ಬ್ರೇಕಿಂಗ್ ನ್ಯೂಸ್
28-04-26 01:35 pm Mangaluru Correspondent ಕರಾವಳಿ
ಮಂಗಳೂರು, ಎಪ್ರಿಲ್ 28: ಉರ್ವ ಪೊಲೀಸ್ ಠಾಣೆಯ ಎಎಸ್‌ಐ ಐತ್ತಪ್ಪ ಅವರಿಗೆ ಕರ್ತವ್ಯದಲ್ಲಿದ್ದಾಗಲೇ ಹಲ್ಲೆ ನಡೆಸಿದ ಪ್ರಕರಣದಲ್ಲಿ ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ- 1) ಆರೋಪಿ ನಿಯಾಜ್ ನನ್ನು ಅಪರಾಧಿಯೆಂದು ಘೋಷಿಸಿದ್ದು 7 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸುರತ್ಕಲ್ ಕಾನ ನಿವಾಸಿ ಮಹಮ್ಮದ್ ನಿಯಾಜ್ (29) ಶಿಕ್ಷೆಗೊಳಗಾದ ಅಪರಾಧಿ.
2017 ರ ಏಪ್ರಿಲ್ 5ರಂದು ನಸುಕಿನ ನಾಲ್ಕು ಗಂಟೆ ವೇಳೆಗೆ ಎಎಸ್ಐ ಐತಪ್ಪ ಅವರು ಲೇಡಿಹಿಲ್ ಸರ್ಕಲ್ ಸಮೀಪ ಗಸ್ತು ಕರ್ತವ್ಯ ನಿರ್ವಹಿಸಲು ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ, ಬೈಕ್‌ನಲ್ಲಿ ಬಂದ ಇಬ್ಬರು ಯುವಕರನ್ನು ಐತ್ತಪ್ಪ ಅವರು ಪ್ರಶ್ನಿಸಿದ್ದು ಬೈಕ್ ಸವಾರ ಶಮೀರ್ ಎಂಬಾತ ನೀವು ಯಾವ ಸ್ಟೇಷನ್ ನವರು ಎಂದು ತುಳುವಿನಲ್ಲಿ ಪ್ರಶ್ನಿಸಿದ್ದಾನೆ. ಅದಕ್ಕೆ ನಾನು ಉರ್ವ ಠಾಣೆ ಸಿಬ್ಬಂದಿ ಎಂದು ಐತಪ್ಪರು ಉತ್ತರಿಸಿದ್ದಾರೆ. ಅಲ್ಲದೆ, ನೀವು ಈ ಸಮಯದಲ್ಲಿ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಯುವಕರನ್ನು ಪ್ರಶ್ನಿಸಿದ್ದಕ್ಕೆ ಸಮೀರ್ ತನ್ನ ಜತೆಗಿದ್ದ ಸಹ ಸವಾರ ಮೊಹಮ್ಮದ್ ನಿಯಾಜ್‌ಗೆ ಹೊಡೆಯುವಂತೆ ಬ್ಯಾರಿ ಭಾಷೆಯಲ್ಲಿ ಹೇಳಿದ್ದಾನೆ. ಆನಂತರ, ಬೈಕ್‌ನಿಂದ ಇಳಿದು ಇಬ್ಬರು ಕೂಡ ಕಬ್ಬಿಣದ ರಾಡ್ ನಿಂದ ಎಎಸ್‌ಐ ತಲೆಗೆ ಬಲವಾಗಿ ಹೊಡೆದಿದ್ದಾರೆ. ನೆಲಕ್ಕೆ ಬೀಳುತ್ತಿದ್ದಂತೆ, ಅಲ್ಲಿಂದ ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದರು. ಎರಡು ದಿನದಲ್ಲಿ ಆರೋಪಿಗಳಿಬ್ಬರನ್ನೂ ಅಂದು ಪೊಲೀಸರು ಬಂಧಿಸಿದ್ದರು.

ಪೊಲೀಸರ ಮೇಲೆ ಸೇಡು ಇತ್ತು :
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಟಿಪಳ್ಳ ನಿವಾಸಿ ಅಹ್ಮದ್ ಖುರೇಷಿ ಎಂಬಾತನನ್ನು ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ 2017ರ ಏ.4ರಂದು ಪಿಎಫ್ಐ ಕಾರ್ಯಕರ್ತರು ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಪೊಲೀಸರು ಲಾಠಿ ಚಾರ್ಜ್ ಮಾಡಿ, ಹಲವರನ್ನು ಬಂಧಿಸಿ ಕೇಸು ದಾಖಲಿಸಿದ್ದರು. ಇದೇ ದ್ವೇಷದಲ್ಲಿ ನಿಯಾಜ್ ಮತ್ತು ಸಮೀರ್ ಪೊಲೀಸ್ ಒಬ್ಬರನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಗುರಿ ಹೊಂದಿದ್ದರು. ಇದಕ್ಕಾಗಿ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಐತಪ್ಪ ಅವರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು ಎಂದು ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಿದ್ದರು.
ಆದರೆ ಆರೋಪಿಗಳಾದ ಸಮೀರ್ ಮತ್ತು ನಿಯಾಜ್ ಜಾಮೀನಿನಲ್ಲಿ ಹೊರಬಂದು ಆನಂತರ ತಲೆಮರೆಸಿಕೊಂಡಿದ್ದರು. ಸಮೀರ್ ವಿದೇಶಕ್ಕೆ ತೆರಳಿ ಅಲ್ಲಿಯೇ ಉಳಿದುಕೊಂಡಿದ್ದು ಆತನ ಪತ್ತೆಗಾಗಿ ಮಂಗಳೂರು ಪೊಲೀಸರು ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದಾರೆ. ನಿಯಾಜ್ 2023ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿ ಆನಂತರ ಮತ್ತೆ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ. ಆರು ತಿಂಗಳ ಹಿಂದೆ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ನಿಯಾಜ್ ನನ್ನು ಬಾಡಿ ವಾರೆಂಟ್ ಪಡೆದು ಉರ್ವಾ ಪೊಲೀಸರು ಕೋರ್ಟಿಗೆ ಹಾಜರು ಪಡಿಸಿದ್ದರು. ವಿಚಾರಣೆ ನಡೆದು ಪೊಲೀಸ್ ಸಿಬಂದಿಗೆ ಹೊಡೆದು ಕೊಲೆಗೆ ಯತ್ನಿಸಿದ್ದಕ್ಕಾಗಿ ಏಳು ವರ್ಷಗಳ ಶಿಕ್ಷೆ ಘೋಷಿಸಲಾಗಿದೆ.
ಎಫ್‌ಟಿಎಸ್‌ಸಿ- 1 ತ್ವರಿತ ಗತಿ ನ್ಯಾಯಾಲಯದ ನ್ಯಾಯಾಧೀಶ ಮೋಹನ ಜೆ.ಎಸ್. ಅವರು ಸಮಗ್ರ ವಿಚಾರಣೆ ನಡೆಸಿ 2ನೇ ಆರೋಪಿಯಾದ ಮೊಹಮ್ಮದ್ ನಿಯಾಜ್ ನನ್ನು ಅಪರಾಧಿ ಎಂದು ಸೋಮವಾರ ತೀರ್ಪು ಪ್ರಕಟಿಸಿದ್ದಾರೆ. ಅಂದಿನ ತನಿಖಾಧಿಕಾರಿ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಉದಯ ಎಂ. ನಾಯಕ್ ತನಿಖೆ ನಡೆಸಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದಲ್ಲಿ ಸಾಕ್ಷಿ ವಿಚಾರಣೆಯನ್ನು ಸರಕಾರಿ ಅಭಿಯೋಜಕರಾದ ಹರಿಶ್ಚಂದ್ರ ಉದ್ಯಾವರ ನಡೆಸಿದ್ದು, ಅನಂತರ ಸರಕಾರಿ ಅಭಿಯೋಜಕ ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.
ಆರೋಪಿಗೆ ಶಿಕ್ಷೆ ಪ್ರಮಾಣ ಘೋಷಣೆ :
ಭಾರತೀಯ ದಂಡ ಸಂಹಿತೆಯ ಕಲಂ: 332 ಜತೆ 34ರ ಪ್ರಕಾರ 2 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 10,000 ರೂ. ದಂಡ, ಕಲಂ 333- 34 ಪ್ರಕಾರ 3 ವರ್ಷ ಕಾಲ ಕಠಿಣ ಶಿಕ್ಷೆ ಮತ್ತು 15,000 ರೂ. ದಂಡ, ಕಲಂ: 307ರ ಜತೆ 34ರ ಪ್ರಕಾರ 7 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿದೆ. ದಂಡದ ಒಟ್ಟು ಮೊತ್ತ 50,000 ರೂ. ನಲ್ಲಿ 45,000 ರೂ. ಹಣವನ್ನು ಗಾಯಾಳು ಎಎಸ್‌ಐಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
28: In a significant judgment, the Additional District and Sessions Court (FTSC-1) in Dakshina Kannada has sentenced an accused to seven years of rigorous imprisonment in connection with the brutal assault on an Assistant Sub-Inspector (ASI) on duty. The convicted accused, Mohammed Niyaz (29), a resident of Surathkal, was found guilty of attacking ASI Aithappa of Urwa Police Station. It was alleged that, driven by this grudge, Niyaz and Sameer plotted to target and kill a police officer. Acting on this intention, they attacked ASI Aithappa while he was on duty.
26-04-26 08:05 pm
HK News Staffer
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
27-04-26 02:48 pm
HK News Staffer
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
28-04-26 01:35 pm
Mangaluru Correspondent
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ; 67 ಕ...
26-04-26 04:30 pm
ತಾಕೋಡೆ ಧರ್ಮನೇಮಕ್ಕೆ ಭಂಡಾರ ಒಯ್ಯುತ್ತಿದ್ದಾಗ ಕುಸಿದ...
25-04-26 01:45 pm
28-04-26 02:36 pm
Mangaluru Staffer
ರೈಲಿನಿಂದ ಕೈಜಾರಿ ಬಿದ್ದ ಮಗು ; ಚೈನ್ ಎಳೆದರೂ ನಿಲ್...
27-04-26 10:04 pm
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಪ್ರಮುಖ ಆ...
27-04-26 05:42 pm
ಉಡುಪಿಯಲ್ಲಿ ಕಟ್ಟಡಕ್ಕೆ ಬೆಂಕಿ ; ಮೊಬೈಲ್, ಹಾರ್ಡ್...
26-04-26 09:26 pm
ಚಾರ್ಮಾಡಿ ಘಾಟಿಯಲ್ಲಿ ಬಸ್ ಪಲ್ಟಿ; ಧರ್ಮಸ್ಥಳದಲ್ಲಿ ಮ...
26-04-26 09:23 pm