ಡೀಜೆ, ಪಬ್ ಗಳಿಗಿಲ್ಲದ ಕೊರೊನಾ ನೀತಿ ಸಾಮಾನ್ಯ ಜನರ ಮೇಲೆ ಯಾಕೆ ?

26-03-21 04:52 pm       Mangaluru correspondent   ಕರಾವಳಿ

ಜನರಿಗೆ ಯಾವುದೇ ಸೂಚನೆ ನೀಡದೆ ಜಿಲ್ಲಾಧಿಕಾರಿಯವರು ಏಕಾಏಕಿ ಬೀದಿಗಿಳಿದು ದಂಡ ವಿಧಿಸಿದ್ದು ತಪ್ಪು. ಮಾಲ್, ಪಬ್ ಗಳಲ್ಲಿ ಸೇರುವ ಜನರ ಮೇಲೆ ದಂಡ ಹಾಕಲ್ಲ. ಸಾಮಾನ್ಯ ಜನರ ಮೇಲೆ ದಂಡ ವಿಧಿಸುವ, ಬಂಧಿಸುವ ಕೆಲಸ ಮಾಡುತ್ತಾರೆ.

ಮಂಗಳೂರು, ಮಾ.25: ಜನರಿಗೆ ಯಾವುದೇ ಸೂಚನೆ ನೀಡದೆ ಜಿಲ್ಲಾಧಿಕಾರಿಯವರು ಏಕಾಏಕಿ ಬೀದಿಗಿಳಿದು ದಂಡ ವಿಧಿಸಿದ್ದು ತಪ್ಪು. ಮಾಲ್, ಪಬ್ ಗಳಲ್ಲಿ ಸೇರುವ ಜನರ ಮೇಲೆ ದಂಡ ಹಾಕಲ್ಲ. ಸಾಮಾನ್ಯ ಜನರ ಮೇಲೆ ದಂಡ ವಿಧಿಸುವ, ಬಂಧಿಸುವ ಕೆಲಸ ಮಾಡುತ್ತಾರೆ. ಇದು ಎಷ್ಟು ಸರಿ ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಪ್ರಶ್ನೆ ಮಾಡಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಕೈಗೊಂಡಿರುವ ದಿಢೀರ್ ದಾಳಿ ಕ್ರಮವನ್ನು ಟೀಕಿಸಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕಿ, ದೊಡ್ಡ ಮಾಲ್ಗಳಲ್ಲಿ ದಾಳಿ ನಡೆಸಿ, 500 ಸಾವಿರ ದಂಡ ವಿಧಿಸಿದ್ದಾರೆ. ಸಣ್ಣ ವ್ಯಾಪಾರಸ್ಥರ ಅಂಗಡಿಗಳಿಗೆ 4-5 ಸಾವಿರ ರೂ. ದಂಡ ವಿಧಿಸಿದ್ದಾರೆ. ಮಹಾನಗರ ಪಾಲಿಕೆಯವರು ಕೂಡ ಇದೇ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯ ಜನರ ಮೇಲೆ ಇವರು ದಂಡದ ಪ್ರಯೋಗ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

Phone In Programme With Dakshina Kannada DC Dr Rajendra K V: Check Out The  Details -

ಮಾಸ್ಕ್ ಧರಿಸದೇ ಇದ್ದುದಕ್ಕೆ ದಂಡ ವಿಧಿಸಲಿ. ಹಾಗೆಂದು ಮಾಸ್ಕ್ ಹಾಕದ ಕಾರಣಕ್ಕೆ ಬಂಧಿಸುವ ಅಧಿಕಾರ ಇದೆಯೇ ಇವರಿಗೆ. ಪೆಟ್ರೋಲ್ ಪಂಪಿನಲ್ಲಿ ಮಾಸ್ಕ್ ಹಾಕಿಲ್ಲವೆಂದು ಪೊಲೀಸರು ಒಬ್ಬನನ್ನು ಅಪರಾಧಿಯಂತೆ ಎಳಕೊಂಡು ಹೋಗಿದ್ದು ಎಷ್ಟು ಸರಿ ಎಂದು ಆಕ್ಷೇಪಿಸಿದ್ದಾರೆ.

ಮೊನ್ನೆ ಸುರತ್ಕಲ್ ನಲ್ಲಿ ಡಿಜೆ, ಡ್ಯಾನ್ಸ್ ಎಂದು ಬಹಳಷ್ಟು ಜನ ಸೇರಿದ್ದರು. ಕುಣಿದಾಡಿದ್ದಾರೆ. ಅದರಲ್ಲಿ ಡೀಸಿಯವರೂ ಇದ್ದರು. ಅಲ್ಲಿ ಇಲ್ಲದ ಕೊರೊನಾ ನಿಯಮ ಬೀದಿಯಲ್ಲಿ ಹೋಗೋ ಜನರ ಮೇಲೆ ಮಾತ್ರ ಯಾಕೆ ವಿಧಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Congress leader prathibha kulai has slammed Mangalore DC Rajendra for his audacity on poor over covid rules.