ಬ್ರೇಕಿಂಗ್ ನ್ಯೂಸ್
09-10-25 11:58 am Mangalore Correspondent ಕರಾವಳಿ
ಉಳ್ಳಾಲ, ಅ.8 : ಸಣ್ಣ ವಿಚಾರಕ್ಕೆ ಶಾರದಾ ಮಾತೆಯ ವಿಗ್ರಹವನ್ನ ರಸ್ತೆಯಲ್ಲಿ ನಿಲ್ಲಿಸಿ ಠಾಣೆಗೆ ಮುತ್ತಿಗೆ ಹಾಕಿರೋದು ದುರದೃಷ್ಟಕರವಾಗಿದ್ದು ಇದೆಲ್ಲ ಹಿಂದುತ್ವದ ಪ್ರತಿಪಾದನೆ ಆಗಲ್ಲ. ಉಳ್ಳಾಲ ಶಾರದೋತ್ಸವ ಘಟನೆಯನ್ನ ಬಿಜೆಪಿ ಹಿಂದುತ್ವ ಎಂದು ಹೇಳಿ ಜನರನ್ನ ಉದ್ರೇಕಿಸಿ ರಾಜಕೀಯ ಬೇಳೆ ಬೇಯಿಸುತ್ತಿದೆ. ಮೈಕ್ ಬಂದ್ ಮಾಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿರುವುದು ಅಕ್ಷಮ್ಯ. ಅಂಥವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಲೇಬೇಕು. ಬಿಜೆಪಿಯ ವಕೀಲ ಮೋಹನ್ ರಾಜ್ ಅವರು ಸುಖಾಸುಮ್ಮನೆ ಕಾಂಗ್ರೆಸಿಗೆ ಹಿಂದೂ ವಿರೋಧಿ ಪಟ್ಟ ಕಟ್ಟುವುದು ಸರಿಯಲ್ಲವೆಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು. ಶೋಭಾಯಾತ್ರೆ ವೇಳೆ ರಾತ್ರಿ ಸಮಯ ಮೀರಿದಾಗ ಪೊಲೀಸರು ಟ್ಯಾಬ್ಲೊಗಳ ಮೈಕ್ ನಿಲ್ಲಿಸಲು ಮಾತ್ರ ಹೇಳಿದ್ದಾರೆ. ಕರ್ತವ್ಯದಲ್ಲಿರುವ ಪೊಲೀಸರ ಮೇಲೆ ಹಲ್ಲೆ ಮಾಡೋದು ತಪ್ಪು. ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದರೆ ಆತನಿಗೆ ಬೇಲ್ ಕೊಟ್ಟು ಬಿಡಿಸಬೇಕು. ಪೊಲೀಸರಿಂದ ತಪ್ಪಾಗಿದ್ದರೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಕೊಡಬೇಕಿತ್ತು. ಪೊಲೀಸರು ತಪ್ಪೆಸಗಿದ ಬಗ್ಗೆ ಯಾರೂ ದೂರು ನೀಡಿಲ್ಲವೆಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಮಾತನಾಡಿ ಪೊಲೀಸರು ಎಲ್ಲಾ ಧರ್ಮದ ಸಭೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಮಯ ಮಿತಿಯನ್ನ ತೆರವುಗೊಳಿಸಬೇಕು. ವರ್ಷಕ್ಕೊಮ್ಮೆ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳನ್ನು ಏಳು ಗಂಟೆಗೆ ಆರಂಭಿಸಿ ಮಧ್ಯರಾತ್ರಿ ಒಂದು ಗಂಟೆಗೆ ಮುಗಿಸಲು ಸಾಧ್ಯವಿಲ್ಲ. ಒಂದು ಗಂಟೆಗೆ ಪೊಲೀಸರು ಸಾರ್ವಜನಿಕ ಕಾರ್ಯಕ್ರಮಗಳನ್ನ ನಿಲ್ಲಿಸಲು ಹೋದರೆ ಸಂಘರ್ಷ ಸಹಜ. ಕಾಂಗ್ರೆಸ್ನ ಹಿಂದೂಗಳ ಬಗ್ಗೆ ಬಿಜೆಪಿಯ ಮೋಹನ್ ರಾಜ್ ಅವರು ಮಾತನಾಡುವ ಅಗತ್ಯವಿಲ್ಲ. ನಮ್ಮ ಇಪ್ಪತ್ತೈದು ಜನರ ನಿಯೋಗವು ಉಳ್ಳಾಲ ಇನ್ಸ್ ಪೆಕ್ಟರ್ ವಿರೂಪಾಕ್ಷರನ್ನ ಭೇಟಿ ಮಾಡಿ ವಾಸ್ತವಾಂಶ ಕೇಳಿದ್ದೇವೆ.
ಶೋಭಾಯಾತ್ರೆ ವೇಳೆ ಎರಡು ಪ್ರಕರಣವುಳ್ಳ ರಕ್ಷಿತ್ ಎಂಬಾತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ರಕ್ಷಿತ್ ಜೊತೆ ಮತ್ತಿಬ್ಬರನ್ನ ವಶಕ್ಕೆ ಪಡೆದಿರುವುದು ಪೊಲೀಸರ ತಪ್ಪಾಗಿದೆ. ಇದಕ್ಕಾಗಿ ಪಿಎಸ್ಐ ಅವರು ಪೊಲೀಸ್ ಕಮೀಷನರಲ್ಲಿ ಮಾತನಾಡಿ ಕ್ಷಮೆ ಯಾಚಿಸಿದ್ದಾರೆ. ಪ್ರತಿಭಟಿಸಿದ್ದ ಮತ್ತೆ ಮೂವತ್ತು ಮಂದಿಯ ವಿರುದ್ಧದ ಪ್ರಕರಣವನ್ನ ಯು.ಟಿ.ಖಾದರ್ ಅವರೇ ರದ್ದುಗೊಳಿಸಿದ್ದಾರೆ. ಹಾಗಾಗಿ ಬಿಜೆಪಿಯವರು ಖಾದರ್ ಅವರನ್ನ ಟಾರ್ಗೆಟ್ ಮಾಡಬೇಡಿ. ಕಾಂಗ್ರೆಸ್ ನವರೂ ಹಿಂದೂಗಳೇ ಆಗಿದ್ದಾರೆ. ನಮಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಿವೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ, ಮುಖಂಡರಾದ ಅಮಿತಾ ಅಶ್ವಿನ್, ಪುರುಷೋತ್ತಮ ಶೆಟ್ಟಿ ಪಿಲಾರು, ವಿವೇಕಾನಂದ ಸನಿಲ್, ಮನ್ಸೂರ್ ಮಂಚಿಲ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
The Ullal Block Congress has accused the BJP of misusing the Sharadotsava incident for political gain by portraying it as a Hindutva issue and trying to provoke communal sentiments. Speaking at a press conference in Ullal on Wednesday, Sadashiva Ullal, Chairperson of the Mangaluru Urban Development Authority, said that blocking roads with the Sharada idol and laying siege to the police station over a minor issue was “unfortunate” and “not a reflection of Hindutva.”
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
06-12-25 04:58 pm
HK News Desk
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm