ಬ್ರೇಕಿಂಗ್ ನ್ಯೂಸ್
13-04-26 11:39 pm Mangalore Correspondent ಕರಾವಳಿ
ಮಂಗಳೂರು, ಎಪ್ರಿಲ್ 13: ಮಹಿಳೆಯೊಬ್ಬರು ಕಾವೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಆಟೋದಲ್ಲಿ ತನ್ನ ಮನೆಗೆ ತೆರಳುತ್ತಿದ್ದಾಗ ಚಿನ್ನಾಭರಣಗಳಿದ್ದ ಬ್ಯಾಗ್ ಕಳಕೊಂಡಿದ್ದು ಕಾವೂರು ಪೊಲೀಸರು ಕೆಲವೇ ಗಂಟೆಗಳಲ್ಲಿ ಆಟೋವನ್ನು ಪತ್ತೆಹಚ್ಚಿ ಬಂಗಾರ ಮರಳಿಸಿದ್ದಾರೆ.
ಕುಂಜತ್ತ್ ಬೈಲು ನಿವಾಸಿ ರೇಖಾ ತಾಜವ್ ಎಂಬವರು ಎಪ್ರಿಲ್ 7ರಂದು ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ತನ್ನ ಮನೆಯಾದ ಕುಂಜತ್ ಬೈಲಿಗೆ ಆಟೋ ರಿಕ್ಷಾದಲ್ಲಿ ಹೋಗಿದ್ದು ಮನೆಗೆ ತಲುಪಿದಾಗ ಅವರು ತನ್ನ ಬ್ಯಾಗ್ ಅನ್ನು ಆಟೋ ರಿಕ್ಷಾದಲ್ಲಿಯೇ ಮರೆತು ಇಳಿದಿದ್ದರು. ಬ್ಯಾಗ್ ನಲ್ಲಿ 4 ಚಿನ್ನದ ಉಂಗುರಗಳು ಮತ್ತು 1 ಚಿನ್ನದ ಪೆಂಡೆಂಟ್ ಹಾಗೂ 2 ವಾಚ್ ಇದ್ದ ವಿಷಯ ತಿಳಿದಾಗ ಆಟೋ ಹಿಂತಿರುಗಿ ಹೋಗಿತ್ತು.
ಇನ್ನೇನು ಮಾಡುವುದೆಂದು ತಿಳಿಯದೆ ಮಹಿಳೆ ಬಳಿಕ ಕಾವೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿ ಆಟೋ ಚಾಲಕನ ಬಗ್ಗೆ ಒಂದಷ್ಟು ವಿವರ ನೀಡಿದ್ದರು. ತಕ್ಷಣವೇ ಕಾವೂರು ಠಾಣಾ ಸಿಬ್ಬಂದಿಗಳು ಸದ್ರಿ ರಸ್ತೆಯಲ್ಲಿ ಸಿಸಿಟಿವಿ ಚೆಕ್ ಮಾಡಿದ್ದು ಆಟೋ ರಿಕ್ಷಾ ನಂಬರ್ ಪತ್ತೆ ಮಾಡಿದ್ದಾರೆ. ಬಳಿಕ ಆಟೋ ಚಾಲಕನನ್ನು ವಿಚಾರಿಸಿದಾಗ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ.
ಆಟೋವನ್ನು ಪರಿಶೀಲನೆ ನಡೆಸಿದಾಗ ಡಿಕ್ಕಿಯಲ್ಲಿ ಮಹಿಳೆಯ ಬ್ಯಾಗ್ ಪತ್ತೆಯಾಗಿದ್ದು ಅದರಲ್ಲಿ ಬಂಗಾರದ ಒಡವೆಗಳು ಹಾಗೇ ಇದ್ದವು. ಘಟನೆ ನಡೆದು 24 ಗಂಟೆ ಒಳಗೆ ಆಟೋ ಪತ್ತೆಹಚ್ಚಿದ ಪೊಲೀಸರು ಕಳೆದು ಹೋದ ಬ್ಯಾಗ್ ಸಮೇತ ಎಲ್ಲಾ ಬಂಗಾರವನ್ನು ಮಹಿಳೆಗೆ ಒಪ್ಪಿಸಿದ್ದಾರೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am