ಬ್ರೇಕಿಂಗ್ ನ್ಯೂಸ್
11-03-21 05:36 pm Mangalore Correspondent ಕರಾವಳಿ
ಮಂಗಳೂರು, ಮಾ.11;ತನ್ನ ಮನೆ ಮಂಚದಲ್ಲೇ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ದುರಂತ ಸಾವು ಕಂಡ ಪ್ರಕರಣದಲ್ಲಿ ವಿಕೃತ ರಾಜಕೀಯ ಮೇಳೈಸಿದ್ದು ಪ್ರಕರಣದ ನೈಜತೆ ಮರೆಮಾಚಲು ತೆರೆಮರೆಯ ಕಸರತ್ತು ನಡೆದಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಈ ನಡುವೆ, ಯುವತಿಯ ಅಸಹಜ ಸಾವಿನ ಬಗ್ಗೆ ನ್ಯಾಯ ಕೇಳಬೇಕಿದ್ದ ಹಿಂದು ಸಂಘಟನೆಗಳು ಮಾತ್ರ ಮೌನಕ್ಕೆ ಜಾರಿವೆ.
ಕುಂಪಲದ ಆಶ್ರಯ ಕಾಲನಿ ನಿವಾಸಿಗಳಾದ ಚಿತ್ತಪ್ರಸಾದ್ ಮತ್ತು ವನಿತಾ ದಂಪತಿಯ ಕಿರಿಯ ಪುತ್ರಿ, 17ರ ಹರೆಯದ ಪ್ರೇಕ್ಷಾ ಬುಧವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ತಾಯಿ ಅಂಗನಾಡಿ ಕಾರ್ಯಕರ್ತೆಯಾಗಿದ್ದು ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಬಂದಾಗ ಎದುರಿನ ಬಾಗಿಲು ಒಳಗಿಂದ ಲಾಕ್ ಆಗಿದ್ದರೆ, ಹಿಂಬಾಗಿಲು ತೆರೆದಿತ್ತು. ಹಿಂಬಾಗಿಲಿನಿಂದ ಮನೆಯೊಳಗೆ ನೋಡಿದಾಗ ಪ್ರೇಕ್ಷಾ ಮಂಚದ ಮೇಲೆ ಚೇರ್ ನಲ್ಲಿ ಕುಳಿತ ಸ್ಥಿತಿಯಲ್ಲೇ ನೇಣು ಬಿಗಿದು ಸಾವನ್ನಪ್ಪಿದ್ದು ಕಂಡು ಬಂದಿದ್ದಳು.
ಹವ್ಯಾಸಿ ರೂಪದರ್ಶಿಯಾಗಿದ್ದ ಪ್ರೇಕ್ಷಾ ಬುಧವಾರ ಮಧ್ಯಾಹ್ನ ಫೋಟೊ ಶೂಟ್ ಗಾಗಿ ಬೆಂಗಳೂರಿಗೆ ತೆರಳಬೇಕಿತ್ತು. ಅದಕ್ಕಾಗಿ ಕಾಲೇಜಿಗೆ ರಜೆ ಹಾಕಿ, ಮನೆಯಲ್ಲೇ ಸಿದ್ಧತೆ ನಡೆಸಿದ್ದಳು. ಆದರೆ, ಈ ನಡುವೆ ಪ್ರೇಕ್ಷಾಗೆ ಕುತ್ತಾರು ಮುಂಡೋಳಿಯ ಯತಿರಾಜ್ ಗಟ್ಟಿ ಎಂಬಾತನೊಂದಿಗೆ ಲವ್ ಇತ್ತೆನ್ನಲಾಗಿದ್ದು ಆತನಿಗೆ ಈಕೆ ಫೋಟೊ ಶೂಟ್ ನಲ್ಲಿ ಪಾಲ್ಗೊಳ್ಳುವುದು ಇಷ್ಟವಿರಲಿಲ್ಲ. ಪ್ರೇಕ್ಷಾ ಬೆಂಗಳೂರಿಗೆ ಫೊಟೋ ಶೂಟ್ ಗೆ ತೆರಳುವುದಕ್ಕೆ ಯತಿರಾಜ್ ವಿರೋಧ ವ್ಯಕ್ತಪಡಿಸಿದ್ದ. ಅದೇ ಕಾರಣಕ್ಕೆ ಬುಧವಾರ ಮಧ್ಯಾಹ್ನ ಯತಿರಾಜ್ ಜೊತೆಗೆ ಸುಹಾನ್, ಸೌರವ್, ಭವಿತ್ ಸೇರಿ ನಾಲ್ವರು ಯುವಕರು ಪ್ರೇಕ್ಷಾಳ ಮನೆಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದ್ದು ಮನೆ ಹತ್ತಿರ ಠಳಾಯಿಸಿದ್ದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಾಲ್ವರೂ ಮಾದಕ ವ್ಯಸನಿಗಳೆಂದು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿಯನ್ವಯ ಪೊಲೀಸರು ಯತಿರಾಜ್, ಸುಹಾನ್, ಸೌರವ್ ನನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಭಾವಿ ಕಾಂಗ್ರೆಸ್ ಪುಢಾರಿಯ ಪುತ್ರ ಭೂಗತ !
ಸ್ಥಳೀಯರು ನಾಲ್ವರ ಹೆಸರು ನೀಡಿದ್ದರೂ, ಪೊಲೀಸರು ಮೂವರನ್ನ ಮಾತ್ರ ವಶಕ್ಕೆ ತೆಗೆದಿದ್ದಾರೆ. ಇನ್ನೋರ್ವ ಭವಿತ್ ಭೂಗತನಾಗಿದ್ದಾನೆ. ಭವಿತ್ ಕುಂಪಲದ ಪ್ರಭಾವಿ ಕಾಂಗ್ರೆಸ್ ಪುಢಾರಿಯ ಮಗನಾಗಿದ್ದು ಪೊಲೀಸರ ಕೈಗೆ ತಲೆಮರೆಸಿಕೊಂಡಿದ್ದಾನೆ. ಕುಂಪಲ ಪರಿಸರದಲ್ಲಿ ಗಾಂಜಾ ವಹಿವಾಟಿನಲ್ಲಿ ಭವಿತ್ ಇದ್ದಾನೆ ಎಂಬ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ. ಭವಿತ್ ಈ ಹಿಂದೊಮ್ಮೆ ಕ್ರಿಮಿನಲ್ ಪ್ರಕರಣದಲ್ಲಿ ಸಿಕ್ಕಿಬಿದ್ದಾಗ ಕಾಂಗ್ರೆಸ್ ನಾಯಕರ ಪ್ರಭಾವದಿಂದಲೇ ಬಚಾವ್ ಆಗಿದ್ದ. ಮತ್ತೊಮ್ಮೆ ಭವಿತ್ ನನ್ನು ರಕ್ಷಿಸಲು ಮತ್ತು ಇಡೀ ಪ್ರಕರಣವನ್ನು ಹಳ್ಳ ಹಿಡಿಸಲು ಕ್ಷೇತ್ರದ ಪ್ರಭಾವಿ ಶಾಸಕರೇ ಪೊಲೀಸ್ ಇಲಾಖೆಗೆ ಒತ್ತಡವನ್ನು ಹಾಕಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ.
ಹಿಂಬಾಗಿಲನ್ನು ಒಡೆದು ಒಳ ನುಗ್ಗಿದವರು ಯಾರು..?
ಪ್ರೇಕ್ಷಾಳ ತಾಯಿ ಬುಧವಾರ ಮಧ್ಯಾಹ್ನ ಮನೆಗೆ ಬಂದಾಗ ಹಿಂಬಾಗಿಲು ತೆರದಿದ್ದನ್ನು ನೋಡಿದ್ದಾರೆ. ಆದರೆ, ಬಾಗಿಲನ್ನು ಒಡೆದು ಹಾಕಿದ್ದನ್ನು ಗಮನಿಸಿರಲಿಲ್ಲ. ಸಾವಿನ ಘಟನೆ ತಿಳಿಯುತ್ತಿದ್ದಂತೆ ಕಮಿಷನರ್ ಶಶಿಕುಮಾರ್ ಸಹಿತ ಪೊಲೀಸರ ತಂಡ ಇಡೀ ಮನೆಯನ್ನ ಸುಪರ್ದಿಗೆ ತೆಗೆದು ಜಾಲಾಡಿತ್ತು. ಆಕೆಯ ಮೊಬೈಲ್ ಸಿಕ್ಕಿಲ್ಲವೆಂದು ಬಹಳಷ್ಟು ಹುಡುಕಾಟ ನಡೆಸಿದ್ದರು. ಆದರೆ, ಹಿಂಬಾಗಿಲಿನ ಚಿಲಕ ಒಡೆದಿದ್ದನ್ನು ಪೊಲೀಸರು ಗಮನಿಸಿಲ್ಲ. ಇಂದು ಮನೆಮಂದಿ ಪರಿಶೀಲಿಸಿದಾಗ ಹಿಂಬಾಗಿಲಿನ ಚಿಲಕವನ್ನು ಒಡೆದು ಹಾಕಿದ್ದು ಕಂಡುಬಂದಿದೆ. ಈ ಬಗ್ಗೆ ಸ್ಥಳೀಯರು ಉಳ್ಳಾಲ ಪೊಲೀಸರ ಗಮನಕ್ಕೆ ತಂದಿದ್ದಾರೆ. ನಾಲ್ವರು ಯುವಕರು ಮನೆಯತ್ತ ಆಗಮಿಸಿದಾಗ, ಪ್ರೇಕ್ಷಾ ಬಾಗಿಲಿಗೆ ಚಿಲಕ ಹಾಕಿ ಒಳಸೇರಿದ್ದಳು ಎನ್ನಲಾಗಿತ್ತು. ಇದೇ ವೇಳೆ, ಗಾಂಜಾ ವ್ಯಸನಿ ಯುವಕರು ಹಿಂಬಾಗಿಲನ್ನು ಒಡೆದು ಮನೆಗೆ ನುಗ್ಗಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ, ಆಕೆಯ ಮೊಬೈಲ್ ಪೊಲೀಸರ ಹುಡುಕಾಟದ ಬಳಿಕ ರ್ಯಾಕ್ ಮೇಲ್ಭಾಗದಲ್ಲಿ ಪತ್ತೆಯಾಗಿತ್ತು. ಆಗಂತುಕರು ಮೊಬೈಲನ್ನು ಮೇಲಕ್ಕೆ ಎಸೆದಿದ್ದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗಿದೆ.
ಸಾವಿಗೂ ಮುನ್ನ ವಿಡಿಯೋ ಮಾಡಿಟ್ಟಿದ್ದಳೇ ?!
ಪ್ರೇಕ್ಷಾ ಸಾವಿನ ಸಂದರ್ಭ ಮನೆಯವರು ಯಾರೂ ಇರಲಿಲ್ಲ. ಅಲ್ಲಿನ ಘಟನೆಗೆ ಅಕ್ಕಪಕ್ಕದ ನಿವಾಸಿಗಳೇ ಸಾಕ್ಷಿಗಳು. ಪ್ರೇಕ್ಷಾ ಸಾಯೋದಕ್ಕೂ ಮುನ್ನ ಪ್ರೇಮಿ ಯತಿರಾಜ್ ಗೆ ಸಾಯುತ್ತೇನೆ ಎಂಬ ಮೊಬೈಲ್ ಸಂದೇಶ ರವಾನಿಸಿದ್ದಾಳೆ ಎನ್ನಲಾಗುತ್ತಿದೆ. ಅಲ್ಲದೆ ಸಾಯೋದಕ್ಕಿಂತಲೂ ಮೊದಲು ಪ್ರೇಕ್ಷಾ ಮೊಬೈಲಲ್ಲಿ ಒಂಬತ್ತು ನಿಮಿಷಗಳ ವೀಡಿಯೋ ದಾಖಲಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಪ್ರೇಮಿ ಯತಿರಾಜ್ ಮತ್ತು ಇತರ ಯುವಕರು ಅಲ್ಲಿಗೆ ಆಗಮಿಸಿದ್ದರೇ ಎನ್ನುವ ಬಗ್ಗೆ ಉತ್ತರ ಇಲ್ಲ. ಎಲ್ಲದಕ್ಕೂ ಉತ್ತರ ನೀಡಬೇಕಾದ ಪೊಲೀಸ್ ಇಲಾಖೆಯೇ ಮರಣೋತ್ತರ ಪರೀಕ್ಷೆಯ ವರದಿ ಬರುವ ಮೊದಲೇ ಯುವತಿ ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದೆ.
ಗಾಂಜಾ ವ್ಯಸನಿಗಳೇ ಧಮ್ಕಿ ಹಾಕುತ್ತಾರೆ !
ಸ್ಥಳೀಯರ ಪ್ರಕಾರ, ಗಾಂಜಾ ವ್ಯಸನಿಗಳ ಒತ್ತಡವೇ ಸಾವಿಗೆ ಕಾರಣ ಎನ್ನುವ ಅಂಶ ವ್ಯಕ್ತವಾಗಿದೆ. ಕುಂಪಲದಲ್ಲಿ ಗಾಂಜಾ ವ್ಯಸನಿಗಳ ಕಾಟ ಜೋರು ಇರುವುದರ ಬಗ್ಗೆ ಬಹಳಷ್ಟು ಬಾರಿ ಸ್ಥಳೀಯರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಆದರೆ, 15 ರಷ್ಟು ಮಂದಿ ಹುಡುಗರು ಗಾಂಜಾ ವಹಿವಾಟು ನಡೆಸುತ್ತಿದ್ದು ಅದೇ ಕಾರಣದಿಂದ ಅಲ್ಲಿಗೆ ಸುಲಭದಲ್ಲಿ ಗಾಂಜಾ ರವಾನೆಯಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ, ನೋಡಿಕೊಳ್ತೇವೆ ಎಂಬ ಧಮ್ಕಿ ಹಾಕುತ್ತಾರಂತೆ. ಇಂದು ಬೆಳಗ್ಗೆ ಹುಡುಗಿಯ ಶವದ ಅಂತ್ಯಸಂಸ್ಕಾರದ ಬಳಿಕ ಸ್ಥಳೀಯರು ಹಿಂತಿರುಗುತ್ತಿದ್ದಾಗ ಅಲ್ಲಿ ಸೇರಿದ್ದ ಕೆಲವು ಯುವಕರು ಧಮ್ಕಿ ಹಾಕಿದ್ದಾರಂತೆ. ಪೊಲೀಸರು, ಕಾನೂನಿನ ಭಯ ಇಲ್ಲದೆ ವರ್ತಿಸುತ್ತಿದ್ದಾರೆ ಎಂಬ ಮಾತನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
Video:
Young Model from Kumpala who was found dead in a mysterious way has got a lot of twist and turns. A top Congress leader is trying to change of dimension of this case has been revealed.
16-07-25 11:47 am
HK News Desk
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 11:42 am
Mangalore Correspondent
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm