ಕೋವಿಡ್ ; ಹೈರಿಸ್ಕ್ ಝೋನಲ್ಲಿ ಮಂಗಳೂರು ! ದೇಶದಲ್ಲಿ 70 ಜಿಲ್ಲೆಗಳ ಪಟ್ಟಿ ಬಿಡುಗಡೆ

18-03-21 02:42 pm       Mangalore Correspondent   ಕರಾವಳಿ

ಅಪಾಯಕಾರಿ ಜಿಲ್ಲೆಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡವೂ ಒಳಗೊಂಡಿದೆ ಎನ್ನುವ ವಿಚಾರವನ್ನು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ದೃಢಪಡಿಸಿದ್ದಾರೆ.

ಮಂಗಳೂರು, ಮಾ.18: ಕೊರೊನಾ ಎರಡನೇ ಅಲೆ ಹಬ್ಬುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ದೇಶದಲ್ಲಿ 70 ಜಿಲ್ಲೆಗಳನ್ನು ಹೈರಿಸ್ಕ್ ಝೋನ್ ಎಂದು ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಪಾಯಕಾರಿ ಜಿಲ್ಲೆಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡವೂ ಒಳಗೊಂಡಿದೆ ಎನ್ನುವ ವಿಚಾರವನ್ನು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ದೃಢಪಡಿಸಿದ್ದಾರೆ.

ಮಾರ್ಚ್ 1ರಿಂದ 15ರ ನಡುವೆ ಕೊರೊನಾ ರಿಪೋರ್ಟ್ ಆಗಿರುವ ಬಗ್ಗೆ ಕೇಂದ್ರ ಸರಕಾರ ಮಾಹಿತಿ ಪಡೆದಿತ್ತು. ದೇಶದ ಎಲ್ಲ ಜಿಲ್ಲೆಗಳಿಂದಲೂ ಪ್ರತಿದಿನ ವರದಿಯಾದ ಕೊರೊನಾ ಪಾಸಿಟಿವ್ ಅಂಕಿ ಅಂಶಗಳನ್ನು ಆಧರಿಸಿ, ಹೈರಿಸ್ಕ್ ಝೋನ್ ಎಂದು ಪಟ್ಟಿ ಮಾಡಲಾಗಿದೆ. ಹದಿನೈದು ದಿನಗಳಲ್ಲಿ ಕೊರೊನಾ ಸೋಂಕಿನ ಹೆಚ್ಚಳ ಆಗಿರುವುದನ್ನು ಈ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 70 ಜಿಲ್ಲೆಗಳು ಕರ್ನಾಟಕ, ಕೇರಳ, ಗುಜರಾತ್, ಮಹಾರಾಷ್ಟ್ರ ಮತ್ತು ಪಂಜಾಬ್ ನಲ್ಲಿದ್ದು ಈ ಐದು ರಾಜ್ಯಗಳಲ್ಲಿ ಹೆಚ್ಚು ನಿಗಾ ವಹಿಸಲು ಮೋದಿ ಆಯಾ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಸೂಚನೆ ನೀಡಿದ್ದರು. ಅಲ್ಲದೆ, ಪಟ್ಟಿಯಲ್ಲಿರುವ 70 ಜಿಲ್ಲೆಗಳಲ್ಲಿ ಜನ ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸುವಂತೆ ಸೂಚನೆ ನೀಡಿದ್ದರು.

ಕರ್ನಾಟಕದಲ್ಲಿ ದಕ್ಷಿಣ ಕನ್ನಡ ನಾಲ್ಕನೇ ಸ್ಥಾನದಲ್ಲಿದ್ದು, ಮೊದಲ ಹಂತದಲ್ಲಿ ಬೀದರ್, ಕಲ್ಬುರ್ಗಿ, ಮೈಸೂರು, ಬೆಂಗಳೂರು ಇದೆ. ಹೈ ರಿಸ್ಕ್ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ಇವೂ ಇದ್ದು, ಸಿಎಂ ಯಡಿಯೂರಪ್ಪ ಈಗಾಗ್ಲೇ ವಿಧಿಸಲಾಗಿರುವ ನಿಯಮಗಳನ್ನು ಬಿಗಿ ಗೊಳಿಸಲು ಸೂಚನೆ ನೀಡಿದ್ದಾರೆ. ಒಳಾಂಗಣದಲ್ಲಿ ನಡೆಯುವ ಯಾವುದೇ ರೀತಿಯ ಮದುವೆ, ಇನ್ನಿತರ ಸಮಾರಂಭಗಳಲ್ಲಿ 200ಕ್ಕು ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು, ಇದರ ಜೊತೆಗೆ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸೂಚನೆ ಜಿಲ್ಲಾಡಳಿತಗಳಿಗೆ ನೀಡಿದ್ದಾರೆ. 

ಮಾಸ್ಕ್ ಧರಿಸದೆ ಹೊರಗೆ ತೆರಳುವಂತಿಲ್ಲ ! ಕೊರೊನಾ ತಡೆಗೆ ಸಿಎಂ ಕಠಿಣ ನಿಯಮ ಜಾರಿ

ಕೊರೊನಾ ಹರಡದಂತೆ ಎಚ್ಚರ ವಹಿಸಿ ; ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಸೂಚನೆ

Covid second wave Dakshina Kannada listed for high-risk zone among India's 70 districts said DC of Mangalore Dr Rajendra Kumar.