ಬ್ರೇಕಿಂಗ್ ನ್ಯೂಸ್
24-04-26 07:10 pm Giridhar Shetty, Mangaluru ಕರಾವಳಿ
ಮಂಗಳೂರು, ಎಪ್ರಿಲ್ 24: ಕೋಮು ದ್ವೇಷ, ಗಲಾಟೆಗೆ ಹೆಸರಾಗಿದ್ದ ಮಂಗಳೂರಿನಲ್ಲಿ ಪೊಲೀಸ್ ಕ್ರಮ ಬಿಗಿಯಾದರೆ ಎಲ್ಲವನ್ನೂ ಹತೋಟಿಗೆ ತರಬಹುದು ಎಂಬುದನ್ನು ಒಂದೇ ತಿಂಗಳಲ್ಲಿ ತೋರಿಸಿದ್ದ ಕಮಿಷನರ್ ಸುಧೀರ್ ರೆಡ್ಡಿ ವಿರುದ್ಧ ಇಲಾಖೆಯಲ್ಲೇ ಕತ್ತಿ ಮಸೆಯುವ ಯತ್ನ ಶುರುವಾಗಿದೆ. ಇದು ಸುದ್ದಿಯಾಗುತ್ತಲೇ ಕರಾವಳಿಯ ಸೋಶಿಯಲ್ ಮೀಡಿಯಾದಲ್ಲಿ ಜನಸಾಮಾನ್ಯರು ಕಮಿಷನರ್ ಪರವಾಗಿ ಅಭಿಯಾನವನ್ನೇ ಶುರು ಮಾಡಿದ್ದಾರೆ.
ಜಾರಿ ನಿರ್ದೇಶನಾಲಯ (ಡಿಸಿಆರ್ ಇ) ವಿಭಾಗದ ಬೆಂಗಳೂರು ಕಚೇರಿಯಲ್ಲಿ ಎಸ್ಪಿ ಆಗಿರುವ ಎಸ್.ಎಸ್ ಕಾಶಿ ಎಂಬವರು ಐಪಿಎಸ್ ಅಧಿಕಾರಿ ಸುಧೀರ್ ರೆಡ್ಡಿ ವಿರುದ್ಧ ಡಿಜಿಪಿ ಡಾ.ಎಂ.ಎ. ಸಲೀಂ ಅವರಿಗೆ ದೂರು ಕೊಟ್ಟಿದ್ದಲ್ಲದೆ, ಅರ್ಧ ಗಂಟೆ ಟೈಮ್ ಕೊಟ್ಟರೆ ಕಮಿಷನರ್ ಕರ್ಮಕಾಂಡ ಬಿಚ್ಚಿಡುತ್ತೇನೆಂದು ಉಲ್ಲೇಖಿಸಿದ್ದ ದೂರಿನ ಪ್ರತಿಯನ್ನು ಮಾಧ್ಯಮಕ್ಕೆ ಲೀಕ್ ಮಾಡಿಸಿ ಸುದ್ದಿಯಾಗಿದ್ದರೆ, ಅದರ ಮರುದಿನವೇ ಮಂಗಳೂರಿಗೆ ಬಂದಿದ್ದ ಡಿಜಿಪಿ ಸಲೀಂ ಅವರೆದುರಲ್ಲಿ ಪೊಲೀಸ್ ಕಾನ್ಸ್ ಟೇಬಲ್ಗಳ ಕುಟುಂಬಸ್ಥರನ್ನು ಸೇರಿಸಿ ಕಮಿಷನರ್ ವಿರುದ್ಧ ದೂರು ಕೊಡಿಸಲಾಗಿದೆ. ದೂರು ಏನಂದ್ರೆ, ಹತ್ತು ವರ್ಷ ಸೇವೆ ಬಳಿಕ ತಮ್ಮೂರಿಗೆ ತೆರಳಲು ವರ್ಗಾವಣೆ ಆದೇಶ ಆಗಿದ್ದರೂ ನಮ್ಮವರನ್ನು ಕಮಿಷನರ್ ಹೋಗಲು ಬಿಡುತ್ತಿಲ್ಲ ಎಂಬುದು.


ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕಮಿಷನರ್ ಸುಧೀರ್ ರೆಡ್ಡಿ, ಜಿಲ್ಲೆಯಲ್ಲಿ ಒಟ್ಟು 801 ಪೊಲೀಸ್ ಸಿಬಂದಿ ಇರಬೇಕಾಗಿದ್ದು ಸದ್ಯಕ್ಕೆ 685 ಮಂದಿ ಇದ್ದಾರೆ. 116 ಹುದ್ದೆಗಳು ಖಾಲಿ ಇದ್ದು 14.4 ಶೇಕಡಾ ಕೊರತೆ ಇದೆ. ಈ ಪೈಕಿ 63 ಸಿಬಂದಿಯನ್ನು ವರ್ಗಾವಣೆ ಆಗಿದೆಯೆಂದು ನಾವು ಒಮ್ಮೆಲೇ ರಿಲೀವ್ ಮಾಡಿದರೆ ಕೊರತೆ ಪ್ರಮಾಣ 22.1 ಶೇ.ಕ್ಕೆ ಏರುತ್ತದೆ. 15 ಶೇಕಡಾ ಕೊರತೆ ಆಗುವಷ್ಟು ಪೊಲೀಸ್ ಸಿಬಂದಿಯನ್ನು ವರ್ಗಾವಣೆ ಮಾಡಬಾರದೆಂದು ಸರ್ಕಾರಿ ಆದೇಶ ಇದೆ.
ಸಮಸ್ಯೆ ಇಲ್ಲದೇ ಇರುತ್ತಿದ್ದರೆ ವರ್ಗಾವಣೆ ಆದವರನ್ನು ಇಟ್ಟುಕೊಳ್ಳುವ ಪ್ರಮೇಯ ಇರುತ್ತಿರಲಿಲ್ಲ. ಪೊಲೀಸ್ ಸಿಬಂದಿ ಒಳ್ಳೆಯ ಕೆಲಸ ಮಾಡಿದ್ದರಿಂದ ಮಂಗಳೂರು ಶಾಂತವಾಗಿದೆ ಎನ್ನುವ ಹೆಮ್ಮೆ ನನಗೂ ಇದೆ. ಇದರ ನಡುವೆ ಜಿಲ್ಲೆಯಲ್ಲಿ ಆಂತರಿಕ ವರ್ಗಾವಣೆ, ಭಡ್ತಿ ಇತ್ಯಾದಿ ಇರುತ್ತದೆ. ತಮ್ಮ ಊರುಗಳಿಗೆ ವರ್ಗಾವಣೆ ಆಗಿಲ್ಲ ಎನ್ನುವ ಅವರ ನೋವನ್ನೂ ಅರಿತುಕೊಂಡಿದ್ದೇನೆ. ಸಿಬಂದಿ ನೋವು ಅರಿಯುವುದರ ಜೊತೆಗೆ ನಗರದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿಯನ್ನೂ ಹೊಂದಿದ್ದೇನೆ ಎಂದು ಕಮಿಷನರ್ ಹೇಳಿಕೊಂಡಿದ್ದರು.

ಆರು ತಿಂಗಳ ಹಿಂದೆ ಮಂಗಳೂರಿಗೆ ಸುಧೀರ್ ರೆಡ್ಡಿ ಬಂದಂದಿನಿಂದಲೂ ಅವರನ್ನು ಎತ್ತಂಗಡಿ ಮಾಡಲು ಹಲವಾರು ಮಾಫಿಯಾಗಳು ಕೆಲಸ ಮಾಡುತ್ತಲೇ ಇದ್ದವು. ಯಾಕಂದ್ರೆ, ಕಮಿಷನರ್ ಬಂದ ಬಳಿಕ ಇಲ್ಲಿ ಎರ್ರಾಬಿರ್ರಿ ಎನ್ನುವಷ್ಟರ ಮಟ್ಟಿಗಿದ್ದ ದೋ ನಂಬರ್ ಬಿಸಿನೆಸ್ ನಿಂತು ಹೋಗಿದೆ. ಇಸ್ಪೀಟ್ ಕ್ಲಬ್, ಬೆಟ್ಟಿಂಗ್, ಕೋಮು ದ್ವೇಷದ ಪೋಸ್ಟ್ ಹಾಕಿ ಚಳಿ ಕಾಯಿಸುತ್ತಿದ್ದವರ ಚಳಿ ಬಿಡಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನೇ ದಾಳವಾಗಿಸಿದ್ದ ಡ್ರಗ್ಸ್, ಗಾಂಜಾ ಹಾವಳಿಯ ಬೆನ್ನುಹತ್ತಿ ಅದರ ಹಿಂದಿದ್ದ ಕುಳವನ್ನೇ ಬೆನ್ನತ್ತಿದ್ದಾರೆ. ಹೀಗಾಗಿ ಸಮಾಜ ಕಂಟಕರೆಲ್ಲ ವಿಲ ವಿಲ ಎನ್ನುವಂತಿದ್ದರೆ, ಜನಸಾಮಾನ್ಯರು ಒಂದಷ್ಟು ನೆಮ್ಮದಿ ಕಂಡಿದ್ದಾರೆ.
ಇದೇ ಕಾರಣಕ್ಕೆ ಮಂಗಳೂರಿನಲ್ಲಿ ಕಮಿಷನರ್ ಸುಧೀರ್ ರೆಡ್ಡಿ ಜನರ ಪಾಲಿಗೆ ಮೆಚ್ಚಿನ ಅಧಿಕಾರಿಯಾಗಿ ಬದಲಾಗಿದ್ದಾರೆ. ಹಿಂದೆ ವಿಜಯವಾಡದಲ್ಲಿ ಅಧಿಕಾರಿಯಾಗಿದ್ದಾಗಲೂ ರೆಡ್ಡಿ ಅವರನ್ನು ಅಲ್ಲಿನ ಜನರು ಬೀಳ್ಕೊಡುಗೆ ಸಂದರ್ಭ ಬಂದಾಗ ತೆರೆದ ಗಾಡಿಯಲ್ಲಿ ಮೆರವಣಿಗೆ ಮಾಡಿಸಿ ಹೂವಿನ ಮಳೆಗರೆದಿದ್ದರು. ಮಂಗಳೂರಿನಲ್ಲಿ ದೊಂಬಿ, ಗಲಾಟೆ ಆದಾಗ ಪೊಲೀಸರ ಮೌನವೇ ಕೋಮು ದ್ವೇಷಕ್ಕೆ ಕಾರಣವೆಂದು ಖಡಕ್ ಅಧಿಕಾರಿ ಸುಧೀರ್ ರೆಡ್ಡಿ ಅವರನ್ನು ನೇಮಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಅವರ ಇಚ್ಛೆಯಂತೆ, ಮಂಗಳೂರಿನಲ್ಲಿ ಕೋಮು ದ್ವೇಷದ ಸುದ್ದಿಗಳಿಗೆ ಸುಧೀರ್ ರೆಡ್ಡಿ ಬಂದ ಬಳಿಕ ಕಡಿವಾಣ ಬಿದ್ದಿತ್ತು.


ಈಗ ದಿಢೀರ್ ಎನ್ನುವಂತೆ ಮಂಗಳೂರಿನ ಕಮಿಷನರ್ ವ್ಯಾಪ್ತಿಗೇ ಬಾರದ ಎಸ್ಪಿಯೊಬ್ಬರು ಡಿಜಿಗೆ ದೂರು ನೀಡಿದ್ದಾರೆ. ಯಾವುದೋ ಹಳೆಕಾಲದ ವಿಷಯವನ್ನು ಕೆದಕಿ ಸುಧೀರ್ ರೆಡ್ಡಿ ಹೆಸರಿಗೆ ಕಳಂಕ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಇದರ ಬೆನ್ನಲ್ಲೇ ವರ್ಗಾವಣೆ ಆದರೂ ಬಿಟ್ಟುಕೊಟ್ಟಿಲ್ಲ ಎಂದು ಸರ್ಕಾರಿ ನೌಕರರಾದ ಪೊಲೀಸ್ ಸಿಬಂದಿ ತಮ್ಮ ಕುಟುಂಬಸ್ಥರನ್ನು ಛೂಬಿಟ್ಟು ಕಮಿಷನರ್ ವಿರುದ್ಧ ದೂರು ಕೊಡಿಸಿದ್ದಾರೆ. ಇವೆರಡೂ ಸಹಜ, ಕಾಕತಾಳೀಯ ಎನ್ನುವಂತೆ ತೋರುತ್ತಿಲ್ಲ. ಯಾಕಂದ್ರೆ, ಎಸ್ಪಿ ಕಾಶಿ ನಿವೃತ್ತಿಗಿನ್ನು ಆರು ತಿಂಗಳಷ್ಟೇ ಇರೋದಂತೆ. ಹಿಂದೆ ಸಿಐಡಿಯಲ್ಲಿದ್ದಾಗ ಜೊತೆಗಿದ್ದರು, ಆಗ ಸುಧೀರ್ ರೆಡ್ಡಿ ಕಿರುಕುಳ ಕೊಟ್ಟಿದ್ದರೆ ಆಗಲೇ ದೂರು ಕೊಡಬೇಕಿತ್ತೇ ವಿನಾ ನಿವೃತ್ತಿಯ ಅಂಚಿನಲ್ಲಿ ದೂರು ಕೊಟ್ಟು ಸುದ್ದಿ ಮಾಡೋದು ಸಹಜ ಎನಿಸುತ್ತಿಲ್ಲ. ಸರ್ಕಾರಿ ನೌಕರರು, ಅವರ ಕುಟುಂಬಸ್ಥರು ತಮ್ಮ ವರ್ಗಾವಣೆ ವಿಚಾರದಲ್ಲಿ ಮಾಧ್ಯಮಕ್ಕೆ ಹೇಳಿಕೆ ಕೊಟ್ಟು ಮೇಲಧಿಕಾರಿ ವಿರುದ್ಧ ದೂರುವುದೂ ಅಷ್ಟೇ ಅಸಹಜ. ಕಾನೂನು ಪ್ರಕಾರ ತಪ್ಪೂ ಆಗುತ್ತದೆ.
ಇವರೆಡೂ ಒಂದೇ ಸಮಯಕ್ಕೆ ಹೊತ್ತಿಕೊಂಡಿರುವುದರ ಹಿಂದೆ ಸುಧೀರ್ ರೆಡ್ಡಿಯನ್ನು ಎತ್ತಂಗಡಿ ಮಾಡುವ ಪ್ರಭಾವಿಗಳ ಕುಮ್ಮಕ್ಕು ಇರಬಹುದು ಅನ್ನುವ ಮಾತು ಕೇಳಿಬಂದಿದೆ. ಇದೇ ಕಾರಣಕ್ಕೆ ಮಂಗಳೂರಿನ ಪ್ರಜ್ಞಾವಂತರು, ಸಾಮಾಜಿಕ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಸುಧೀರ್ ರೆಡ್ಡಿ ಪರವಾಗಿ ಅಭಿಯಾನವನ್ನೂ ಆರಂಭಿಸಿದ್ದಾರೆ. ಪೊಲೀಸರ ಮಾಮೂಲಿಗೆ ಪೆಟ್ಟು ಬಿದ್ದರೂ ಜನಸಾಮಾನ್ಯರ ನಿದ್ದೆಗೆ ಭಂಗವಾಗಿಲ್ಲ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ದೋ ನಂಬರ್ ಬಿಸ್ನೆಸ್ ಬಂದ್ ಆಗಿದ್ದರಿಂದ ಹಿಂದಿನ ರೀತಿ ಮಾಮೂಲಿ ಕೊಡೋದು ಕಮ್ಮಿಯಾಗಿದೆ. ಜೊತೆಗೆ, ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ನಿರ್ಲಕ್ಷ್ಯ ವಹಿಸಿದರೆ ಕಮಿಷನರ್ ಬಳಿ ಹೋಗುತ್ತೇನೆ ಎಂದ ಕೂಡಲೇ ಎಚ್ಚರಗೊಳ್ಳುವಷ್ಟರ ಮಟ್ಟಿಗೆ ಪೊಲೀಸಿಂಗ್ ಸ್ಥಿತಿ ಬದಲಾಗಿದೆ.

ಅಪರಾಧ ಮಾಡಿ ವಿದೇಶಕ್ಕೆ ಹಾರಿದರೆ ಏನೂ ಆಗೋದಿಲ್ಲ ಎಂದ್ಕೊಂಡಿದ್ದವರನ್ನೂ ಪೊಲೀಸರು ಸದ್ದಿಲ್ಲದೆ ಎಳೆದು ತಂದಿದ್ದಾರೆ. ನೈತಿಕ ಪೊಲೀಸ್ ಗಿರಿಯಂತೂ ಇಲ್ಲವೇ ಇಲ್ಲ ಎನ್ನುವಷ್ಟು ದೂರವಾಗಿದೆ. ಇತ್ತೀಚೆಗೆ ಕೊಲೆಯಾಗಿದ್ದ ರೌಡಿಶೀಟರ್ ಆರಿಫ್ ಪ್ರಕರಣದಲ್ಲಿ ವಿದೇಶದಲ್ಲಿ ಕುಳಿತು ಹಣಕಾಸು ನೆರವು ನೀಡಿದವರನ್ನೂ ಆರೋಪಿಗಳನ್ನಾಗಿಸಿ, ಅಲ್ಲಿಂದ ಎಳೆತರುವ ಕೆಲಸ ಮಾಡಿರುವುದು ಪೊಲೀಸರ ಬಗ್ಗೆ ಜನರಲ್ಲಿ ನಂಬಿಕೆ ಹೆಚ್ಚಿಸಿದೆ. ಹೀಗಾಗಿ ಸಹಜವಾಗಿಯೇ ಸುಧೀರ್ ರೆಡ್ಡಿ ಪರ ನಾವಿದ್ದೇವೆ ಎಂದು ಜಾಲತಾಣದಲ್ಲಿ ಜನರು ಅಭಿಯಾನ ಶುರು ಮಾಡಿದ್ದಾರೆ. ರಾಜಕೀಯ ವಿರೋಧ, ಹಿಂದು- ಮುಸ್ಲಿಂ ಭೇದ ಇಲ್ಲದೆ ಪೋಸ್ಟ್ ಗಳನ್ನು ಹಾಕುತ್ತಿರುವುದು ಮಂಗಳೂರಿನ ಮಟ್ಟಿಗೆ ದೊಡ್ಡ ಬದಲಾವಣೆ.
A fresh controversy has erupted around Mangaluru Police Commissioner Sudheer Reddy, who has recently been credited with bringing communal tensions and illegal activities under control in the city within a short span. Allegations and internal complaints against him have now surfaced, triggering a strong public reaction in his support across social media. An officer identified as S. S. Kashi, currently serving as SP in the Enforcement Directorate (DCR-E) wing in Bengaluru, reportedly submitted a complaint against Reddy to DGP M. A. Saleem. The issue gained attention after the complaint was allegedly leaked to the media, with claims that serious allegations could be revealed against the Commissioner.
24-04-26 02:35 pm
HK News Staffer
‘ಪಿಯುಸಿ ಸೈನ್ಸ್’ ಗುಮ್ಮ ಮುಂದಿಟ್ಟು ದಂಧೆಗಿಳಿದ ಖಾಸ...
23-04-26 07:06 pm
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಭರ್ಜರಿ ದಾಖಲೆ ; ಒಟ್...
23-04-26 01:36 pm
ಪುತ್ತೂರಿನಲ್ಲಿ ಸಹಪಾಠಿ ಯುವತಿಗೆ ಮಗು ಪ್ರಕರಣ ; ಮದು...
23-04-26 01:07 pm
SSLC Results 2026: ಇಂದು ಮಧ್ಯಾಹ್ನ SSLC ಫಲಿತಾಂಶ...
23-04-26 10:54 am
24-04-26 07:35 pm
HK News Staffer
ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ಗ...
23-04-26 10:22 am
ಭಾರತಕ್ಕೆ ಬರುತ್ತಿದ್ದ ಮತ್ತೆ ಮೂರು ತೈಲ ಹಡಗು ಇರಾನ್...
22-04-26 09:10 pm
ರಾಹುಲ್ ದ್ವಿಪೌರತ್ವ ಪ್ರಕರಣ ; ವಿಚಾರಣೆಯಿಂದ ಹಿಂದೆ...
20-04-26 10:54 pm
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
24-04-26 07:10 pm
Giridhar Shetty, Mangaluru
ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಸ್ಪತ್ರೆ ಖಾಸಗಿ ತೆಕ್...
23-04-26 04:43 pm
ನಿರುದ್ಯೋಗಿಗಳಿಗೆ ಸುವರ್ಣಾವಕಾಶ ; ಮಂಗಳೂರಿನಲ್ಲಿ ಬೃ...
22-04-26 10:58 am
ಪುತ್ತೂರು ಜಾತ್ರೆಗೆ ಅಡ್ಡಿ ನೆಪ ; ಏಕಾಏಕಿ ಖಾಸಗಿ ಕಟ...
21-04-26 06:33 pm
ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್ಗೀಚಿ -...
21-04-26 02:36 pm
24-04-26 04:37 pm
HK News Staffer
ಪುತ್ತೂರಿನಲ್ಲಿ ಸಹಪಾಠಿಗೆ ಮಗು ಕರುಣಿಸಿದ ಪ್ರಕರಣ ;...
24-04-26 01:51 pm
ಮಡಿಕೇರಿಯಿಂದ ಬಂದು ತಣ್ಣೀರುಬಾವಿಯಲ್ಲಿ ಹುಟ್ಟುಹಬ್ಬ...
22-04-26 10:13 pm
ಖಾಸಗಿ ಬಸ್ಸಿನ ನಿರ್ಲಕ್ಷ್ಯದ ಚಾಲನೆ, ತಂದೆ- ಮಗಳಿದ್ದ...
22-04-26 08:41 pm
ಕ್ಷುಲ್ಲಕ ಕಾರಣಕ್ಕೆ ನೆರೆಕರೆ ಮನೆಯವರ ಬೀದಿ ಜಗಳ ; ತ...
22-04-26 04:02 pm