ಬ್ರೇಕಿಂಗ್ ನ್ಯೂಸ್
23-03-26 05:36 pm HK News Staffer ಕರಾವಳಿ
ಕಾಸರಗೋಡು, ಮಾರ್ಚ್ 23: ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ- ಯುಡಿಎಫ್ ಮತ್ತು ಎಲ್ ಡಿಎಫ್ ತ್ರಿಕೋನ ಸ್ಪರ್ಧೆಗೆ ಕಣ ಸಿದ್ಧವಾಗಿದೆ. ಎಲ್ಡಿಎಫ್ ಅಭ್ಯರ್ಥಿಯಾಗಿ ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರು ಅವರನ್ನು ಕಣಕ್ಕಿಳಿಸಲಾಗಿದೆ. ಈ ಹಿಂದೆ ಲೀಗ್ ನಿಂದ ಶಾಸಕರಾಗಿದ್ದ ಎನ್.ಎ. ನೆಲ್ಲಿಕುನ್ನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ, ಈ ಕ್ಷೇತ್ರದಲ್ಲಿ ಹೊಸ ಮುಖಗಳೇ ಅಭ್ಯರ್ಥಿಗಳಾಗಿದ್ದು ನೇರ ಹಣಾಹಣಿ ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ.
ಯುಡಿಎಫ್ ಅಭ್ಯರ್ಥಿಯಾಗಿ ಮುಸ್ಲಿಂ ಲೀಗ್ನಿಂದ ಪಕ್ಷದ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹೀನ್ ಹಾಜಿ ಮತ್ತು ಎನ್ಡಿಎ ಕೂಟದಿಂದ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಅವರನ್ನು ಕಣಕ್ಕಿಳಿಸಲಾಗಿದೆ. ಇದೀಗ ಎಲ್ಡಿಎಫ್ನಿಂದ ಶಾನವಾಸ್ ಪಾದೂರು ಅವರ ಹೆಸರನ್ನು ಘೋಷಿಸಲಾಗಿದೆ. ಕಾಸರಗೋಡು ಕ್ಷೇತ್ರವನ್ನು ಎಡರಂಗದ ಮೈತ್ರಿ ಪಕ್ಷ ಐಎನ್ಎಲ್ಗೆ ಬಿಟ್ಟು ಕೊಟ್ಟಿದ್ದರೂ, ಇಲ್ಲಿ ಐಎನ್ಎಲ್ ಸ್ಪರ್ಧಿಸದೇ ಇರಲು ತೀರ್ಮಾನಿಸಿದೆ. ಹೀಗಾಗಿ ಎಡರಂಗದಲ್ಲಿ ಮಂಜೇಶ್ವರ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಆಕಾಂಕ್ಷಿಯಾಗಿದ್ದ ಶಾನವಾಸ್ ಪಾದೂರು ಅವರನ್ನು ಸಿಪಿಎಂ ಕಾಸರಗೋಡು ಕ್ಷೇತ್ರದಿಂದ ಕಣಕ್ಕಿಳಿಸಿದೆ. ಆಮೂಲಕ ಮುಸ್ಲಿಂ ಸಮುದಾಯದ ಆಕಾಂಕ್ಷೆಯನ್ನು ಎಡರಂಗದ ನಾಯಕರು ಈಡೇರಿಸಿದ್ದಾರೆ. ಸಿಪಿಎಂ ಯುವ ಘಟಕ ಡಿವೈಎಫ್ಐ ಸೇರಿದಂತೆ ಪಕ್ಷದ ಬಹಳಷ್ಟು ನಾಯಕರು ಮಂಜೇಶ್ವರದಲ್ಲಿ ಶಾನವಾಸ್ ಪರ ಬ್ಯಾಟಿಂಗ್ ಮಾಡಿದ್ದರು.


ಮಂಜೇಶ್ವರ ಕ್ಷೇತ್ರದಿಂದ ಸುರೇಂದ್ರನ್ ಮಾರ್ಚ್ 21ರ ಶನಿವಾರ ನಾಮಪತ್ರ ಸಲ್ಲಿಸಿದ್ದರೆ, ಕಾಸರಗೋಡು ವಿಧಾನಸಭೆ ಕ್ಷೇತ್ರದ ಮೂವರು ಅಭ್ಯರ್ಥಿಗಳು ಕೂಡ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಅಶ್ವಿನಿ ಎಂಎಲ್ ಮತ್ತು ಲೀಗ್ ಅಭ್ಯರ್ಥಿ ಮಾಹೀನ್ ಹಾಜಿ ಪ್ರಚಾರದಲ್ಲಿ ತೊಡಗಿದ್ದು ಮೊದಲಿಗೆ ದೇವಸ್ಥಾನ, ಮಸೀದಿಗಳಿಗೆ ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹಿಳೆಯಾಗಿರುವುದು ಮತ್ತು ಏಕೈಕ ಹಿಂದು ಅಭ್ಯರ್ಥಿಯಾಗಿರುವುದು ಮುಸ್ಲಿಂ ಬಾಹುಳ್ಯ ಕ್ಷೇತ್ರದಲ್ಲಿ ಕಮಲ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಅಶ್ವಿನಿ ಈ ಹಿಂದೆ ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇಡೀ ಜಿಲ್ಲೆಯಲ್ಲಿ ಪರಿಚಿತರು. ಮತ್ತು ಪಕ್ಷದ ಜಿಲ್ಲಾಧ್ಯಕ್ಷೆಯಾಗಿ ಕಾರ್ಯಕರ್ತರ ಒಡನಾಟ ಇರಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಅತಿ ಹೆಚ್ಚು ಇರುವ ಮಲಯಾಳಿ ಬಿಲ್ಲವರ ಮತಗಳನ್ನು ಬಾಚಿಕೊಳ್ಳುವ ಅವಕಾಶವೂ ಇದೆ. ಆದರೆ ಪ್ರಚಾರಕ್ಕೆ ಇನ್ನು ಇರುವುದು ಕೆಲವೇ ದಿನಗಳಾಗಿದ್ದರಿಂದ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಳ್ಳಬೇಕಾಗಿದೆ.

ಕೇರಳದಲ್ಲಿ ಮಾ.16ರಂದು ಚುನಾವಣೆ ಘೋಷಣೆಯಾಗಿದ್ದು ಮಾ.23ಕ್ಕೆ ನಾಮಪತ್ರಿಕೆ ಸಲ್ಲಿಸಲು ಕೊನೆ ದಿನವಾಗಿದೆ. ಏ.9ರಂದು ಮತದಾನ ದಿನಾಂಕವಾಗಿದ್ದು ಹೀಗಾಗಿ ಪ್ರಚಾರಕ್ಕೆ ಇನ್ನುಳಿದಿರುವುದು 14 ದಿನ ಮಾತ್ರ. ಕೇರಳದಲ್ಲಿ ಒಂದೇ ದಿನ 140 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
20-07-26 03:42 pm
HK News Staffer
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
20 ದಿನಗಳ ಉಪವಾಸದಿಂದ ಹದಗೆಟ್ಟ ಆರೋಗ್ಯ, ಸೋನಮ್ ವಾಂಗ...
18-07-26 09:31 pm
ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಿಧನ...
18-07-26 06:22 pm
20-07-26 09:32 pm
HK News Staffer
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
21-07-26 12:18 pm
HK News Staffer
ಉಕ್ರೇನ್ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ;...
21-07-26 11:47 am
ತ್ರಿಪುರಾ ಡಿಜಿಪಿ ಅನುರಾಗ್ ಧನಕರ್ ಕಚೇರಿಯಲ್ಲಿ ಗುಂಡ...
20-07-26 10:17 pm
ಪಂಜುರ್ಲಿ ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ಮೇಲೆ ಪೂಜಾ...
20-07-26 07:47 pm
ಕೋತಿ ಕಂಡು ಮನೆಗೆ ಓಡಿಬಂದ 8 ವರ್ಷದ ಬಾಲಕಿ, ಕುಸಿದು...
20-07-26 07:45 pm