpwell Kankandy Road close: ಪಂಪ್ವೆಲ್ - ಕಂಕ...
15-10-25 05:36 pm
17-10-25 03:27 pm
Bangalore Correspondent
Vitla Honeytrap case, Police, Mangalore: ಬಶೀರ...
17-10-25 03:23 pm
ಆತ್ಮಶಕ್ತಿ ಬೆನ್ನಲ್ಲೇ ಒಡಿಯೂರು ಸಹಕಾರಿ ಬ್ಯಾಂಕಿಗೂ...
17-10-25 11:56 am
ಕೆಪಿಸಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಹಲವ...
17-10-25 11:53 am
ಹುಷಾರಿಲ್ಲದ ವೈದ್ಯೆ ಪತ್ನಿಯನ್ನು ಕೈಯಾರೆ ಇಂಜೆಕ್ಷನ್...
15-10-25 04:51 pm