ಬಂಗುಡೆ ಬದಲು ಬಲೆಗೆ ಬಿದ್ದ ಬೃಹತ್ ಗಾತ್ರದ ಶಾರ್ಕ್ ; ಹಿಡಿಯದೆ ಬಿಟ್ಟ ಮೀನುಗಾರರು

15-03-21 12:12 pm       Mangalore Correspondent   ಕರಾವಳಿ

ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಯಲ್ಲಿ ಬೃಹತ್ ಗಾತ್ರದ ಶಾರ್ಕ್ ಮೀನು ಸೆರೆಸಿಕ್ಕ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು, ಮಾ.15 : ಪರ್ಸಿನ್ ಬೋಟಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಂಗುಡೆ ಮೀನುಗಳಿಗೆಂದು ಹಾಕಿದ್ದ ಬಲೆಯಲ್ಲಿ ಬೃಹತ್ ಗಾತ್ರದ ಶಾರ್ಕ್ ಮೀನು ಸೆರೆಸಿಕ್ಕಿದ್ದರಿಂದ ಮೀನುಗಾರರು ಅಚ್ಚರಿಗೊಂಡ ಪ್ರಸಂಗ ನಡೆದಿದೆ. 

ಸಾಮಾನ್ಯವಾಗಿ ಪರ್ಸೀನ್ ಬೋಟ್ ನಲ್ಲಿ ಕಿಲೋಮೀಟರ್ ಉದ್ದದ ಬಲೆಗಳಿರುತ್ತವೆ. ನೀರಿನ ಮೇಲ್ಮೈನಲ್ಲಿ ಗುಂಪಾಗಿ ಚಲಿಸುವ ಮೀನುಗಳನ್ನು ಮಾತ್ರ ಹಿಡಿಯುವುದಕ್ಕೆ ಈ ಬಲೆಗಳನ್ನು ಬಳಸುತ್ತಾರೆ. ಬೂತಾಯಿ, ಬಂಗುಡೆ ಸೇರಿ ಕರಾವಳಿ ಜನ ಆಹಾರಕ್ಕೆ ಬಳಸುವ ಇನ್ನಿತರ ಸಣ್ಣ ಮೀನುಗಳು ಈ ಬಲೆಗೆ ಸಿಗುತ್ತವೆ.

ಈ ರೀತಿಯ ಮೀನುಗಳ ಗುಂಪಲ್ಲಿ ದೊಡ್ಡ ಮೀನುಗಳು ಇರುವುದಿಲ್ಲ.‌ ಸಣ್ಣ ಮೀನುಗಳನ್ನು ತಿನ್ನಲು ದೊಡ್ಡ ಮೀನು ಬಂದ ಕೂಡಲೇ ಅವುಗಳ ಗುಂಪು ಕೂಡ ಚದುರುತ್ತವೆ. ಹೀಗಾಗಿ ಈ ಗುಂಪಿನ ಮಧ್ಯೆ ಶಾರ್ಕ್ ಮೀನು ಕಾಣ ಸಿಗುವುದು ಕಡಿಮೆ. ಆದರೆ, ಇಲ್ಲಿ ಇಂಥದ್ದೇ ಬಂಗುಡೆ ಮೀನುಗಳ ಗುಂಪಿಗೆ ಹಾಕಿದ್ದ ಬಲೆಯಲ್ಲಿ ಶಾರ್ಕ್ ಸಿಲುಕಿದ್ದು ಅದನ್ನು ನೋಡಿ ಮೀನುಗಾರರೇ ಅಚ್ಚರಿಗೊಂಡಿದ್ದಾರೆ. 
 
ಮಂಗಳೂರಿನ ಬೆಂಗ್ರೆಯಿಂದ ತೆರಳಿದ್ದ ಶ್ರೀದುರ್ಗಾ ರಕ್ಷಾ ಪರ್ಸೀನ್ ಬೋಟಿನಲ್ಲಿ ಶಾರ್ಕ್ ಮೀನು ಸೆರೆಯಾಗಿತ್ತು. ಬಳಿಕ ಮೀನುಗಾರರು, ಅದನ್ನು ಹಿಡಿಯದೆ ಮರಳಿ ಸಮುದ್ರಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರಂತೆ.

Parsee boat that left from Bengre went deep fishing from Mangalore has caught a huge blue whale shark.