ಬ್ರೇಕಿಂಗ್ ನ್ಯೂಸ್
25-09-25 04:07 pm Mangalore Correspondent ಕರಾವಳಿ
ಮಂಗಳೂರು, ಸೆ.25 : ಶೃಂಗೇರಿ ಶಾರದಾ ಪೀಠದ ವೈಭವ, ವೀಣೆಯ ನುಡಿಸುತ್ತಾ ಮುಗುಳ್ನಗುವ ಕಂದಮ್ಮಗಳು, ಕೈಯೊಲು ತಾವರೆ, ಪುಸ್ತಿಕೆಗಳಿಂದ ಶೋಭಿಸುವ ವಿದ್ಯಾಧಿದೇವತೆ. ಈ ಮಧ್ಯೆ ನವರೂಪಗಳಲ್ಲಿ ಶೋಭಿಸುವ ನವದುರ್ಗೆಯರು. ಇದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವದಲ್ಲಿ ಬುಧವಾರ ನಡೆದ ಮುದ್ದು ಶಾರದೆ ಮತ್ತು ನವದುರ್ಗೆಯರ ಸ್ಪರ್ಧೆಯ ಝಲಕ್.
ಪಿ.ಕೆ.ಲೋಹಿತ್ ಸ್ಮರಣಾರ್ಥ ಪಿ.ಕೆ ದೂಜ ಪೂಜಾರಿ ಗ್ರೂಪ್ಸ್ ಪ್ರಾಯೋಜಕತ್ವದಲ್ಲಿ ಆಭರಣ ಜುವೆಲ್ಲರ್ಸ್ ಮತ್ತು ಅದಿರಾ ಪ್ರಾಪರ್ಟಿಸ್ ಸಹಕಾರದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನೂರಾರು ಮಂದಿ ಪುಟಾಣಿಗಳು ಮುದ್ದು ಶಾರದೆ, ನವದುರ್ಗೆಯರಾಗಿ ಶೋಭಿಸಿದರು.
ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಟ್ರಸ್ಟಿ ಕೃತಿನ್ ಧೀರಜ್ ಅಮೀನ್, ಅಭಿವೃದ್ಧಿ ಸಮಿತಿ ಸದಸ್ಯ ವಾಸುದೇವ ಕೋಟ್ಯಾನ್ , ಪಿ.ಕೆ. ಪೂಜಾರಿ ಗ್ರೂಪ್‌ನ ಪಿ.ಕೆ ಸತೀಶ್ ಪೂಜಾರಿ, ಗೌರವಿ ರಾಜಶೇಖರ್, ಪಿ.ಕೆ.ಸ್ಮರಣ್ ಪೂಜಾರಿ, ಪ್ರಣವಿ ಪೂಜಾರಿ, ಆಭರಣ ಜ್ಯುವೆಲ್ಲರ್ಸ್‌ನ ಮಂಗಳೂರು ವಿಭಾಗದ ಮ್ಯಾನೇಜರ್ ಲಕ್ಷ್ಮೀನಾರಾಯಣ ಶೆಣೈ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು ಮೊದಲಾದವರಿದ್ದರು. ಚಂದ್ರಹಾಸ ಬಳಂಜ, ವಿಜಯ್ ಕೋಟ್ಯಾನ್ ಪಡು, ಕೀರ್ತನಾ ಸನಿಲ್, ಕೀರ್ತಿರಾಜ್ ಪಡು ಕಾರ್ಯಕ್ರಮ ನಿರೂಪಿಸಿದರು.
ಮುದ್ದು ಶಾರದೆ-ನವದುರ್ಗೆ ವಿಜೇತರು
೬ರಿಂದ ೧೦ ವರ್ಷದೊಳಗಿನ ಮುದ್ದು ಶಾರದೆ ವಿಭಾಗ: ಶಿವಿಕಾ ಡಿಂಪಲ್ (ಪ್ರಥಮ), ಆದ್ಯಾ ವಿ.ಕೋಟ್ಯಾನ್ (ದ್ವಿತೀಯ), ಅನೈರಾ ಎ. ಶೆಟ್ಟಿ, ಶಾನ್ಯ ಗಂಗೊಳ್ಳಿ, ಅದ್ವಿತಿ ಎ. ಪೂಜಾರಿ, ಆನ್ವಿ ಎ., ರೋಷಿನಿ ಡಿ.ಕೆ (ಆಕರ್ಷಕ ಬಹುಮಾನ)
ನವದುರ್ಗೆಯರು: ಶಾನ್ಯ ಬಿ. ಸುವರ್ಣ(ಪ್ರಥಮ), ಋಥ್ವಾ ಎಚ್.ಪಿ (ದ್ವಿತೀಯ), ಕಾಶ್ವಿ, ಚಾರ್ವಿ ಕುಕ್ಯಾನ್, ದಿಯಾ ಡಿ., ಪ್ರಾಂಜಲಿ, ಶಿಪ್ರಾ ಪಿ. ಶೆಟ್ಟಿ (ಆಕರ್ಷಕ ಬಹುಮಾನ) ಮುದ್ದು ಶಾರದೆ ೩-೬ ವರ್ಷ ವಿಭಾಗ: ಶ್ರೀಯಾ ಕೆ.ಕಾಂಚನ್(ಪ್ರಥಮ), ನಕ್ಷತ್ರ ಎಸ್. ಆಚಾರ್ಯ(ದ್ವಿತೀಯ), ವೈ ಆರಾಧ್ಯಾ ಭಟ್, ಶೈವಿ ಸಾಲ್ಯಾನ್, ಓಜಸ್ವಿ, ಜಾನ್ವಿ ಆರ್., ಮನಸ್ವಿ ಡಿ ಪೂಜಾರಿ (ಆಕರ್ಷಕ ಬಹುಮಾನ) ಪಡೆದರು.
The grandeur of Sringeri Sharada Peetha came alive at Kudroli Sri Gokarnanatheshwara Temple on Wednesday, where little children dressed as Goddess Sharade with veenas in hand and radiant smiles, along with the nine forms of Goddess Durga, captivated the audience during the Muddu Sharade and Navadurga competitions held as part of the Mangaluru Dasara celebrations.
24-09-25 03:55 pm
Bangalore Correspondent
ಕರ್ನಾಟಕ ಜನಸಂದಣಿ ನಿಯಂತ್ರಣ ಕಾಯ್ದೆ ರೆಡಿ ; ಏಳು ವರ...
23-09-25 07:26 pm
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
25-09-25 05:09 pm
HK News Desk
ಕೇರಳದಲ್ಲಿ ಹೆಚ್ಚುತ್ತಿರುವ 'ಮೆದುಳು ತಿನ್ನುವ ರೋಗ'...
25-09-25 05:05 pm
ಕ್ರೈಸ್ತ ದೇಶದಲ್ಲಿ ಹಿಂದು ದೇವರ ಪ್ರತಿಮೆ ಏಕೆ ? ಟೆಕ...
24-09-25 01:07 pm
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
Narendra Modi, Xi Jinping: ಭಾರತದಲ್ಲಿ ಸರ್ಕಾರ ಬ...
23-09-25 08:29 pm
25-09-25 07:29 pm
Mangalore Correspondent
Skeleton Found at Bangle Gudde, Dharmasthala...
25-09-25 07:23 pm
ವೀಣೆಯ ನುಡಿಸುತ್ತ ಮುಗುಳ್ನಗುವ ಕಂದಮ್ಮಗಳು ; ಮಂಗಳೂರ...
25-09-25 04:07 pm
Mangalore, Tech Park, Minister Kharge: ಮಂಗಳೂರ...
25-09-25 09:58 am
Mangaluru City Corporation: ಮಂಗಳೂರು ಮಹಾನಗರ ಪಾ...
24-09-25 10:48 pm
23-09-25 11:01 am
HK News Desk
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am