ಬ್ರೇಕಿಂಗ್ ನ್ಯೂಸ್
05-12-25 10:34 am Mangalore Correspondent ಕರಾವಳಿ
ಮಂಗಳೂರು, ಡಿ.5 : ಎಐಸಿಸಿ ಸೆಕ್ರಟರಿ ಕೆ.ಸಿ ವೇಣುಗೋಪಾಲ್ ಮೊನ್ನೆ ಮಂಗಳೂರಿಗೆ ಬಂದಿದ್ದಾಗ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಡಿಕೆ ಡಿಕೆ ಎಂದು ಘೋಷಣೆ ಕೂಗಿ ಮುಜುಗರ ಸೃಷ್ಟಿಸಿದ ಘಟನೆ ನಡೆದಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಾರಣ ಕೇಳಿ ಮಿಥುನ್ ರೈಗೆ ನೋಟಿಸ್ ಜಾರಿ ಮಾಡಿದೆ.
ಡಿ.3ರಂದು ಮಂಗಳೂರಿನಲ್ಲಿ ನಡೆದ ಗಾಂಧಿ- ಗುರು ಸಂವಾದ ಶತಾಬ್ದಿ ಕಾರ್ಯಕ್ರಮಕ್ಕೆ ಕೆಸಿ ವೇಣುಗೋಪಾಲ್ ಆಗಮಿಸಿದ್ದರು. ಈ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸ್ವತಃ ಶಾಲು ಹಾಕಿ ವೇಣುಗೋಪಾಲ್ ಅವರನ್ನು ಸ್ವಾಗತಿಸಿದ್ದು ಈ ವೇಳೆ ಜೊತೆಗಿದ್ದ ಮಿಥುನ್ ಬೆಂಬಲಿಗರು ಡಿಕೆಶಿ ಪರವಾಗಿ ಘೋಷಣೆ ಕೂಗಿದ್ದರು. ಹೊರಗೆ ವೇಣುಗೋಪಾಲ್ ಕಾರಿನ ಸುತ್ತಲೂ ಕಾರ್ಯಕರ್ತರು ಜಮಾಯಿಸಿ ಡಿಕೆ ಡಿಕೆ ಘೋಷಣೆ ಹಾಕಿದ್ದರು.
ಇದರಿಂದ ಹೈಕಮಾಂಡ್ ಮಟ್ಟದ ನಾಯಕನಿಗೆ ತೀವ್ರ ಮುಜುಗರ ಸೃಷ್ಟಿಯಾಗಿತ್ತು. ನಾಯಕತ್ವ ಬದಲಾವಣೆ ವಿಚಾರ ತೀವ್ರ ಚರ್ಚೆಗೀಡಾಗಿರುವ ನಡುವಲ್ಲೇ ಡಿಕೆಶಿ ಸಿಎಂ ಆಗಬೇಕೆಂದು ಹೇಳಿ ಕಾರ್ಯಕರ್ತರು ಸುತ್ತುವರಿದು ಘೋಷಣೆ ಹಾಕಿ, ಪರೋಕ್ಷವಾಗಿ ಕೇಂದ್ರ ನಾಯಕರ ಮೇಲೆ ಒತ್ತಡ ತಂತ್ರ ಹಾಕಿದ್ದರು. ಆಮೂಲಕ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ನೋಟೀಸ್ ಜಾರಿ ಮಾಡಿದ್ದು, ಘಟನೆ ಬಗ್ಗೆ ಸೂಕ್ತ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.
ಕೆಸಿ ವೇಣುಗೋಪಾಲ್ ಮೂಲತಃ ಕೇರಳದವರಾಗಿದ್ದು, ಮಂಗಳೂರಿನ ಕಾರ್ಯಕ್ರಮ ಮುಗಿಸಿ ರಸ್ತೆ ಮೂಲಕ ಕಾಸರಗೋಡಿಗೆ ತೆರಳಿದ್ದರು. ಆದರೆ ಮಂಗಳೂರಿಗೆ ಬಂದಿದ್ದಾಗ ಡಿಕೆಶಿ ಪರವಾಗಿ ಒತ್ತಡ ಹಾಕಿರುವುದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ ಎನ್ನುವ ನೆಪದಲ್ಲಿ ಈಗ ಡಿಕೆಶಿ ಬಂಟನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಮಿಥುನ್ ರೈ ಮಂಗಳೂರು ಕಾಂಗ್ರೆಸಿನಲ್ಲಿ ಪ್ರಭಾವಿಯಾಗಿದ್ದು ಡಿಕೆಶಿ ಬಣದಲ್ಲಿ ಗುರುತಿಸಿದ್ದಾರೆ.
ಮೊನ್ನೆ ಡಿಕೆಶಿ ಪರ ಘೋಷಣೆ ಕೂಗಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ಮಿಥುನ್ ರೈ, ಸಿದ್ದರಾಮಯ್ಯ ರಾಜ್ಯ ಕಂಡ ಮಹಾನ್ ನಾಯಕ. ಆದರೆ ಅಧಿಕಾರ ಹಂಚಿಕೆಯಾಗಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ನಾವು ತುಂಬ ಸಂತೋಷ ಪಡುತ್ತೇವೆ. ಹಾಗಾಗಿ, ಡಿಕೆಶಿ ನಾಳೆಯೇ ಸಿಎಂ ಆಗಲೆಂದು ಹಾರೈಸುತ್ತೇನೆ ಎಂದು ಹೇಳಿದ್ದರು. ಕೆಲಹೊತ್ತಿನಲ್ಲೇ ಏರ್ಪೋರ್ಟ್ ಆಗಮಿಸಿದ್ದ ಸಿದ್ದರಾಮಯ್ಯ ಪರವಾಗಿಯೂ ಎಂಎಲ್ಸಿ ಐವಾನ್ ಡಿಸೋಜ ನೇತೃತ್ವದಲ್ಲಿ ಸಿದ್ದರಾಮಯ್ಯ ಫುಲ್ ಟೈಂ ಸಿಎಂ ಆಗಬೇಕೆಂದು ಘೋಷಣೆ ಹಾಕಲಾಗಿತ್ತು.
The Congress high command has issued a disciplinary notice to party leader Mithun Rai after his supporters raised pro–DK Shivakumar slogans during AICC General Secretary K.C. Venugopal’s visit to Mangaluru on December 3.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
05-12-25 12:24 pm
Mangalore Correspondent
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
ಎಐಸಿಸಿ ಸೆಕ್ರಟರಿ ವೇಣುಗೋಪಾಲ್ ಎದುರಲ್ಲಿ ಡಿಕೆ ಘೋಷಣ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
04-12-25 11:15 pm
Mangalore Correspondent
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm
ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ; ರಕ್ತಚ...
04-12-25 04:18 pm
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm