ಬ್ರೇಕಿಂಗ್ ನ್ಯೂಸ್
06-01-26 04:09 pm Mangalore Correspondent ಕರಾವಳಿ
ಮಂಗಳೂರು, ಜ.6 : ಕೋಳಿ ಅಂಕ ಎಂಬುದು ಚರ್ಚಾರ್ಹ ವಿಷಯವೇ ಆಗಿರಬಹುದು. ಆದರೆ ಅದಕ್ಕೂ ಜಾಸ್ತಿ, ಕೋಗಿಲು ಲೇಔಟ್‌ನಲ್ಲಿ ಬೀದಿಗೆ ಬಿದ್ದ ವೃದ್ದರು, ಮಕ್ಕಳು, ಬಾಣಂತಿಯರು, ರೋಗಿಗಳ ಬದುಕು ಮುಖ್ಯವಾಗಿದೆ. ಇವರ್ಯಾರೂ ಕೋಳಿ ಅಂಕದ ಬಗ್ಗೆ ಪ್ರತಿಕ್ರಿಯಿಸುವವರ ಕಣ್ಣಿಗೆ ಬಿದ್ದಿಲ್ಲವೇ? ಅದೇ ಸಮುದಾಯದ ವೋಟ್ ಪಡೆದವರು ಈ ರೀತಿಯಾಗಿ ಸಮುದಾಯದ ಮಂದಿಯನ್ನು ಕಡೆಗಣಿಸುತ್ತಾರೆ ಅಂತಾದರೆ ಇಂತಹ ಜನಪ್ರತಿನಿಧಿಗಳು ನಮಗೆ ಬೇಕೇ ಎಂದು ದ.ಕ. ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿರಾಜ್ ಬಜ್ಪೆ ಪ್ರಶ್ನಿಸಿದ್ದಾರೆ.
ಪಕ್ಷ ಯಾವುದೇ ಇರಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತದ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸದ ಶಾಸಕರುಗಳು ನಮಗೆ ಬೇಕಿಲ್ಲ. ಅನ್ಯಾಯ ಯಾವುದೇ ಧರ್ಮದವರಿಗೆ ಆಗಲಿ ಅದು ಅನ್ಯಾಯ ಅಲ್ಲವೇ ? ಒಬ್ಬ ಜನಪ್ರಧಿನಿಧಿ ಆದವನು ಧರ್ಮ ನೋಡದೆ ಧ್ವನಿ ಎತ್ತಬೇಕು ಅನ್ನುವಷ್ಟು ಜ್ಞಾನವಿಲ್ಲವೇ? ತನ್ನ ಸಮುದಾಯವನ್ನು ಹೇಗೆ ಬೇಕು ಹಾಗೆ ನಡೆಸಿಕೊಂಡರೆ ನಡೆಯುತ್ತದೆ ಅನ್ನುವ ಭ್ರಮೆ ಇನ್ಮುಂದೆ ಇಟ್ಟುಕೊಳ್ಳಬೇಡಿ. ಅಂತಹ ರಾಜಕೀಯ ಆಟ ಇನ್ನು ನಡೆಯುವುದಿಲ್ಲ ಅನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಸಮುದಾಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯವಾದಾಗ ತುಟಿ ಪಿಟಿಕ್ ಅನ್ನದ ಇವರಿಂದ ಈ ಸಮಾಜಕ್ಕೆ ಏನು ಲಾಭವಿದೆ ಅನ್ನೋದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಂ ಸಮುದಾಯ ಇಂತಹ ಜನಪ್ರಧಿನಿಧಿಗಳಿಂದ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಮುದಾಯದ ವಿರುದ್ಧ ಮುಸ್ಲಿಂ ಜನಪ್ರತಿನಿಧಿಗಳ ಇದೇ ರೀತಿ ನಿರ್ಲಕ್ಷ್ಯತನ ಮುಂದುವರೆದಲ್ಲಿ ಅಂತಹ ಜನಪ್ರಧಿನಿಧಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಪ್ರತಿಭಟಿಸಬೇಕಾಗುತ್ತದೆ ಎಂದು ಬಜ್ಪೆ ಪ.ಪಂ. ನೂತನ ಸದಸ್ಯರೂ ಆಗಿರುವ ಸಿರಾಜ್ ಬಜ್ಪೆ ಪರೋಕ್ಷವಾಗಿ ಸ್ಪೀಕರ್ ಯುಟಿ ಖಾದರ್ ವಿರುದ್ಧ ಎಚ್ಚರಿಕೆ ಮಾತುಗಳನ್ನಾಡಿದ್ದಾರೆ. ಸುದ್ದಿಗೋಷ್ಟಿ ಸಂದರ್ಭದಲ್ಲಿ ಎದುರಾದ ಕೋಳಿ ಅಂಕ ನಿಷೇಧ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಖಾದರ್, ಕೋಳಿ ಅಂಕ ಈ ಭಾಗದ ಸಂಪ್ರದಾಯ ಹೌದು. ಹಿಂದೆ ಕಂಬಳಕ್ಕು ಇಂತದ್ದೇ ತೊಂದರೆ ಬಂದಿತ್ತು. ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಕಾನೂನು ಸಚಿವರ ಜೊತೆಗೆ ಚರ್ಚಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರಲ್ಲು ಮಾತನಾಡುತ್ತೇನೆ ಎಂದು ಹೇಳಿದ್ದರು.
Siraj Bajpe, President of the Dakshina Kannada Muslim Elected Representatives’ Forum, sharply criticized Speaker U.T. Khader for expressing concern over the Koli Anka tradition while allegedly ignoring the plight of families evicted from Kogilu Layout. He questioned how elderly people, children, new mothers, and patients suffering on the streets fail to draw attention from leaders who won votes from the same community.
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am