ಬ್ರೇಕಿಂಗ್ ನ್ಯೂಸ್
29-10-25 03:16 pm Mangalore Correspondent ಕರಾವಳಿ
ಮಂಗಳೂರು, ಅ.29 : ಸ್ಪೀಕರ್ ಪೀಠವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡು ಕಳಂಕ ತಂದಿದ್ದಾರೆ ಎಂಬ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭರತ್ ಶೆಟ್ಟಿ ಆರೋಪಕ್ಕೆ ಸ್ಪೀಕರ್ ಯು.ಟಿ. ಖಾದರ್ ಉತ್ತರ ನೀಡಲು ನಿರಾಕರಿಸಿದ್ದಾರೆ. ಎಲ್ಲಿಯೋ ಕುಳಿತು ಮಾತನಾಡಿದ್ದಕ್ಕೆಲ್ಲ ಉತ್ತರ ಕೊಡಲು ಆಗಲ್ಲ. ನಾಳೆ ನಾನು ಕಚೇರಿಯಲ್ಲಿ ಇರುತ್ತೇನೆ, ಲಿಖಿತವಾಗಿ ದೂರು ಕೊಡಲಿ, ಅಗತ್ಯ ಬಿದ್ದರೆ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.
ಅಮೆರಿಕದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಖಾದರ್, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಆರೋಪದ ವಿಚಾರವನ್ನು ಗಮನಿಸಿದ್ದೇನೆ. ಎಲ್ಲದಕ್ಕೂ ಮದ್ದಿದೆ. ಕೆಲವರ ಅಸೂಯೆಗೆ ಮದ್ದು ಇಲ್ಲ. ಹೊಸತಾಗಿ ಮನೆ ಕಟ್ಟುವಾಗ ದೃಷ್ಟಿ ಬೀಳಬಾರದೆಂದು ದೃಷ್ಟಿ ಬೊಂಬೆ ಕಟ್ಟುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ವಿಧಾನಸಭೆಗೆ ಗೌರವ ಸಿಗುವ ಸಂದರ್ಭ ಬಂದಿದೆ. ಇವರ ಆರೋಪ ನಮ್ಮ ವಿಧಾನಸಭೆಗೆ ದೃಷ್ಟಿ ಬೊಂಬೆ ಇದ್ದಂತೆ ಎಂದು ಕಟಕಿಯಾಡಿದರು.
ಶಾಸಕರಿಗೆ ಸವಲತ್ತು ಸೌಲಭ್ಯ ಒದಗಿಸುವುದು ನನ್ನ ಜವಾಬ್ದಾರಿ. ಆ ಕೆಲಸವನ್ನು ಮಾಡಿಸಿದ್ದೇನೆ. ಯಾರೋ ಮಾತನಾಡುತ್ತಾರೆಂದು ಅದಕ್ಕೆಲ್ಲ ಉತ್ತರ ಕೊಡುತ್ತ ಕೂರುವುದಕ್ಕೆ ಆಗುವುದಿಲ್ಲ. ಯಾರಿಗಾದ್ರೂ ಸಂಶಯ ಇದ್ದರೆ ಕಚೇರಿಗೆ ಬರಲಿ, ಸಂಶಯ ನಿವಾರಿಸುತ್ತೇನೆ. ನಾನು ಸಂವಿಧಾನ ಪೀಠದಲ್ಲಿ ಇದ್ದೇನೆ. ಹಾಗಾಗಿ ಯಾರದ್ದೋ ಮಾತಿಗೆಲ್ಲ ಉತ್ತರಿಸಲು ಆಗಲ್ಲ.
ಇವರಿಗೆ ಬೇಕಾಗಿಯೇ ನಾಳೆ ನನ್ನ ಕಚೇರಿಗೆ ಹೋಗುತ್ತೇನೆ. ಅವರು ಹೇಳಿರುವ ವಿಚಾರಗಳನ್ನು ಲಿಖಿತವಾಗಿ ಕೊಟ್ಟರೆ ಅದನ್ನು ಪರಿಶೀಲಿಸುತ್ತೇನೆ. ಏನೇ ಆರೋಪ ಇದ್ದರೂ ಬರೆದು ಕೊಡಲಿ. ಯಾರೋ ಪ್ರಶ್ನೆ ಮಾಡುತ್ತಾರೆಂದು ಉತ್ತರ ಕೊಡಲು ನಾನು ಅವರ ಜನ ಅಲ್ಲ. ಹಿಂದೆ ಮುಂದೆ ಗೊತ್ತಿಲ್ಲದೆ ಮಾತನಾಡಿದ್ದಕ್ಕೆಲ್ಲ ನಾನು ರಾಜಕೀಯ ವ್ಯಕ್ತಿಯಾಗಿದ್ದರೆ ಅದೇ ರೀತಿ ಉತ್ತರ ಕೊಡಬಹುದಿತ್ತು. ಈಗ ನಾನು ರಾಜಕೀಯ ವ್ಯಕ್ತಿಯಲ್ಲ.
ಸಾಂವಿಧಾನಿಕ ಹುದ್ದೆಯಲ್ಲಿದ್ದು ಏನು ಬೇಕಾದರೂ ಮಾತನಾಡಲು ಆಗುತ್ತದಾ.. ನಮ್ಮ ಶಾಸಕರಿಗೆ ಯಾವುದೆಲ್ಲ ಸೌಕರ್ಯ, ಸವಲತ್ತು ಕೊಡಬೇಕೋ ಅದನ್ನು ಕೊಡುವುದು ನನ್ನ ಕರ್ತವ್ಯ. ಇವರಿಗೆ ನನ್ನ ಬಗ್ಗೆ ಡ್ಯಾಮೇಜ್ ಮಾಡುವುದೇ ಉದ್ದೇಶ ಆಗಿದ್ದರೆ ಇಂಥ ಹೇಳಿಕೆಯನ್ನು ದಿನವೂ ಕೊಡುತ್ತ ಇರಲಿ. ನನಗೆ ಸಂತೋಷ ಇದೆ ಎಂದು ಹೇಳುತ್ತ ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ನಿರಾಕರಿಸಿದರು.
Karnataka Legislative Assembly Speaker U.T. Khader has refused to respond to corruption allegations made by former Speaker Vishweshwar Hegde Kageri and MLA Dr. Bharath Shetty, who accused him of misusing the Speaker’s office for personal gain during the renovation of the legislators’ quarters and the Speaker’s chamber.
29-06-26 10:33 pm
HK News Desk
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
30-06-26 08:06 pm
HK News Staffer
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
ಮೊಹರಂ ಮೆರವಣಿಗೆಯಲ್ಲಿ 15,000 ಜನರ ಹತ್ಯೆಗೆ ಸ್ಕೆಚ್...
29-06-26 03:35 pm
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
30-06-26 11:39 am
HK News Staffer
ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಬಗ್ಗೆ ಅವಹೇಳನ...
27-06-26 02:44 pm
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
01-07-26 08:59 am
HK News Staffer
Panambur Gold Robbery, Update: ಪಣಂಬೂರಿನಲ್ಲಿ ಚ...
30-06-26 11:02 pm
ಪಾಗಲ್ ಪ್ರೇಮಿ ಕೇಸ್ ಬೆನ್ನಲ್ಲೇ ಬಯಲಾಯ್ತು ಅಕ್ರಮ ಬ...
30-06-26 03:48 pm
ಮಂಗಳೂರು ಕೋರ್ಟಿಗೆ ಕೆಮಿಕಲ್ ಬಾಂಬ್ ಬೆದರಿಕೆ ; ಜೆನ್...
29-06-26 07:25 pm
ನಡುರಾತ್ರಿ ಬೆಡ್ ರೂಮ್ ಕಿಟಕಿಗೆ ಕೈಹಾಕಿ ಮಹಿಳೆಯ ಸರ...
29-06-26 06:45 pm