ಬ್ರೇಕಿಂಗ್ ನ್ಯೂಸ್
18-09-25 09:12 pm Mangalore Correspondent ಕರಾವಳಿ
ಉಳ್ಳಾಲ, ಸೆ.18 : ಸಕಾರಾತ್ಮಕ ಚಿಂತನೆ ಇರುವವರು ನಾನು ನಡೆಸಿರುವ ಸಭೆ ಹಾಗೂ ಸುದ್ಧಿಗೋಷ್ಠಿಯನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತಾರೆಯೇ ಹೊರತು ಅದೇ ವಿಚಾರವನ್ನ ಮುಂದಿಟ್ಟು ನಕಾರಾತ್ಮಕವಾಗಿ ಮಾತನಾಡುವವರಿಗೆ ಏನೂ ಮಾಡಲಾಗದು. ಅದು ಅವರ ಪ್ರಬುದ್ಧತೆಯನ್ನ ಪ್ರದರ್ಶಿಸುತ್ತದೆ. ನಾನು ವಿಧಾನಸಭೆಯ ಸಭಾಧ್ಯಕ್ಷನಾಗಿದ್ದರೂ ನನ್ನ ಕ್ಷೇತ್ರ ಮತ್ತು ಜಿಲ್ಲೆಗೆ ಜನಸೇವಕನಾಗಿ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆಂದು ಸ್ಪೀಕರ್ ಯು.ಟಿ.ಖಾದರ್ ಬಿಜೆಪಿ ಟೀಕೆಗೆ ಟಾಂಗ್ ನೀಡಿದ್ದಾರೆ.
ಯು.ಟಿ ಖಾದರ್ ಅವರು ಸ್ಪೀಕರಾ ಅಥವಾ ಜಿಲ್ಲೆಯ ಉಸ್ತುವಾರಿ ಸಚಿವರೇ..? ಇದುವರೆಗೆ ಯಾವುದೇ ಸ್ಪೀಕರ್ ಗಳು ಆಡಳಿತಾತ್ಮಕ ವಿಚಾರದಲ್ಲಿ ಸಭೆ ನಡೆಸಿರಲಿಲ್ಲ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಟೀಕೆಗೆ ಸ್ಪೀಕರ್ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ. ಸೋಮೇಶ್ವರ, ಉಚ್ಚಿಲದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಅಯೋಗವು ಸಾಂವಿಧಾನಿಕ ಸ್ವತಂತ್ರ ಸಂಸ್ಥೆಯಾಗಿದೆಯೇ ಹೊರತು ಅದು ಸರ್ಕಾರದ ಅಧೀನದಲ್ಲಿಲ್ಲ. ಆಯೋಗವು ಜಾತಿ ಗಣತಿಗೆ ಮುಂದಾಗಿದ್ದು ಅದಕ್ಕೆ ಸಹಕಾರ ನೀಡುವುದು ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಜನರಲ್ಲಿರುವ ಗೊಂದಲಗಳನ್ನ ಮೊದಲೇ ಬಗೆಹರಿಸಬೇಕೆನ್ನುವ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರ ಜೊತೆ ಕುಳಿತು ಚರ್ಚಿಸಿ ಗೊಂದಲಗಳನ್ನ ಬಗೆಹರಿಸಲು ಪ್ರಯತ್ನಿಸಿದರೆ ಬೇರೆಯವರಿಗೆ ಆಗುವ ತೊಂದರೆ ಏನೆಂದು ಪ್ರಶ್ನಿಸಿದರು.
ಕೆಂಪು ಕಲ್ಲಿಗೆ ಹೊಸ ನಿಯಮ ಜಾರಿ
ಇಲ್ಲಿಯವರೆಗೆ ಕೆಂಪು ಕಲ್ಲು ವ್ಯಾಪಾರಿಗಳು ಮತ್ತು ಕೆಲಸಗಾರರು ಅಧಿಕಾರಿಗಳ ಭಯ ಮತ್ತು ನಿಯಂತ್ರಣದಲ್ಲೇ ಕೆಲಸ ಮಾಡುತ್ತಿದ್ದರು. ಸರಕಾರ ಇದನ್ನ ಮನಗಂಡು ಕೆಂಪುಕಲ್ಲು ವ್ಯಾಪಾರಸ್ಥರು ಮತ್ತು ಕೆಲಸಗಾರರು ಸ್ವಾಭಿಮಾನ ಮತ್ತು ದೈರ್ಯದಿಂದ ವ್ಯಾಪಾರ ಮಾಡಬೇಕೆನ್ನುವ ನಿಟ್ಟಿನಲ್ಲಿ ಈ ಹಿಂದಿನ ಎಲ್ಲಾ ನಿಯಮಗಳನ್ನ ಸಡಿಲಿಸಿದ್ದು ಅದೀಗ ಹೊಸ ನಿಯಮವಾಗಿ ಜಾರಿಗೊಳ್ಳುತ್ತಿದೆ. ಇದರಿಂದ ವ್ಯಾಪಾರಿಗಳಿಗೆ ಎಲ್ಲಾ ರೀತಿಯ ಪ್ರಯೋಜನ ದೊರಕಲಿದೆ. ಅಲ್ಲದೆ ಜನರಿಗೂ ಕೆಂಪುಕಲ್ಲು ಕಡಿಮೆ ದರದಲ್ಲಿ ಸಿಗುವ ವಿಶ್ವಾಸ ಇದೆಯೆಂದು ಖಾದರ್ ಹೇಳಿದರು.
Karnataka Legislative Assembly Speaker U.T. Khader has responded sharply to BJP leaders’ criticism, stating that while he may hold the position of Speaker, he continues to serve as a public representative committed to addressing people’s issues.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 04:21 pm
HK News Staffer
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm