ಬ್ರೇಕಿಂಗ್ ನ್ಯೂಸ್
03-11-25 10:47 pm Mangalore Correspondent ಕರಾವಳಿ
ಉಳ್ಳಾಲ, ನ.3 : ಉಳ್ಳಾಲದ ವೈದ್ಯನಾಥ ನಗರದ ಒಂದನೇ ಅಡ್ಡ ರಸ್ತೆಯಲ್ಲಿ ಕೇವಲ ಹಿಂದೂಗಳೇ ನೆಲೆಸಿದ್ದಾರೆಂಬ ಕಾರಣಕ್ಕೆ ರಸ್ತೆ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲವೆಂಬುದು ವಿಶೇಷ ಪ್ರಕರಣ. ಬಿಜೆಪಿ ಕಾರ್ಯಕರ್ತರು, ಹಿಂದೂಗಳೇ ಇರುವ ಪ್ರದೇಶಗಳಿಗೆ ಅನುದಾನ ನೀಡದೆ ತಾರತಮ್ಯ ತೋರಿದರೆ ಊರು ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಇದ್ದ ಅನುದಾನದಲ್ಲಿ ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾಮಗಾರಿ ನಡೆಸುವುದು ಜನಪ್ರತಿನಿಧಿಗಳ ಕರ್ತವ್ಯ. ಉಳ್ಳಾಲದಲ್ಲಿ ಖಾದರ್ ಶಾಸಕರೆಂದು ಕೇಂದ್ರದ ಅನುದಾನಗಳನ್ನ ತಡೆಹಿಡಿಯಲು ಸಾಧ್ಯವೇ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಪ್ರಶ್ನಿಸಿದರು.
ಸಂಸದರ ನಿಧಿಯ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ಉಳ್ಳಾಲಬೈಲು ವೈದ್ಯನಾಥ ನಗರದ ಒಂದನೇ ಅಡ್ಡ ರಸ್ತೆಯನ್ನ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಸರಕಾರದ ಅನುದಾನದ ದುಡ್ಡು ಸಾರ್ವಜನಿಕರ ತೆರಿಗೆಯದ್ದಾಗಿದೆ. ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರಿಗೆ ಇನ್ನಾದರೂ ಬುದ್ಧಿ ಬರಲಿ ಎಂಬ ದೃಷ್ಟಿಯಲ್ಲಿ ಅನುದಾನದ ಕೊರತೆಯಿದ್ದರೂ ಸಹ ವೈದ್ಯನಾಥ ರಸ್ತೆ ಕಾಂಕ್ರಿಟೀಕರಣಕ್ಕೆ ಹತ್ತು ಲಕ್ಷ ರೂಪಾಯಿ ನೀಡಿದ್ದೇನೆ. ಬಿಜೆಪಿ ಶಾಸಕರಿದ್ದ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಪ್ರದೇಶಕ್ಕೆ ನಾವು ಅನುದಾನ ಕೊಡದೇ ಇರಲು ಸಾಧ್ಯವಿಲ್ಲ. ಚುನಾವಣೆ ಬಳಿಕ ಗೆದ್ದು ಬಂದ ಶಾಸಕರು ಎಲ್ಲರನ್ನೂ ಸಮಾನವಾಗಿ ಕಾಣಬೇಕಿದ್ದು ಈ ವಿಚಾರದಲ್ಲಿ ಖಾದರ್ ವಿಫಲರಾಗಿದ್ದಾರೆ. ಖಾದರ್ ಅವರು ಜನರನ್ನ ಧರ್ಮ, ವಿಚಾರಧಾರೆಯ ಆಧಾರದಲ್ಲಿ ನೋಡದೆ ಮುಂದೆ ಆದರೂ ಎಲ್ಲರನ್ನ ಸಮಾನವಾಗಿ ಕಾಣಲಿ ಎಂದರು.



ಆದ್ಯತೆಯ ಮೇರೆಗೆ ಸೋಮೇಶ್ವರ ರೈಲ್ವೇ ಗೇಟ್ ಕ್ರಾಸಿಂಗ್ ಯೋಜನೆಗೆ ಡಿಪಿಆರ್ ಮಾಡಲು ಆದೇಶ ಕೊಟ್ಟಿದ್ದು ಸರ್ವೆ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಲ್ಲೂ ಮಾತುಕತೆ ನಡೆಸಿದ್ದು ಸ್ಪೀಕರ್ ಖಾದರ್ ಅವರೂ ಒತ್ತಡ ಹಾಕಬೇಕಿದೆ. ರೈಲ್ವೇ ಸಚಿವರಿಗೂ ಸೋಮೇಶ್ವರದ ರೈಲ್ವೇ ಗೇಟ್ ಸಮಸ್ಯೆ ತಿಳಿದಿದ್ದು ಪುರಸಭೆ ಆಡಳಿತವು ವಿಶೇಷ ಆಸಕ್ತಿ ವಹಿಸಿ ಯೋಜನೆಯ ಡಿಪಿಆರ್ ಬೇಗನೆ ಸಿದ್ಧಪಡಿಸಬೇಕಿದೆ. ಡಿಪಿಆರ್ ಆದ ಕೂಡಲೇ ಯೋಜನೆ ಅನುಷ್ಠಾನಗೊಳ್ಳಲಿದೆಯೆಂದು ಬ್ರಿಜೇಶ್ ಚೌಟ ಹೇಳಿದರು.
ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್ ಮಾತನಾಡಿ ವೈದ್ಯನಾಥ ನಗರದ ಈ ರಸ್ತೆಯು ಕಳೆದ ಹಲವು ವರುಷಗಳಿಂದ ಹದಗೆಟ್ಟು ಹೋಗಿತ್ತು. ಮಳೆ ಬಂದರಂತೂ ಈ ರಸ್ತೆಯಲ್ಲಿ ನಡೆದಾಡಲು ಕಷ್ಟಕರ ಸ್ಥಿತಿ ಉಂಟಾಗಿತ್ತು. ಇದೀಗ ಸಂಸದರು ಅವರ ಅನುದಾನದಲ್ಲಿ ಕಾಂಕ್ರಿಟೀಕರಣ ನಡೆಸಿದ್ದು ನಮ್ಮ ಪಾಲಿಗೆ ಅವರೇ ಶಾಸಕರಾಗಿದ್ದಾರೆಂದರು.
ಸ್ಥಳೀಯ ನಿವಾಸಿ ಚೀರುಂಬಾ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ದಿನೇಶ್ ಅಮ್ಟೂರ್, ಮಂಗಳೂರು ಮಂಡಲ ಮಹಿಳಾ ಮೋರ್ಚದ ಅಧ್ಯಕ್ಷರಾದ ಮಾಧವಿ ಉಳ್ಳಾಲ್ , ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ನಿಶಾನ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
BJP MP K. Brijesh Chowta has questioned whether the development of Ullal is possible if discrimination is shown against Hindus and BJP supporters. Speaking at the inauguration of the newly concretized road in Vaidhyanath Nagar, Ullalbail, the MP alleged that government grants were denied for a street because only Hindus reside there.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
04-12-25 06:39 pm
Mangalore Correspondent
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
Cm Siddaramaiah Mangalore: ಆಹ್ವಾನ ಇಲ್ಲದೆ ನಾನೇ...
03-12-25 10:35 pm
Mangalore, CM Siddaramaiah, High Court: ಮಂಗಳೂ...
03-12-25 07:23 pm
CM Siddaramaiah, Mangalore, Narayan Guru: ದೇವ...
03-12-25 04:52 pm
04-12-25 11:15 pm
Mangalore Correspondent
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm
ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ; ರಕ್ತಚ...
04-12-25 04:18 pm
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm