ಬ್ರೇಕಿಂಗ್ ನ್ಯೂಸ್
19-05-26 10:44 am HK News Staffer ಕರಾವಳಿ
ಮಂಗಳೂರು, ಮೇ 19: ಒಂದು ರೂಪಾಯಿಗೆ ಒಂದು ಶರ್ಟ್, 999 ರೂ.ಗೆ ಮೂರು ಬ್ಯಾಗಿ ಪ್ಯಾಂಟ್. ಬಜ್ಪೆ ಪೇಟೆಯಲ್ಲಿ ಬಟ್ಟೆ ಅಂಗಡಿ ಶುಭಾರಂಭಕ್ಕೆ ಹೀಗೊಂದು ಆಫರ್ ನೀಡಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಆಫರ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೊನ್ನೆ ಮೇ 17ರ ಭಾನುವಾರ ಜನರು ಸಾಗರೋಪಾದಿಯಲ್ಲಿ ಮುಗಿಬಿದ್ದು ಜಾಮ್ ಟೈಟ್ ಆಗಿತ್ತು.
ಮಂಗಳೂರು ಹೊರವಲಯದ ಬಜ್ಪೆ ಪೇಟೆಯಲ್ಲಿ ಬಟ್ಟೆ ಅಂಗಡಿಯ ಉದ್ಘಾಟನೆಯನ್ನು ಮೇ 17ರ ಭಾನುವಾರ ಏರ್ಪಡಿಸಲಾಗಿತ್ತು. ಜನರನ್ನು ಆಕರ್ಷಿಸಲು ಎಂಬಂತೆ ಒಂದು ರೂ.ಗೆ ಒಂದು ಆಕರ್ಷಕ ಶರ್ಟ್ ಎನ್ನುವ ಆಫರ್ ಇರೋದಾಗಿ ವಿಡಿಯೋ ಹರಿಯಬಿಡಲಾಗಿತ್ತು. ವಿಡಿಯೋ ಇನ್ ಸ್ಟಾ ಗ್ರಾಮ್ ಪೇಜ್ ಗಳಲ್ಲಿ ವೈರಲ್ ಆಗಿದ್ದು ಯುವ ಜನರು ಭಾರೀ ಸಂಖ್ಯೆಯಲ್ಲಿ ಮುಗಿಬಿದ್ದಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ, ಬಟ್ಟೆ ಅಂಗಡಿಯಲ್ಲಿ ಕಂಟ್ರೋಲ್ ಮಾಡಲಾಗದೆ ಜನರನ್ನು ಒಳಗೆ ಹೊರಗೆ ಕಳಿಸುವುದೇ ಅಸಾಧ್ಯ ಎನ್ನುವಂತಾಗಿತ್ತು.

ವಿಚಿತ್ರ ಅಂದರೆ, ಬಟ್ಟೆ ಅಂಗಡಿ ಉದ್ಘಾಟನೆಗೆಂದು ಬಂದಿದ್ದ ಶಾಸಕ ಉಮಾನಾಥ ಕೋಟ್ಯಾನ್ ಕೂಡ ಇವರ ಎಡೆಯಲ್ಲಿ ಸಿಕ್ಕಿಬೀಳುವಂತಾಗಿತ್ತು. ಜನರ ನಡುವೆ ಸಿಕ್ಕಿಬಿದ್ದು ಶಾಸಕರೇ ಅಪ್ಪಚ್ಚಿಯಾಗಿದ್ದು, ಅಲ್ಲಿಂದ ಹೊರಬರುವುದಕ್ಕೆ ಉಸ್ಸಪ್ಪಾ ಎನ್ನುವಂತಾಗಿತ್ತು. ಉಚಿತ ಕೊಡುತ್ತೇವೆ ಅಂದ್ರೆ ಎಷ್ಟೊಂದು ಜನ ಮುಗಿಬೀಳುತ್ತಾರೆ ಅನ್ನುವುದಕ್ಕೆ ಇಲ್ಲಿ ಸೇರಿದ್ದ ಜನರೇ ಸಾಕ್ಷಿಯಾಗಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಬಂದು ಸೇರಿದ್ದು, ಬ್ಯಾಗಿ ಪ್ಯಾಂಟ್, ಕಂಪನಿ ಶರ್ಟ್ ಗಳನ್ನು ಕೊಳ್ಳಲು ಮುಂದಾಗಿದ್ದರು. ಒಂದೇ ದಿನ ಅಂಗಡಿ ಮಳಿಗೆ ಖಾಲಿಯಾಗುವಷ್ಟರ ಮಟ್ಟಿಗೆ ಜನ ಸೇರಿದ್ದರು. ಆದರೆ ಮೊದಲು ಬಂದ ನೂರು ಜನರಿಗೆ ಮಾತ್ರ ಒಂದು ರೂ. ಶರ್ಟ್ ಆಫರ್ ಇತ್ತು. ಆದರೆ ಅಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದು ತೀವ್ರ ನೂಕುನುಗ್ಗಲು ಉಂಟಾಗಿತ್ತು.
₹1 shirt offer creates chaos in #Bajpe, #Mangaluru! Huge crowd gathers at a clothing store after viral social media promo. Even #MLAUmanathKotian got caught in the rush during the inauguration. Only first 100 customers were eligible for the offer. #Mangaluru #Bajpe pic.twitter.com/Mkx29731db
— Headline Karnataka (@hknewsonline) May 19, 2026
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am