ಬ್ರೇಕಿಂಗ್ ನ್ಯೂಸ್
10-04-26 12:35 pm Dinesh Kumar, Mangaluru ಕರಾವಳಿ
ಉಳ್ಳಾಲ, ಎ.10: ಮದುವೆಯಾಗಿ ಮೂವರು ಮಕ್ಕಳಾದರೂ ಸಹ ಆ ಫೈನಾನ್ಶಿಯರ್ ಗೆ ಪಿಯು ಶಿಕ್ಷಣ ಸಂಪೂರ್ಣಗೊಳಿಸದ ಕೊರಗು ಕಾಡುತ್ತಿತ್ತು. ಮಗ ಪಿಯುಸಿ ಪರೀಕ್ಷೆ ಬರೆಯುವಾಗ ತಾನೂ ಪಿಯು ಶಿಕ್ಷಣ ಪೂರ್ಣಗೊಳಿಸಿದರೆ ಮಗನಿಗೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬರಬಹುದೆಂದು ನಿರ್ಧರಿಸಿದ ಅವರು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಕಲಾ ವಿಭಾಗದ ಆರು ವಿಷಯಗಳಲ್ಲಿ 324 ಅಂಕಗಳನ್ನ ಪಡೆದು ದ್ವಿತೀಯ ದರ್ಜೆ ಶ್ರೇಣಿಯಲ್ಲಿ ತೇರ್ಗಡೆಗೊಂಡು, ಮಗನ ಪಿಯುಸಿ ಫಲಿತಾಂಶದೊಂದಿಗೆ ಸಂಭ್ರಮಿಸಿದ್ದಾರೆ.
ಉಳ್ಳಾಲ ತಾಲೂಕಿನ ಕೊಲ್ಯ ಕಣೀರುತೋಟದ ನಿವಾಸಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿರುವ ಮೋಹನ್ ರಾಜ್ ಅವರು ದ್ವಿತೀಯ ಪಿಯುಸಿ ಪರೀಕ್ಷೆ ಬರೆದು, ಮಗನೊಂದಿಗೆ ಮೊದಲ ಪ್ರಯತ್ನದಲ್ಲೇ ತೇರ್ಗಡೆಗೊಂಡು ಸಂಭ್ರಮಿಸಿದ್ದಾರೆ.



ಮೋಹನ್ ರಾಜ್ ಅವರು ಕೊಲ್ಯದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿ, 1984 ರಲ್ಲಿ ಉಳ್ಳಾಲದ ಮದನಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಶಿಕ್ಷಣ ಪಡೆದಿದ್ದರು. ದ್ವಿತೀಯ ಪಿಯುಸಿ ಪೂರೈಸಲು ಅಂದಿನ ದಿನಗಳಲ್ಲಿ ಮೋಹನ್ ರಾಜ್ ಅವರಿಗೆ ಪೂರಕ ವಾತಾವರಣ ಲಭಿಸಿರಲಿಲ್ಲ. ಬಡತನ, ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೆಗಲ ಮೇಲೇರಿದ ಪರಿಣಾಮ ಕೆಲಸಕ್ಕೆ ತೆರಳುವ ಅನಿವಾರ್ಯತೆ ಬಂದೊದಗಿತ್ತು. ನಂತರದ ದಿನದಲ್ಲಿ ಮದುವೆಯಾಗಿ ಮಕ್ಕಳು ಜನಿಸಿ ಕಷ್ಟ ಪಟ್ಟು ವ್ಯವಹಾರದಲ್ಲಿ ಯಶಸ್ಸು ಪಡೆದರೂ ಸಹ ಪಿಯು ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವೇ ಆಗಿರಲಿಲ್ಲ. ಹಾಗಂತ ಮೋಹನ್ ರಾಜ್ ಅವರು ತನ್ನ ಮಕ್ಕಳನ್ನ ಶಿಕ್ಷಣದಿಂದ ವಂಚಿತಗೊಳಿಸಿರಲಿಲ್ಲ. ಅವರ ಹಿರಿಯ ಮಗಳು ಪೃಥ್ವಿರೇಖ ಅವರು ಬಿಎಸ್ಸಿ ಪದವೀಧರೆಯಾಗಿದ್ದು ಖಾಸಗಿ ಉದ್ಯೋಗದಲ್ಲಿದ್ದಾರೆ. ಎರಡನೇ ಮಗಳು ಪ್ರಕೃತಿ ಕೂಡಾ ಡಿಪ್ಲೋಮಾ ವ್ಯಾಸಂಗ ಮುಗಿಸಿ ಖಾಸಗಿ ಉದ್ಯೋಗದಲ್ಲಿದ್ದಾರೆ.

ಮೋಹನ್ ರಾಜ್ ಅವರ ಕಿರಿಯ ಮಗ ಕ್ಷಿತಿಜ್ ರಾಜ್ ಅವರು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ವಾಣಿಜ್ಯ ವಿಭಾಗದಲ್ಲಿ ಪ್ರಥಮ ದರ್ಜೆಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಮೋಹನ್ ರಾಜ್ ಅವರು ಮುಡಿಪುವಿನ ಸರಕಾರಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದು, ಪರೀಕ್ಷಾ ಕೇಂದ್ರಕ್ಕೆ ತೆರಳಿದಾಗ ಅಲ್ಲಿ ಪರೀಕ್ಷಾ ನಿಯಂತ್ರಣಕ್ಕೆ ನಿಯೋಜನೆಗೊಂಡ ಶಿಕ್ಷಕರು ಮತ್ತು ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಒಮ್ಮೆ ಅವಕ್ಕಾಗಿದ್ದರಂತೆ. ಬಳಿಕ ಮೋಹನ್ ರಾಜ್ ಅವರೇ ತಾನು ಪರೀಕ್ಷೆ ಬರೆಯಲು ಬಂದಿರುವುದಾಗಿ ಮನವರಿಕೆ ಮಾಡಿಸಿದ ಬಳಿಕ ಅವರ ಉತ್ಸಾಹಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಬೆಂಬಲ ನೀಡಿದ್ದರಂತೆ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಮೋಹನ್ ರಾಜ್ ಅವರು ಕಳೆದ ನವೆಂಬರ್ ತಿಂಗಳಿಂದ ಸಿದ್ಧತೆ ನಡೆಸಿದ್ದು, ತೊಕ್ಕೊಟ್ಟಿನ ಖಾಸಗಿ ಟ್ಯೂಷನ್ ಸಂಸ್ಥೆಯಲ್ಲಿ ಬೆಳಗ್ಗೆ 8 ರಿಂದ 11ರ ವರೆಗೆ ಮತ್ತು ಸಾಯಂಕಾಲದ ವೇಳೆ ತರಬೇತಿ ಪಡೆಯುತ್ತಿದ್ದರು. ಮೋಹನ್ ರಾಜ್ ಅವರ ಪರೀಕ್ಷೆ ಬರೆಯುವ ಉತ್ಸಾಹಕ್ಕೆ ಪತ್ನಿ ಮಮತಾ ಅವರು ಸಂಪೂರ್ಣ ಪ್ರೋತ್ಸಾಹ ನೀಡಿದ್ದರು. ಅರ್ಧದಲ್ಲಿ ಮೊಟಕುಗೊಂಡಿದ್ದ ಪಿಯುಸಿ ಶಿಕ್ಷಣವನ್ನ ಪೂರ್ಣಗೊಳಿಸುವುದು ಮೋಹನ್ ರಾಜ್ ಅವರ ಕಳೆದ ನಲ್ವತ್ತೆರಡು ವರುಷಗಳ ಕನಸಾಗಿದ್ದು, ಅದನ್ನ ಅವರೀಗ ಸಾಕಾರಗೊಳಿಸಿದ್ದಾರೆ.
ಮಕ್ಕಳು ಶಿಕ್ಷಣ ಪಡೆಯಲು ಅದಕ್ಕೆ ತಕ್ಕ ಪೂರಕ ವಾತಾವರಣ ನಿರ್ಮಿಸಿ ಕೊಡುವುದು ಪೋಷಕರ ಜವಾಬ್ದಾರಿಯಾಗಿದೆ. ಇಂತಿಷ್ಟು ಅಂಕಗಳನ್ನ ಗಳಿಸಲೇ ಬೇಕೆಂಬ ಟಾರ್ಗೆಟನ್ನೂ ಪೋಷಕರು ಮಕ್ಕಳಿಗೆ ಕೊಡಬಾರದು. ಹಾಗಾದಲ್ಲಿ ಶಿಕ್ಷಣ ಎಂಬುದು ಮಕ್ಕಳಿಗೆ ಸೆರೆಮನೆಯಂತಾಗುತ್ತದೆಂದು ಮೋಹನ್ ರಾಜ್ ಅವರು ಪೋಷಕರಿಗೆ ಕಿವಿಮಾತು ಹೇಳಿದ್ದಾರೆ.
ತನ್ನ ಮಧ್ಯ ವಯಸ್ಸಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಪಾಸಾಗುವ ಮೂಲಕ, ಸಾಧಿಸುವ ಛಲವೊಂದಿದ್ದರೆ ಅದಕ್ಕೆ ಬಡತನ, ವಯಸ್ಸು ಎಂದಿಗೂ ಅಡ್ಡಿ ಬರಲಾರದು ಎಂಬುದಕ್ಕೆ ಇಂದಿನ ಯುವ ಪೀಳಿಗೆಗೆ ಮೋಹನ್ ರಾಜ್ ಅವರು ನಿದರ್ಶನರಾಗಿದ್ದಾರೆ.
Despite being married with three children, a long-standing regret of not completing his Pre-University education continued to weigh on a 57-year-old financier. Determined to fulfill his dream—and to inspire his son—he appeared for the II PUC examination this year and passed successfully on his very first attempt.
09-04-26 09:30 pm
HK News Staffer
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
10-04-26 01:26 pm
HK News Desk
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
10-04-26 12:35 pm
Dinesh Kumar, Mangaluru
Besant Evening College, BPL Cricket: ಬೆಸೆಂಟ್...
07-04-26 01:22 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm