ಬ್ರೇಕಿಂಗ್ ನ್ಯೂಸ್
23-03-21 05:13 pm Mangalore Correspondent ಕರಾವಳಿ
ಮಂಗಳೂರು, ಮಾ.23: ಪ್ರತ್ಯೇಕ ಗ್ಯಾಂಗ್ ಕಟ್ಟಿಕೊಂಡು ಇಬ್ಬರು ಹಳೆ ರೌಡಿಗಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕುಲಶೇಖರ ನಿವಾಸಿ ದೀಕ್ಷು ಅಲಿಯಾಸ್ ದೀಕ್ಷಿತ್ ಪೂಜಾರಿ(32), ಉಳ್ಳಾಲದ ಸೋಮೇಶ್ವರ ನಿವಾಸಿ ಚಂದ್ರ ಯಾನೆ ಚಂದ್ರಹಾಸ ಪೂಜಾರಿ(34), ಕೋಟೆಕಾರಿನ ಪ್ರಜ್ವಲ್ ಯಾನೆ ಹೇಮಚಂದ್ರ ಮತ್ತು ಸುರತ್ಕಲ್ ಚೇಳಾರಿನ ಸಂತೋಷ್ ಪೂಜಾರಿ ಅಲಿಯಾಸ್ ನಾಯಿಸಂತು (38) ಬಂಧಿತರು. ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ಮಾ.17ರಂದು ರಾತ್ರಿ ನಾಲ್ವರ ತಂಡ, ಬೈಕ್ ಸವಾರನನ್ನು ತಡೆದು ಮೊಬೈಲ್, ಹಣ ಕಿತ್ತುಕೊಂಡು ಬೈಕ್ ಎಗರಿಸಿಕೊಂಡು ಹೋಗಿದ್ದ ಘಟನೆ ನಡೆದಿತ್ತು. ಕುಲಶೇಖರ ಮತ್ತು ನೀರುಮಾರ್ಗದಲ್ಲಿ ಒಂದೇ ರೀತಿಯ ಎರಡು ಪ್ರಕರಣ ನಡೆದಿತ್ತು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ನಡೆಸಿದಾಗ ನಾಲ್ವರು ಸಿಕ್ಕಿಬಿದ್ದಿದ್ದಾರೆ.
ಬಂಧಿತ ನಾಲ್ವರು ಕೂಡ ಸದ್ಯ ಬೆಂಗಳೂರಿನ ಜೈಲಿನಲ್ಲಿರುವ ಆಕಾಶಭವನ್ ಶರಣ್ ಸಹಚರರು. ಮಂಗಳೂರು ಕೇಂದ್ರಿತವಾಗಿ ಪ್ರತ್ಯೇಕ ಗ್ಯಾಂಗ್ ಕಟ್ಟಿಕೊಂಡು ಸುಪಾರಿ ದಂಧೆಗೆ ಇಳಿದಿದ್ದರು. ಅಲ್ಲದೆ, ಗಾಂಜಾ ಸಾಗಣೆ, ಮರಳು ದಂಧೆ, ಹಫ್ತಾ ವಸೂಲಿ ಮಾಡಿಕೊಂಡು ಅದರಿಂದ ಬಂದ ಹಣದಲ್ಲಿ ಇನ್ನಿತರ ಕ್ರೈಮ್ ಗಳನ್ನು ಮಾಡಿಕೊಂಡಿದ್ದರು. ಇದೇ ವೇಳೆ, ಜೈಲಿನಲ್ಲಿದ್ದ ಆಕಾಶಭವನ್ ಶರಣ್ ಸೂಚನೆಯಂತೆ, ಮಂಗಳೂರಿನಲ್ಲಿ ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದ ಪ್ರದೀಪ್ ಮೆಂಡನ್ ಮತ್ತು ಮಂಕಿಸ್ಟಾಂಡ್ ವಿಜಯ್ ಎಂಬ ಹಳೆ ರೌಡಿಗಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಇದಕ್ಕಾಗಿ ಕಂಕನಾಡಿ ವ್ಯಾಪ್ತಿಯಲ್ಲಿ ಎರಡು ಬೈಕ್ ಗಳನ್ನು ಕಳವು ಮಾಡಿದ್ದು, ಅದರ ಮೂಲಕ ಇಬ್ಬರ ಕೊಲೆಗೆ ಸ್ಕೆಚ್ ರೂಪಿಸಿದ್ದರು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಕಳವುಗೈದ ವಾಹನಗಳಲ್ಲಿ ಅಪರಾಧ ಕೃತ್ಯ ಎಸಗಿದರೆ, ಪತ್ತೆಹಚ್ಚಲು ಸಾಧ್ಯವಾಗಲ್ಲ ಎಂಬ ನಂಬಿಕೆಯಿಂದ ಸಂಚು ನಡೆಸಿದ್ದರು. ಆದರೆ, ತನಿಖೆಯಲ್ಲಿ ಎರಡು ದ್ವಿಚಕ್ರ ವಾಹನಗಳು ಕೂಡ ಪತ್ತೆಯಾಗಿದ್ದು ಆರೋಪಿಗಳ ಕೃತ್ಯ ಬಯಲಿಗೆ ಬಂದಿದೆ. ದಕ್ಷಿಣ ಉಪವಿಭಾಗದ ಎಸಿಪಿ ರಂಜಿತ್ ಬಂಡಾರು ನೇತೃತ್ವದ ತಂಡ ಉತ್ತಮ ಕೆಲಸ ಮಾಡಿದ್ದು ಇಬ್ಬರ ಜೀವ ಉಳಿಸಿದೆ ಎಂದು ಕಮಿಷನರ್ ಹೇಳಿದ್ದಾರೆ.
ಬಂಧಿತ ನಾಲ್ವರು ಕೂಡ ನಟೋರಿಯಸ್ ಆಗಿದ್ದು, ಮಂಗಳೂರು, ಉಡುಪಿ ಮತ್ತು ಮುಂಬೈನಲ್ಲಿ ಹಲವಾರು ಕೇಸುಗಳನ್ನು ಎದುರಿಸುತ್ತಿದ್ದಾರೆ. ದೀಕ್ಷಿತ್ ವಿರುದ್ಧ ಮಂಗಳೂರಿನ ಬರ್ಕೆ, ಕಾವೂರು, ಕದ್ರಿ, ಉರ್ವಾ, ಸುರತ್ಕಲ್, ಉಳ್ಳಾಲ ಠಾಣೆ ಸೇರಿ ವಿವಿಧ ಕಡೆಗಳಲ್ಲಿ ಕೊಲೆ, ಕೊಲೆಯತ್ನ, ಕಿಡ್ನಾಪ್ ಸೇರಿ 12 ಪ್ರಕರಣಗಳಿವೆ. ಉರ್ವಾ, ಬರ್ಕೆ, ಕಂಕನಾಡಿ ನಗರ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ.
ಚಂದ್ರಹಾಸ ಉಳ್ಳಾಲ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಬಜ್ಪೆ, ಉಳ್ಳಾಲ, ಮುಂಬೈನಲ್ಲಿ ಏಳು ಪ್ರಕರಣಗಳಿವೆ. ಕೊಲೆ, ಕೊಲೆಯತ್ನ, ಆರ್ಮ್ಸ್ ಆಕ್ಟ್, ಮರಳು ಪ್ರಕರಣದಲ್ಲಿ ಕೇಸು ಎದುರಿಸುತ್ತಿದ್ದಾನೆ. ಉಳ್ಳಾಲ ಮತ್ತು ಕೊಣಾಜೆ ವ್ಯಾಪ್ತಿಯಲ್ಲಿ ಟಿಪ್ಪರ್ ಲಾರಿಯಿಟ್ಟುಕೊಂಡು ಮರಳು ದಂಧೆಯನ್ನೂ ನಡೆಸುತ್ತಿದ್ದ. ಪ್ರಜ್ವಲ್ ಯಾನೆ ಹೇಮಚಂದ್ರ ವಿರುದ್ಧವೂ 9 ಪ್ರಕರಣಗಳಿವೆ. ಕೊಣಾಜೆ, ಬಂಟ್ವಾಳ, ಉಳ್ಳಾಲ, ಕಂಕನಾಡಿ ಸೇರಿ ಹಲವೆಡೆ ಕೇಸುಗಳಿವೆ. ಸಂತೋಷ್ ಪೂಜಾರಿ ಸುರತ್ಕಲ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಪ್ರದೀಪ್ ಮೆಂಡನ್ ಮತ್ತು ಮಂಕಿಸ್ಟಾಂಡ್ ವಿಜಯ್ ಮೇಲೆ ದ್ವೇಷ ಹೊಂದಿದ್ದ ಚಂದ್ರಹಾಸ ಮತ್ತು ದೀಕ್ಷಿತ್ ಮೂಲಕ ಜೈಲಿನಲ್ಲಿ ಕುಳಿತಿದ್ದ ಆಕಾಶ ಭವನ್ ಶರಣ್ ಈ ಪ್ಲಾನ್ ಮಾಡಿದ್ದಾನೆ. ಪ್ರಕರಣದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ. ಇವರಿಬ್ಬರನ್ನು ಕೊಲೆ ಮಾಡಿದರೆ, ಆಬಳಿಕ ತಮ್ಮದೇ ಗ್ಯಾಂಗ್ ರೂಪಿಸಿಕೊಳ್ಳಬಹುದು ಎಂದು ಬಂಧಿತರು ಪ್ಲಾನ್ ಹಾಕಿದ್ದರು ಎಂದು ಕಮಿಷನರ್ ತಿಳಿಸಿದ್ದಾರೆ.
Video:
Mangalore Police have arrested four rowdy-sheeters in connection to two-wheeler theft and plotting of Murder of Ravi Poojary Gang informed police commissioner N Shashi Kumar.
06-10-25 05:27 pm
HK News Desk
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 07:19 pm
Mangalore Correspondent
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm