ಬ್ರೇಕಿಂಗ್ ನ್ಯೂಸ್
30-03-26 02:06 pm Mangaluru Staffer ಕರಾವಳಿ
ಮಂಗಳೂರು, ಮಾರ್ಚ್ 30: ಮಂಗಳೂರಿನಲ್ಲಿ ಆಟೋ ಎಲ್ಪಿಜಿ ಗ್ಯಾಸ್ ಕೊರತೆಯಾಗಿದ್ದು ಸಕಾಲಕ್ಕೆ ಗ್ಯಾಸ್ ಸಿಗದೆ ಆಟೋ ಚಾಲಕರು ಫಿಲ್ಲಿಂಗ್ ಸ್ಟೇಶನ್ ಮುಂದೆ ಕ್ಯೂ ನಿಂತಿದ್ದಾರೆ. ನಗರದ ಬಲ್ಮಠದ ಗೋ ಗ್ಯಾಸ್ ಹೆಸರಿನ ಆಟೋ ಎಲ್ಪಿಜಿ ಫಿಲ್ಲಿಂಗ್ ಸ್ಟೇಷನ್ ಮುಂದೆ ಆಟೋ ಚಾಲಕರು ಕಿಮೀ ಉದ್ದಕ್ಕೂ ಕ್ಯೂ ನಿಂತಿದ್ದು ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗಿದೆ.
ಗ್ಯಾಸ್ ಸ್ಟೇಶನ್ ಮುಂದೆ ಆಟೋಗಳು ಸಾಲುಗಟ್ಟಿದ್ದು ಯಾವಾಗ ಗ್ಯಾಸ್ ಸಿಗುತ್ತದೆ ಎಂಬ ಆತಂಕದಲ್ಲಿದ್ದಾರೆ. ಗ್ಯಾಸ್ ಸ್ಟೇಶನ್ ನಲ್ಲಿ ಫಿಲ್ಲಿಂಗ್ ಮಾಡುತ್ತಿದ್ದರೂ ಆಟೋ ಚಾಲಕರು ಗ್ಯಾಸ್ ಕೊರತೆ ಇದೆಯೆಂಬ ವದಂತಿಗೀಡಾಗಿದ್ದು ಸ್ಟೇಶನ್ ಮುಂದೆ ಸೇರಿದ್ದಾರೆ. ಪಂಪ್ ನಲ್ಲಿ ಗ್ಯಾಸ್ ಇದೆಯೆಂದು ಅಲ್ಲಿನ ಸಿಬಂದಿ ಹೇಳುತ್ತಿದ್ದಾರೆ. ಆಟೋ ಚಾಲಕರು ರಸ್ತೆಯಲ್ಲಿ ಸಾಲುಗಟ್ಟಿದ್ದರಿಂದ ಟ್ರಾಫಿಕ್ ತೊಂದರೆಯಾಗಿದ್ದು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪರದಾಡುತ್ತಿದ್ದಾರೆ. ಎಸ್ ಸಿಎಸ್ ಆಸ್ಪತ್ರೆ ರಸ್ತೆಯ ಉದ್ದಕ್ಕೂ ಆಟೋಗಳು ಸಾಲುಗಟ್ಟಿ ನಿಂತಿವೆ.




ಇದೇ ವೇಳೆ, ಆಟೋ ಗ್ಯಾಸ್ ದರವು ಎಪ್ರಿಲ್ 1ರ ಬಳಿಕ ಏರಿಕೆಯಾಗುತ್ತದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಗ್ಯಾಸ್ ಸ್ಟೇಶನ್ ಕಡೆಯಿಂದಲೇ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಆಟೋ ಸಿಎನ್ ಜಿ ಸ್ಟೇಶನ್ ಹಲವು ಕಡೆ ಲಭ್ಯವಿದ್ದರೂ ಎಲ್ಪಿಜಿ ಸ್ಟೇಶನ್ ಹೆಚ್ಚಿಲ್ಲ. ಮಂಗಳೂರು ನಗರ ಒಳಭಾಗದಲ್ಲಿ ಬಲ್ಮಟದ ಈ ಸ್ಟೇಶನ್ ನಲ್ಲಿ ಮಾತ್ರ ಲಭ್ಯ ಇದೆ. ಹೀಗಾಗಿ ನಾಡಿದ್ದು ಬೆಲೆ ಏರುತ್ತದೆ ಮತ್ತು ಗ್ಯಾಸ್ ಕೊರತೆಯಾಗುತ್ತದೆ ಎಂಬ ವದಂತಿ ನಂಬಿ ಆಟೋ ಚಾಲಕರು ಸ್ಟೇಶನ್ ಮುಂದೆ ಸಾಲುಗಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಿಲ್ಲ, ಆಟೋ ಚಾಲಕರು ಕೂಡ ಗಾಬರಿಯಾಗಬೇಡಿ ಎಂದು ಕಿವಿಮಾತು ಹೇಳಿದೆ.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
20-07-26 03:42 pm
HK News Staffer
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
20 ದಿನಗಳ ಉಪವಾಸದಿಂದ ಹದಗೆಟ್ಟ ಆರೋಗ್ಯ, ಸೋನಮ್ ವಾಂಗ...
18-07-26 09:31 pm
ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಿಧನ...
18-07-26 06:22 pm
20-07-26 09:32 pm
HK News Staffer
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
20-07-26 10:17 pm
HK News Desk
ಪಂಜುರ್ಲಿ ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ಮೇಲೆ ಪೂಜಾ...
20-07-26 07:47 pm
ಕೋತಿ ಕಂಡು ಮನೆಗೆ ಓಡಿಬಂದ 8 ವರ್ಷದ ಬಾಲಕಿ, ಕುಸಿದು...
20-07-26 07:45 pm
ಸುರತ್ಕಲ್ನಲ್ಲಿ ಮರ್ಡರ್ ; 20 ವರ್ಷದ ತಮ್ಮನ ತಲೆಗೆ...
20-07-26 04:41 pm
ಖೋಟಾ ನೋಟು ಜಾಲ ; 22 ವರ್ಷಗಳ ಹಿಂದೆಯೂ ನಕಲಿ ನೋಟು ದ...
19-07-26 07:42 pm