ಸೋಮೇಶ್ವರ: ಸಮುದ್ರ ಪಾಲಾಗುತ್ತಿದ್ದ ಬಿಹಾರ ಮೂಲದ ಯುವಕನ ರಕ್ಷಣೆ 

21-03-21 06:12 pm       Mangaluru correspondent   ಕರಾವಳಿ

ಸೋಮೇಶ್ವರ ಕಡಲಿನಲ್ಲಿ ನೀರಾಟವಾಡುತ್ತಿದ್ದ ಬಿಹಾರ ಮೂಲದ ನಾಲ್ವರು ಯುವಕರಲ್ಲಿ ಓರ್ವ ನೀರು ಪಾಲಾಗುತ್ತಿದ್ದ ವೇಳೆ ಕರಾವಳಿ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. 

ಉಳ್ಳಾಲ, ಮಾ.21: ಸೋಮೇಶ್ವರ ಕಡಲಿನಲ್ಲಿ ನೀರಾಟವಾಡುತ್ತಿದ್ದ ಬಿಹಾರ ಮೂಲದ ನಾಲ್ವರು ಯುವಕರಲ್ಲಿ ಓರ್ವ ನೀರು ಪಾಲಾಗುತ್ತಿದ್ದ ವೇಳೆ ಕರಾವಳಿ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. 

ಬಿಹಾರ ಮೂಲದ ಮಿಥುನ್ ಕುಮಾರ್ ರಕ್ಷಿಸಲ್ಪಟ್ಟ ಯುವಕ. ಮಿಥುನ್ ಸೇರಿ ಬಿಹಾರ ಮೂಲದ 11 ಜನ ಯುವಕರು ಇಂದು ಸಂಜೆ ಸೋಮೇಶ್ವರ ಕಡಲ ತೀರಕ್ಕೆ ವಿಹಾರಕ್ಕೆ ಬಂದಿದ್ದು ಈ ವೇಳೆ ಮಿಥುನ್ ಸೇರಿದಂತೆ ನಾಲ್ವರು ಸಮುದ್ರಕ್ಕಿಳಿದು ನೀರಾಟವಾಡಿದ್ದಾರೆ. ಬೃಹತ್ ಅಲೆಯೊಂದು ಮಿಥುನ್ ನನ್ನು ಕೊಚ್ಚಿಕೊಂಡು ಹೋಗಿದ್ದು ಇದನ್ನು ಗಮನಿಸಿದ ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಅಶೋಕ್, ನೀರಿಗೆ ಧುಮುಕಿ ಮಿಥುನ್ ನನ್ನು ರಕ್ಷಿಸಿ ಮೇಲಕ್ಕೆತ್ತಿದ್ದಾರೆ. ಸ್ಥಳೀಯರಾದ ಕಿರಣ್ ಆಂಟನಿ ಅವರು ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದಾರೆ. ಅವರೇ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು ಮಿಥುನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಿಥುನ್ ಮಂಗಳೂರು ನಗರದಲ್ಲಿ ಕೆಲಸ ಮಾಡುತ್ತಿದ್ದು ನಂದಿಗುಡ್ಡೆಯಲ್ಲಿ ಸ್ನೇಹಿತರೊಂದಿಗೆ ನೆಲೆಸಿದ್ದಾನೆ. ಭಾನುವಾರದ ರಜಾ ದಿನ ಕಳೆಯಲು ಕಡಲ ತೀರಕ್ಕೆ ಆಗಮಿಸಿದ್ದು ಅವಘಡ ಸಂಭವಿಸಿದೆ.

A youth from Bihar was rescued from drowning in Someshwar Beach at ullal in Mangalore.