ಬ್ರೇಕಿಂಗ್ ನ್ಯೂಸ್
25-09-25 07:23 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.25: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿಯ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಮತ್ತೊಂದು ಬುರುಡೆ ಮತ್ತು ಅಸ್ಥಿಪಂಜರ ಅವಶೇಷದ ಗುರುತನ್ನು ಪೊಲೀಸರು ಜೊತೆಗೆ ಸಿಕ್ಕಿದ್ದ ಡ್ರೈವಿಂಗ್ ಲೈಸನ್ಸ್ ಆಧರಿಸಿ ಪತ್ತೆ ಮಾಡಿದ್ದಾರೆ.
ಅಸ್ಥಿಪಂಜರ ಜೊತೆಗೆ ಸಿಕ್ಕಿದ್ದ ಡ್ರೈವಿಂಗ್ ಲೈಸನ್ಸ್ ಆಧಾರದಲ್ಲಿ ವ್ಯಕ್ತಿಯ ಕುಟುಂಬಸ್ಥರನ್ನು ಕರೆಸಿದ್ದು ಅವರು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ಸ್ಥಳ ಶೋಧ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಆದಿಶೇಷ ನಾರಾಯಣ ಎಂಬ ಯುವಕನ ಡ್ರೈವಿಂಗ್ ಲೈಸೆನ್ಸ್ ಪತ್ತೆಯಾಗಿತ್ತು. ಡಿಎಲ್ ಆಧರಿಸಿ ಆತನ ಕುಟುಂಬ ಸದಸ್ಯರು ಬೆಳ್ತಂಗಡಿಗೆ ಬಂದಿದ್ದು ಮಾಹಿತಿ ನೀಡಿದ್ದಾರೆ.

ಆದಿಶೇಷ ಎಂಬ ಹೆಸರಿನ ಯುವಕ 2013 ಅಕ್ಟೋಬರ್ 2ರಿಂದ ನಾಪತ್ತೆಯಾಗಿದ್ದ. ಬಾರ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಏಕಾಏಕಿ ನಾಪತ್ತೆಯಾಗಿದ್ದ. ಆದರೆ ಮಗ ನಾಪತ್ತೆಯಾದರೂ ಈ ಬಗ್ಗೆ ಕುಟುಂಬಸ್ಥರು ಪೊಲೀಸ್ ದೂರು ನೀಡಿರಲಿಲ್ಲ. ಅಲ್ಲದೆ, ಹುಡುಕಾಟವನ್ನೂ ನಡೆಸಿರಲಿಲ್ಲ.
ಮಗ ಕಾಣೆಯಾಗಿದ್ದ, ಬರಬಹುದು ಅಂದ್ಕೊಂಡು ನಾವು ಹುಡುಕಲು ಹೋಗಿರಲಿಲ್ಲ. ಆದರೆ ಆಮೇಲೆ ಬರಲೇ ಇಲ್ಲ. ನಾಪತ್ತೆ ಸಂದರ್ಭದಲ್ಲಿ ಮಾನಸಿಕವಾಗಿ ಚೆನ್ನಾಗಿಯೇ ಇದ್ದ ಎಂದು ಆತನ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ SIT ಕಚೇರಿಗೆ ಆಗಮಿಸಿದ ಕುಟುಂಬ ಸದಸ್ಯರನ್ನು ಪೊಲೀಸರು ದಾಖಲೆ ಪತ್ರಗಳನ್ನು ಕೇಳಿ ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಅಸ್ಥಿಪಂಜರ ಆಧರಿಸಿ ಡಿಎನ್ಎ ಟೆಸ್ಟ್ ಗೆ ಮತ್ತೆ ಬರುವಂತೆಯೂ ತಿಳಿಸಿದ್ದಾರೆ ಎನ್ನುವ ಮಾಹಿತಿ ಇದೆ.
Police have identified another skull and skeletal remains discovered at Bangle Gudde near the Netravati bathing ghat in Dharmasthala, with the help of a driving license found at the site.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm