ಬ್ರೇಕಿಂಗ್ ನ್ಯೂಸ್
21-03-21 03:03 pm Mangaluru correspondent ಕರಾವಳಿ
ಉಳ್ಳಾಲ, ಮಾ.21: ದೈವಗಳಿಗೆ ಸಲ್ಲುವ ಕೋಲ, ನೇಮಗಳಿಂದು ಉತ್ಸವಗಳಾಗಿ ಪರಿವರ್ತನೆಯಾಗಿದ್ದು ಫ್ಲೆಕ್ಸ್ ಮತ್ತು ಜಾಲತಾಣಗಳಲ್ಲಿ ದೈವ ಕಟ್ಟುವವರ ಭಾವಚಿತ್ರಗಳನ್ನು ವಿಕೃತವಾಗಿ ಪ್ರದರ್ಶಿಸುತ್ತಿರುವ ಹಿಂದು ಯುವ ಪೀಳಿಗೆಯ ಮನಸ್ಥಿತಿ ಮೊದಲು ಬದಲಾದರೆ ನಮ್ಮ ಸಂಸ್ಕೃತಿಯ ಉಳಿವು ಸಾಧ್ಯವೆಂದು ತುಳು ಜನಪದ ವಿಧ್ವಾಂಸ ಕೆ.ಕೆ. ಪೇಜಾವರ ಹೇಳಿದರು.
ಹಿಂದುಗಳ ಶ್ರದ್ಧಾ ಕ್ಷೇತ್ರಗಳಲ್ಲಿ ಕೆಲವು ಸಮಯಗಳಿಂದ ನಡೆಯುತ್ತಿರುವ ವಿಧ್ವಂಸಕ, ವಿಕೃತ ಕೃತ್ಯಗಳನ್ನು ವಿರೋಧಿಸಿ ಮಂಗಳೂರು ವಿಶ್ವ ಹಿಂದು ಪರಿಷತ್, ಬಜರಂಗದಳ ನೇತೃತ್ವದಲ್ಲಿ ಕದ್ರಿ ಮಂಜುನಾಥೇಶ್ವರ ಕ್ಷೇತ್ರದಿಂದ ಕುತ್ತಾರು ಕೊರಗಜ್ಜನ ಆದಿ ಕ್ಷೇತ್ರದ ವರೆಗೆ "ಕೊರಗಜ್ಜನ ಆದಿ ಕ್ಷೇತ್ರಗು ನಮ್ಮ ನಡೆ" ಹೆಸರಲ್ಲಿ ನಡೆದ ಬೃಹತ್ ಪಾದಯಾತ್ರೆಯ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದೈವಗಳು ಲೌಕಿಕ ಮತ್ತು ಅಲೌಕಿಕವಾಗಿ ಹುಟ್ಟಿಕೊಂಡ ಶಕ್ತಿಗಳಾಗಿವೆ. ಮನುಷ್ಯರಾಗಿ ಹುಟ್ಟಿ ಇಲ್ಲಿನ ದೌರ್ಜನ್ಯ, ಅನ್ಯಾಯ ವಿರೋಧಿಸಿ ಶಕ್ತಿಗಳಾದವರೇ ಲೌಕಿಕ ಶಕ್ತಿಗಳು. ಇಂತಹ ಶಕ್ತಿಗಳನ್ನ ಸಮಾಜದ ಕೆಳ ವರ್ಗದವರೇ ಹೆಚ್ಚಾಗಿ ಆರಾಧನೆ ಮಾಡುತ್ತಾರೆ. ಅದರಲ್ಲಿ ಕೊರಗಜ್ಜ ಮತ್ತು ಬಬ್ಬು ಸ್ವಾಮಿ ದೈವಗಳು ಭೂಮಿಯಲ್ಲಿ ಬೆಂಕಿಯಂತೆ ಬೆಳಗುತ್ತಿರುವ ಮಹಾನ್ ದೈವ ಶಕ್ತಿಗಳು. ನಮ್ಮ ಆರಾಧನಾ ಕ್ಷೇತ್ರಗಳಲ್ಲಿ ಕುಕೃತ್ಯ ಮೆರೆದವರಿಗೆ ಕೊರಗಜ್ಜ ಶಿಕ್ಷೆ ನೀಡದೆ ಇರಲಾರ. ಅದು ನಮಗೆ ಕಂಡಿಲ್ಲ ಅಷ್ಟೆ. ಆದರೆ ಇಂದಿನ ಯುವಪೀಳಿಗೆ ಮಾತ್ರ ನಮ್ಮ ದೈವದ ಸಂಸ್ಕೃತಿಗಳನ್ನು ಹೊಸಕಿ ಹಾಕುತ್ತಿರುವುದು ಮಾತ್ರ ದುರ್ದೈವ. ಜಾಲ ತಾಣಗಳಲ್ಲಿ ಫ್ಲೆಕ್ಸ್ ಗಳಲ್ಲಿ ಕೋಲ ಕಟ್ಟುವವರ ಫೋಟೊ ಹಾಕಿ ಅಪಹಾಸ್ಯ ಮಾಡುವುದಲ್ಲದೆ, ಕೋಲೋತ್ಸವ, ನೇಮೋತ್ಸವ ಎಂಬ ತಲೆಬರಹಗಳನ್ನು ನೀಡಲಾರಂಭಿಸಿದ್ದು ಎಷ್ಟು ಸರಿ. ಉತ್ಸವಗಳು ದೇವಸ್ಥಾನಗಳಿಗೆ ಹೊರತು ದೈವಗಳು ನೇಮ, ಕೋಲಕ್ಕಷ್ಟೇ ಸೀಮಿತ ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ ಮೊಘಲರು, ಕಮಿನಿಸ್ಟರು ಹೀಗೆ ಅನೇಕರ ದಾಳಿಗೆ ಹಿಂದು ಧರ್ಮವು ನಲುಗಿ ಹೋಗಿತ್ತು. ಈಗಲೂ ಹಿಂದೂ ಧರ್ಮ ಸಂಸ್ಕೃತಿಯ ಮೇಲೆ ನಿರಂತರ ಆಕ್ರಮಣಗಳು ನಡೆಯುತ್ತಿದೆ. ಸರಕಾರ ಗೋಹತ್ಯೆ ವಿರುದ್ಧ ಮಸೂದೆ ತಂದರೂ ಗೋಹತ್ಯೆ, ಗೋಮಾಂಸ ಸಾಗಾಟದ ಕೃತ್ಯಗಳು ನಿತ್ಯ, ನಿರಂತರ ನಡೆಯುತ್ತಲೇ ಇವೆ. ಇದಕ್ಕೆ ಮುಖ್ಯ ಕಾರಣ ನಾವು ಗೋವಿನ ಮೇಲಿಟ್ಟ ಶ್ರದ್ಧೆ ಇಂದು ನಶಿಸಿ ಹೋಗಿದೆ. ನಾವು ಹಣದ ಆಸೆಗೆ ಗೋವುಗಳನ್ನ ಕಟುಕರ ಕೈಗೆ ಒಪ್ಪಿಸುತ್ತಿದ್ದೇವೆ. ಕೇವಲ ಬಾಯಿಂದ ಹೇಳಿದರೆ ಸಾಲದು, ಗೋರಕ್ಷಣೆಗೆ ನಾವೆಲ್ಲ ಮುಂದಾಗಬೇಕು ಎಂದರು.
ಆಶೀರ್ವಚನ ನೀಡಿದ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿ, ಎಷ್ಟೋ ದೇಶದ ಸಂಸ್ಕೃತಿ ನಾಶವಾದರೂ ನಮ್ಮ ದೇಶದ ಸಂಸ್ಕೃತಿ ಯಾರಿಂದಲೂ ನಾಶ ಮಾಡಲು ಸಾಧ್ಯವಾಗಿಲ್ಲ. ಹಿರಿಯರು ನಮ್ಮ ಸಂಸ್ಕೃತಿಗೆ ಅಷ್ಟೊಂದು ಗಟ್ಟಿ ಅಡಿಪಾಯ ಹಾಕಿ ಕೊಟ್ಟಿದ್ದಾರೆಂದರು.
ಎಳೆಯ ಪ್ರಾಯದಲ್ಲೇ ಕೊರಗಜ್ಜನ ಭಕ್ತಿಗೀತೆಯನ್ನು ಹಾಡಿ ಕರಾವಳಿಯಲ್ಲಿ ಮನೆ ಮಾತಾಗಿರುವ ಕಾರ್ಕಳದ ಮಾ.ಕಾರ್ತಿಕ್ ರಾಜ್ ವೇದಿಕೆಯಲ್ಲಿ ಕೊರಗಜ್ಜನ ಹಾಡು ಹೇಳಿ ಜನರನ್ನ ರಂಜಿಸಿದರು. ಪೇಜಾವರ ಶ್ರೀಗಳು ಕಾರ್ತಿಕ್ ರಾಜ್ ನನ್ನು ಸನ್ಮಾನಿಸಿದರು.
ವಿಶ್ವ ಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಕೃಷ್ಣ ಮೂರ್ತಿ,ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರು, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಕುತ್ತಾರು ಪಂಜಂದಾಂಯ, ಬಂಟ, ವೈದ್ಯನಾಥ, ಕೊರಗ ತನಿಯ ಆದಿಸ್ಥಳಗಳ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜ ಮೊದಲಾದವರು ಉಪಸ್ಥಿತರಿದ್ದರು.
ವಿಶ್ಚ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಸ್ವಾಗತಿಸಿದರು. ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಹ ಕಾರ್ಯದರ್ಶಿ ಸುರೇಖ ರಾಜ್ ವಂದಿಸಿದರು. ಪ್ರಮುಖರಾದ ರವಿ ಅಸೈಗೋಳಿ ನಿರೂಪಿಸಿದರು.
Vhp along with Bajarang leaders and members joined in thousands and Marched to kuttar Koragajja temple from kadri temple in Mangalore.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm