ಬ್ರೇಕಿಂಗ್ ನ್ಯೂಸ್
02-03-26 07:57 pm HK News Staffer ಕರಾವಳಿ
ಉಳ್ಳಾಲ, ಮಾ.2: ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ, ಸಪೋರ್ಟ್ ಮಾಡಿ ಎಂದು ಬಜ್ಪೆಯಲ್ಲಿ ಕೊಲೆಯಾಗಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಭಾವಚಿತ್ರವುಳ್ಳ ಇನ್ಸ್ ಟಾ ಗ್ರಾಮ್ ಪೇಜ್ ಒಂದರ ಪೋಸ್ಟಿನಲ್ಲಿ ಪ್ರಚೋದನಕಾರಿ ಕಮೆಂಟ್ ಹಾಕಿರುವ ಕಿಡಿಗೇಡಿಯ ವಿರುದ್ಧ ಉಳ್ಳಾಲ ಪೊಲೀಸರು ಸುಮೊಟೊ ಕೇಸ್ ದಾಖಲಿಸಿದ್ದಾರೆ.
ಬಜ್ಪೆಯಲ್ಲಿ ಕಳೆದ ವರ್ಷ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದ ಸುಹಾಸ್ ಶೆಟ್ಟಿಯ ಭಾವಚಿತ್ರವುಳ್ಳ ಇನ್ಸ್ಟಾ ಪೋಸ್ಟ್ ಒಂದರಲ್ಲಿ shankar11916 ಎಂಬ ಇನ್ಸ್ಟಾ ಖಾತೆಯಿಂದ "ಸಪೋರ್ಟ್ ಮಾಡಿ ಬ್ರೋ ಉಳ್ಳಾಲ ಮಸ್ಜಿದ್ ಹತ್ರ ಬಾಂಬ್ ಬ್ಲಾಸ್ಟ್ ಮಾಡ್ತೀನಿ" ಎಂಬ ಪ್ರಚೋದನಕಾರಿ ಸಂದೇಶವನ್ನು ಹಾಕಲಾಗಿದ್ದು,ಈ ಪೋಸ್ಟ್ ವೈರಲ್ ಆಗಿತ್ತು.

ಸೋಮವಾರ ಸಾಮಾಜಿಕ ಜಾಲತಾಣದ ಮೋನಿಟರಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿ ಸಂತೋಷ್ ದೊಡ್ಡಮನಿ ಅವರು ಈ ಸಂದೇಶವನ್ನು ಗಮನಿಸಿದ್ದು ಈ ಬಗ್ಗೆ ಅವರು ನೀಡಿದ ದೂರಿನಡಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಧರ್ಮ ಧರ್ಮಗಳ ಮಧ್ಯೆ ವೈರತ್ವ ಉಂಟುಮಾಡಿ ಹಿಂಸೆಗೆ ಪ್ರಚೋದಿಸಿ ಜನರನ್ನು ಎತ್ತಿ ಕಟ್ಟುವಂತೆ ಮಾಡುವ ಉದ್ದೇಶದಿಂದ ಜಾಲತಾಣದ ಇನ್ಸ್ಟಾಗ್ರಾಮ್ ನಲ್ಲಿ ಪ್ರಚೋಧನಾಕಾರಿಯಾಗಿ ಕಾಮೆಂಟ್ ಮಾಡಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪೋಸ್ಟ್ ಹಾಕಿರುವ ವ್ಯಕ್ತಿಯನ್ನು ಅರೆಸ್ಟ್ ಮಾಡುವುದಾಗಿ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
10-09-26 05:10 pm
HK News Staffer
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
10-09-26 09:24 pm
HK News Staffer
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
ಬಾರ್ಕೂರಿನಲ್ಲಿ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ ;...
09-09-26 03:29 pm
ಮಂಗಳೂರಿನಲ್ಲಿ ಸಂಪುಟ ಸಭೆ ; ಪುತ್ತೂರಿನಲ್ಲಿ ಆಯುರ್ವ...
09-09-26 02:03 pm
10-09-26 08:16 pm
HK News Staffer
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm
ಬೆಳ್ಳಾರೆ ಸರ್ಕಾರಿ ಬಾಲಕಿಯರ ಹಾಸ್ಟೆಲ್ನಲ್ಲಿ ಬಟ್ಟೆ...
09-09-26 07:45 pm
ಮನದಲ್ಲೂ ಹುಲಿ, ಡಿಪಿಯಲ್ಲೂ ಹುಲಿ ; ಕೊನೆಗೆ ಅದೇ ಹುಲ...
09-09-26 07:44 pm