ಬ್ರೇಕಿಂಗ್ ನ್ಯೂಸ್
13-05-26 11:02 pm HK News Desk ಕರಾವಳಿ
ಮಂಗಳೂರು, ಮೇ 13: ಬೀಗ ಹಾಕಿರುವ ಮನೆಗಳಲ್ಲಿ ಸಂಭಾವ್ಯ ಕಳ್ಳತನವನ್ನು ತಡೆಯುವ ನಿಟ್ಟಿನಲ್ಲಿ ಅಂತಹ ಮನೆಗಳ ಮೇಲೆ ನಿಯಮಿತ ಪೊಲೀಸ್ ನಿಗಾವಹಿಸಲು ರಾಜ್ಯದ ವಿವಿಧೆಡೆ ಜಾರಿಗೆ ಬಂದಿರುವ "ಲಾಕ್ಡ್ ಹೌಸ್ ಬೀಟ್ ಸಿಸ್ಟಮ್' (ಎಲ್‌ಎಚ್‌ಬಿಎಸ್) ಅನ್ನು ಉಡುಪಿ ನಂತರ ಇದೀಗ ಮಂಗಳೂರು ಕಮಿನಷರೆಟ್ ವ್ಯಾಪ್ತಿಯಲ್ಲೂ ಅನುಷ್ಠಾನ ಮಾಡಲಾಗಿದೆ.
ಸಮುದಾಯ ಪೊಲೀಸ್ ಉಪಕ್ರಮದ ಭಾಗವಾಗಿರುವ "ಲಾಕ್ಸ್ ಹೌಸ್ ಬೀಟ್ ಸಿಸ್ಟಮ್' ಯೋಜನೆ ಮನೆಯನ್ನು ಕಳ್ಳತನದಿಂದ ರಕ್ಷಿಸಲು ಸಹಾಯ ಮಾಡಲಿದೆ. ಬೀಗ ಹಾಕಿರುವ ಮನೆಗಳ ಮೇಲೆ ನಿಯಮಿತ ನಿಗಾ ವಹಿಸುವ ಮೂಲಕ ಮನೆಯ ಮಾಲಕರು ವಾಪಾಸು ಬರುವವ ವರೆಗೆ ಸಂಪೂರ್ಣ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲಾಗಿತ್ತದೆ.
ಮನೆ ಮಾಲಕರು ಪ್ರವಾಸ, ಇತರ ಕಾರ್ಯಕ್ರಮಗಳಿಗಾಗಿ ಮನೆಗೆ ಬೀಗ ಹಾಕಿ ತಾತ್ಕಾಲಿಕವಾಗಿ ಹೊರಗೆ ಹೋಗುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡುವುದರಿಂದ ಅಂತಹ ಮನೆಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಸಾಧ್ಯವಾಗಲಿದೆ. ಈ ಯೋಜನೆ ವೈಯಕ್ತಿಕ ಮನೆಗಳಿಗೆ ಮಾತ್ರ ಅನ್ವಯಿಸುತ್ತದೆ. ಅಪಾರ್ಟ್ ಮೆಂಟ್ ಅಥವಾ ವಾಣಿಜ್ಯ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ನೀಡಿದವರ ಮನೆಯ ಪರಿಸರದಲ್ಲಿ ಪೊಲೀಸ್ ಬೀಟ್ ಹೆಚ್ಚಿಸಲಾಗುತ್ತದೆ. ರಾತ್ರಿಯ ಹೊತ್ತು ಪೊಲೀಸರು ಈ ಭಾಗದಲ್ಲಿ ಹೆಚ್ಚು ಓಡಾಟ ನಡೆಸುತ್ತಾರೆ. ಮನೆಯ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದರೆ ಗಮನಹರಿಸಲಿದ್ದಾರೆ.
ಯೋಜನೆಯ ಉದ್ದೇಶಗಳು;
ಬೀಗ ಹಾಕಿರುವ ಮನೆಗಳಲ್ಲಿ ಕಳ್ಳತನ ತಡೆಗಟ್ಟುವುದು.
ರಾತ್ರಿ ಗಸ್ತನ್ನು ಹೆಚ್ಚು ಪರಿಣಾಮಕಾರಿ ಆಗಿಸುವುದು.
ಅಪರಾಧ ತಡೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಹೆಚ್ಚಳ
ಸಾರ್ವಜನಿಕರು ಏನು ಮಾಡಬೇಕು ?
ಸಾರ್ವಜನಿಕರು ಮನೆಯನ್ನು ಕೆಲ ದಿನಗಳ ಮಟ್ಟಿಗೆ ಖಾಲಿ ಬಿಟ್ಟು ಹೋಗಲು ನಿರ್ಧರಿಸಿದ್ದರೆ ಅಂತಹ ಸಂದರ್ಭದಲ್ಲಿ ಪೊಲೀಸ್ ಕಂಟ್ರೋಲ್ ರೂಂ.ನ ವಾಟ್ಸ್ ಆ್ಯಪ್ ಸಂಖ್ಯೆಗೆ ಮಾಹಿತಿ ನೀಡಬಹುದು. ವಾಟ್ಸ್ ಆ್ಯಪ್ ನಲ್ಲಿ ಮನೆ ಮಾಲಕರ ಹೆಸರು, ಪೂರ್ಣ ವಿಳಾಸ, ಗೂಗಲ್ ಲೊಕೇಶನ್, ಮನೆಯಲ್ಲಿ ಇಲ್ಲದಿರುವ ದಿನಾಂಕ ಹಾಗೂ ಮನೆಯೊಂದಿಗೆ ಒಂದು ಸೆಲ್ಪಿಯನ್ನು ಕಳುಹಿಸಬೇಕು. ವಾಟ್ಸ್ ಆ್ಯಪ್ ಕಳುಹಿಸಬೇಕಾದ ಸಂಖ್ಯೆ 9480802321.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am