ಪಿಲಿಕುಳ ಉದ್ಯಾನಕ್ಕೆ ಹೊಸ ಅತಿಥಿಗಳ ಆಗಮನ ; ರಿಯಾ, ಸ್ವಾಂಪ್ ಜಿಂಕೆ ಆಕರ್ಷಣೆ

11-03-21 12:59 pm       Mangalore Correspondent   ಕರಾವಳಿ

ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಎರಡು ಬಿಳಿ ರಿಯಾ, ಎರಡು ಕಂದು ರಿಯಾ ಹಾಗೂ ಮೂರು ಅಪರೂಪದ ಸ್ವಾಂಪ್ ಜಿಂಕೆಗಳು ಬಂದಿದ್ದು ಆಕರ್ಷಣೆ ಹೆಚ್ಚಿಸಿದೆ.‌ 

ಮಂಗಳೂರು, ಮಾ.11 : ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಎರಡು ಬಿಳಿ ರಿಯಾ, ಎರಡು ಕಂದು ರಿಯಾ ಹಾಗೂ ಮೂರು ಅಪರೂಪದ ಸ್ವಾಂಪ್ ಜಿಂಕೆಗಳು ಬಂದಿದ್ದು ಆಕರ್ಷಣೆ ಹೆಚ್ಚಿಸಿದೆ.‌ 

ಕೇರಳದ ತಿರುವನಂತಪುರದ ಮೃಗಾಲಯದಿಂದ ಈ ಪ್ರಾಣಿಗಳನ್ನು ತರಿಸಲಾಗಿದೆ. ಇದೇ ವೇಳೆ ಪಿಲಿಕುಳ ಮೃಗಾಲಯದಿಂದ ಮೂರು ಕಾಳಿಂಗ ಸರ್ಪ ಹಾಗೂ ನಾಲ್ಕು ವಿಟೇಕರ್ಸ್ ಹಾವುಗಳನ್ನು ತಿರುವನಂತಪುರಕ್ಕೆ ವರ್ಗಾಯಿಸಲಾಗಿದೆ.

ನೂತನ ಅತಿಥಿಗಳು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವೀಕ್ಷಣೆಗೆ ಲಭ್ಯವಿದ್ದು, ರಿಯಾ ಅಮೆರಿಕ ಮೂಲದ ಉಷ್ಟ್ರ ಪಕ್ಷಿ ಜಾತಿಗೆ ಸೇರಿದ್ದಾಗಿದೆ. ದಕ್ಷಿಣ ಅಮೆರಿಕದ ಅತಿ ದೊಡ್ಡ ಹಾರಾಡುವ ಪಕ್ಷಿ ಇದಾಗಿದ್ದು, ಹಸಿರು ಸಸ್ಯಗಳು, ಧಾನ್ಯಗಳು, ಹುಳು ಹುಪ್ಪಟೆಗಳು ಇವುಗಳ ಆಹಾರ ಹಾಗೂ ಇವುಗಳು ಅತಿ ವೇಗವಾಗಿ ಓಡಬಲ್ಲವು. ಸ್ವಾಂಪ್ ಜಿಂಕೆಗಳ ಕೊಂಬುಗಳು ಒಂದರಿಂದ 12ರ ವರೆಗೆ ಕವಲೊಡೆದು ಬೆಳೆಯುವುದು ವಿಶೇಷ. ಇದರಿಂದ ಇವುಗಳನ್ನು ಬಾರಾಸಿಂಘಾ ಎಂದೂ ಕರೆಯುತ್ತಾರೆ. ಇವೆಲ್ಲವೂ ಅಳಿವಿನಂಚಿನಲ್ಲಿರುವ ಜೀವಿಗಳು ಎಂದು ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.

White Rhea, Brown Rhea and Swamp Deer are the new attractions at Pilikula Biological Park now. The park has brought them from Thiruvananthapuram zoo, Kerala, under the animal exchange programme.