ಬ್ರೇಕಿಂಗ್ ನ್ಯೂಸ್
17-12-25 05:05 pm Mangalore Correspondent ಕರಾವಳಿ
ಮಂಗಳೂರು, ಡಿ.17 : ಮಂಗಳೂರು ಜೈಲಿನಲ್ಲಿ ಹಿಂದು- ಮುಸ್ಲಿಂ ಕೈದಿಗಳ ಮಧ್ಯೆ ವಾಗ್ವಾದ- ಸಂಘರ್ಷ- ಗದ್ದಲ ನಡೆದಿದ್ದು, ಸಿಸಿಬಿ ಪೊಲೀಸರು ರಾತ್ರೋರಾತ್ರಿ ದಾಳಿ ನಡೆಸಿ ಎರಡೂ ಕಡೆಯ ಗುಂಪುಗಳಿಗೆ ಥಳಿಸಿ ಚೆನ್ನಾಗಿ ಬೆಂಡೆತ್ತಿದ್ದಾರೆ.
ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಸೋಮವಾರ ಸಂಜೆ ಕೋಕಾ ಆಕ್ಟಿನಡಿ ಬಂಧಿತನಾಗಿರುವ ಭರತ್ ಕುಮ್ಡೇಲ್ ಜೊತೆಗೆ ಮಾತನಾಡಲು ಸಂಬಂಧಿಕರು ಬಂದಿದ್ದರು. ಆತ ಮಾತನಾಡಲು ಹೊರಗಡೆ ಬಂದು ಹಿಂದೆ ತೆರಳುವ ಸಂದರ್ಭದಲ್ಲಿ ಎ ಬ್ಯಾರಕ್ ನಲ್ಲಿರುವ ಕೈದಿಗಳು ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಆನಂತರ, ಈ ವಿಷಯ ತಿಳಿದ ಬಿ ಬ್ಯಾರಕಿನ ಹಿಂದು ಕೈದಿಗಳು ರಂಪ ಮಾಡಿದ್ದು ಎರಡೂ ಕಡೆಯಿಂದ ಅವಾಚ್ಯ ನಿಂದನೆ, ಜೋರು ಗದ್ದಲ ಎಬ್ಬಿಸಿದ್ದಾರೆ. ವಿಷಯ ತಿಳಿದ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ರಾತ್ರಿ ವೇಳೆ ಸಿಸಿಬಿ ತಂಡದೊಂದಿಗೆ ಜೈಲಿಗೆ ಬಂದಿದ್ದು, ಗಲಾಟೆ ನಡೆಸಿದ ಎರಡೂ ಕಡೆಯವರಿಗೆ ಲಾಠಿ ರುಚಿ ನೀಡಿದ್ದಾರೆ.
ಘಟನೆ ಬಗ್ಗೆ ಜೈಲು ಸುಪರಿಡೆಂಟ್ ಶರಣಬಸಪ್ಪ ಬರ್ಕೆ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಎ ಬ್ಯಾರಕಿನ ಮೊಯ್ದೀನ್ ಪರಾದ್, ಸರ್ಫರಾಜ್, ಮಹಮ್ಮದ್ ಅಲ್ತಾಫ್, ಇಮ್ತಿಯಾಜ್, ಅಬ್ದುಲ್ ನೌಶಾದ್, ಮಹಮ್ಮದ್ ಸಾಹಿಲ್, ಮಹಮ್ಮದ್ ಹನೀಫ್ ಮತ್ತು ಬಿ ಬ್ಯಾರಕಿನ ಲತೀಶ್ ಜೋಗಿ, ಮಂಜುನಾಥ್, ಮುರುಗನ್, ಸಚಿನ್ ತಲಪಾಡಿ, ತುಷಾರ್ ಅಮೀನ್, ಶಬರೀಶ್, ಗುರುರಾಜ್, ಸುಮಂತ್ ಎಂಬ ಕೈದಿಗಳ ಮೇಲೆ ಕೇಸು ದಾಖಲಾಗಿದೆ.
ಇದೇ ವೇಳೆ, ಪೊಲೀಸರು ಜೈಲಿನ ಒಳಗಡೆ ತಪಾಸಣೆ ನಡೆಸಿದ್ದು ಮೂರು ಆಂಡ್ರಾಯ್ಡ್ ಮೊಬೈಲ್ ಮತ್ತು ಇನ್ನೊಂದು ಸಣ್ಣ ಕೀಪ್ಯಾಡ್ ಮೊಬೈಲ್ ಪತ್ತೆಯಾಗಿದೆ.
A tense situation erupted at Mangaluru Jail following a clash between Hindu and Muslim inmates, prompting the City Crime Branch (CCB) police to conduct an overnight crackdown inside the prison.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm