ಬ್ರೇಕಿಂಗ್ ನ್ಯೂಸ್
26-10-25 04:42 pm Mangalore Correspondent ಕರಾವಳಿ
ಮಂಗಳೂರು, ಅ.26 : 11 ದಿನಗಳಿಂದ ಅರಬ್ಬೀ ಸಮುದ್ರ ಮಧ್ಯೆ ನಾಪತ್ತೆಯಾಗಿದ್ದ ಗೋವಾ ಮೂಲದ 31 ಮೀನುಗಾರರಿದ್ದ ಮೀನುಗಾರಿಕಾ ಬೋಟ್ ಒಂದನ್ನು ಭಾರತೀಯ ಕೋಸ್ಟ್ ಗಾರ್ಡ್ ಪಡೆ ಪತ್ತೆಹಚ್ಚಿದ್ದು, ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಹೊನ್ನಾವರ ಬಂದರಿಗೆ ಕರೆತಂದಿದೆ.
ಮಂಗಳೂರು ಬಂದರಿನಿಂದ ನೂರು ನಾಟಿಕಲ್ ಮೈಲು ದೂರದಲ್ಲಿ ಗೋವಾ ಮೂಲದ ಬೋಟ್ ನಾಪತ್ತೆಯಾಗಿದ್ದಾಗಿ ಅ.24ರಂದು ಮಂಗಳೂರಿನ ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಗೆ ಮಾಹಿತಿ ಬಂದಿತ್ತು. ಇದರಂತೆ, ಐಸಿಜಿಎಸ್ ಕಸ್ತೂರ್ಬಾ ಗಾಂಧಿ ಹಡಗಿನಲ್ಲಿ ಕಾರ್ಯಾಚರಣೆ ನಡೆಸಿದ್ದು ಕೊನೆಯ ಬಾರಿಗೆ ಮಿಸ್ಸಿಂಗ್ ಆಗಿದೆ ಎನ್ನಲಾದ ಜಾಗಕ್ಕೆ ತೆರಳಿ ಶೋಧ ಕಾರ್ಯಾಚರಣೆ ನಡೆಸಿತ್ತು. ಆದರೆ ಅಲ್ಲಿ ಬೋಟ್ ಪತ್ತೆಯಾಗದ ಕಾರಣ ಹೆಲಿಕಾಪ್ಟರ್ ಸಹಾಯ ಕೇಳಲಾಗಿತ್ತು.




ಆನಂತರ, ಕೊಚ್ಚಿಯಿಂದ ಬಂದಿದ್ದ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸಮುದ್ರ ಮೇಲ್ಭಾಗದಿಂದ ಹಾರಾಡುತ್ತಾ ಮೀನುಗಾರಿಕಾ ಬೋಟಿನ ಬಗ್ಗೆ ಶೋಧ ನಡೆಸಿತ್ತು. ಮಳೆಯಿಂದಾಗಿ ವಾತಾವರಣ ಹದಗೆಟ್ಟಿದ್ದರೂ ಹಡಗಿನ ಜೊತೆ ಸೇರಿ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿದೆ. ಅ.25ರಂದು ಡೋರ್ನಿಯರ್ ಏರ್ ಕ್ರಾಫ್ಟ್ ನಾಪತ್ತೆಯಾಗಿದ್ದ ಮೀನುಗಾರಿಕಾ ಬೋಟನ್ನು ಸಮುದ್ರ ನಡುವೆ ಪತ್ತೆಹಚ್ಚಿದ್ದು ಕೂಡಲೇ ಕೋಸ್ಟ್ ಗಾರ್ಡ್ ಹಡಗಿಗೆ ಮಾಹಿತಿ ರವಾನಿಸಿತ್ತು.
ಐಸಿಜಿಎಸ್ ಕಸ್ತೂರ್ಬಾ ಗಾಂಧಿ ಹಡಗು ಕೂಡಲೇ ಆ ಸ್ಥಳಕ್ಕೆ ಧಾವಿಸಿದ್ದು ಬೋಟಿನಲ್ಲಿದ್ದ ಎಲ್ಲ ಮೀನುಗಾರರನ್ನು ರಕ್ಷಣೆ ಮಾಡಿದ್ದಲ್ಲದೆ, ಅವರಿಗೆ ಆಹಾರ ನೀರು ಪೂರೈಸಿ ಅಪಾಯದಿಂದ ಪಾರು ಮಾಡಿದೆ. ಸಂತ ಏಂಟನಿ ಹೆಸರಿನ ಗೋವಾ ಮೂಲದ ಮೀನುಗಾರಿಕಾ ಬೋಟನ್ನು ಬಳಿಕ ಹಗ್ಗ ಕಟ್ಟಿ ಹೊನ್ನಾವರ ಬಂದರಿಗೆ ಎಳೆದು ತರಲಾಯಿತು. ಅದರಲ್ಲಿದ್ದ ಎಲ್ಲ 31 ಮೀನುಗಾರರನ್ನೂ ರಕ್ಷಣೆ ಮಾಡಲಾಗಿದೆ.
ಹವಾವಾನ ವೈಪರೀತ್ಯದ ನಡುವೆಯೂ ಕೋಸ್ಟ್ ಗಾರ್ಡ್ ಪಡೆಯು ಹಡಗು ಮತ್ತು ಏರ್ ಕ್ರಾಫ್ಟ್ ಮೂಲಕ ಯಶಸ್ವೀ ಕಾರ್ಯಾಚರಣೆ ನಡೆಸಿದ್ದು ಸಮುದ್ರ ಮಧ್ಯೆ ಸಾವಿನ ದವಡೆಯಲ್ಲಿ ಸಿಕ್ಕಿಬಿದ್ದು ಒದ್ದಾಡಿದ್ದ ಮೀನುಗಾರರನ್ನು ರಕ್ಷಿಸಿ ಕರೆತಂದಿದೆ. ಮೀನುಗಾರಿಕಾ ಬೋಟಿನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಗಾಳಿ, ಮಳೆಯ ನಡುವೆ ಮುಂದೆ ಚಲಿಸಲಾಗದೆ ಸಿಕ್ಕಿಬಿದ್ದಿತ್ತು.
The Indian Coast Guard successfully rescued 31 fishermen from a Goa-based fishing boat that had been missing in the Arabian Sea for 11 days. After receiving information on October 24 that the vessel was lost about 100
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 10:55 am
HK News Staffer
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm