ಬ್ರೇಕಿಂಗ್ ನ್ಯೂಸ್
27-03-21 06:53 pm Mangaluru correspondent ಕರಾವಳಿ
ಮಂಗಳೂರು, ಮಾ.27: ಅದು ಹರಾಮಿಗಳ ಗ್ಯಾಂಗ್. ಹರೆಯಕ್ಕೆ ಬರೋ ಹೆಣ್ಮಕ್ಕಳನ್ನು ಮೊಬೈಲಿನಲ್ಲೇ ಗಾಳಕ್ಕೆ ಬೀಳಿಸಿ ಲೈಂಗಿಕವಾಗಿ ಬಳಸ್ಕೊಂಡು ಶೋಷಣೆ ಮಾಡುತ್ತಿದ್ದ ವಿಕೃತ ಕಾಮಿ ಕಿರಾತಕರ ಗ್ಯಾಂಗ್. ಹೌದು.. ಬಜ್ಪೆ ಠಾಣೆ ವ್ಯಾಪ್ತಿಯ ಕೈಕಂಬದಲ್ಲಿ ಕಾರ್ಯಾಚರಿಸುತ್ತಿದ್ದ ಹರಾಮಿ ಗ್ಯಾಂಗಿನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಸದ್ಯಕ್ಕೆ ಮಂಗಳೂರು ಪೊಲೀಸರು ಪೊಳಲಿ ನಿವಾಸಿ ಅಬ್ದುಲ್ ಮುನೀರ್(28), ಕೈಕಂಬ ನಿವಾಸಿಗಳಾದ ತಸ್ಲೀಮ್ ಮತ್ತು ಮಹಮ್ಮದ್ ಸಾಬಿರ್ ಎಂಬವರನ್ನು ಬಂಧಿಸಿದ್ದಾರೆ. ಹೈಸ್ಕೂಲ್ ಓದುತ್ತಿದ್ದ 14 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಹೆತ್ತವರು ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರಂತೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಸೀದಿ ಕಮಿಟಿಯ ಸದಸ್ಯರು, ಹೆಣ್ಮಕ್ಕಳಿಗೆ ಪೀಡನೆಗೊಳಗಾದ ಮನೆಯ ಸದಸ್ಯರು ಈ ಬಗ್ಗೆ ಮಂಗಳೂರು ಕಮಿಷನರ್ ಬಳಿ ಬಂದು ನೋವು ಹೇಳಿಕೊಂಡಿದ್ದು, ಘಟನೆಗೆ ಕಾರಣವಾದ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಅಬ್ದುಲ್ ಮುನೀರ್ ಈ ಗ್ಯಾಂಗಿನ ಸೂತ್ರಧಾರಿಯಾಗಿದ್ದು, ಹರೆಯದ ಹೆಣ್ಣು ಮಕ್ಕಳಿಗೆ ಹರೆಯದ ಹುಡುಗರನ್ನು ಬಳಸ್ಕೊಂಡೇ ಗಾಳ ಹಾಕುತ್ತಿದ್ದ. ಈ ಹುಡುಗಿ ಮಸೀದಿಗೆ ಖುರಾನ್ ಕಲಿಯಲೆಂದು ಬರುತ್ತಿದ್ದಳು. ಈ ವೇಳೆ, ತಮ್ಮದೇ ಸಮುದಾಯದ ಹುಡುಗರು ಮಾತನಾಡುತ್ತಾ, ಗಿಫ್ಟ್ ಕೊಡುತ್ತಾ ಸಲುಗೆ ಬೆಳೆಸಿದ್ದಾರೆ. ಬಳಿಕ ಆಕೆಯ ಮೊಬೈಲ್ ನಂಬರ್ ಪಡೆದು ಖಾಸಗಿ ಫೋಟೋಗಳನ್ನು ಮುಂದಿಟ್ಟು ಬ್ಲಾಕ್ ಮೇಲ್ ನಡೆಸಿದ್ದಾರೆ.
ಬ್ಲಾಕ್ ಮೇಲ್ ಮಾಡಿ, ಆಕೆಯನ್ನು ತಾವು ಕರೆದಲ್ಲಿಗೆ ಬರುವಂತೆ ಪೀಡಿಸಿದ್ದು ಐದಾರು ಮಂದಿ ಸೇರಿ ಸರಣಿಯಂತೆ ಕಿರುಕುಳ ನೀಡಿದ್ದಾರೆ. ಎಲ್ಲವನ್ನೂ ಗುಪ್ತವಾಗಿ ಗ್ರೂಪಿನಲ್ಲೇ ಇದ್ದುಕೊಂಡು ಮಾಡುತ್ತಿದ್ದರು. ಮುಗ್ಧ ಹುಡುಗಿಯಾಗಿದ್ದ ಕಾರಣದಿಂದ ಆರಂಭದಲ್ಲಿ ಇದನ್ನು ಹೆತ್ತವರಿಗೆ ತಿಳಿಸಿರಲಿಲ್ಲ. ಬಳಿಕ ಹುಡುಗರ ಪೀಡೆ ಸಹಿಸಲಾರದೆ ವಿಷಯ ಅರುಹಿದ್ದು, ಮನೆಮಂದಿ ಗಾಬರಿಗೆ ಒಳಗಾಗಿದ್ದಾರೆ. ಮಸೀದಿ ಕಮಿಟಿಯವರು ಹೆತ್ತವರ ಜೊತೆ ಸೇರಿ ಈಗ ದೂರು ನೀಡಲು ಮುಂದೆ ಬಂದಿದ್ದಾರೆ.
ಮಸೀದಿ ಕಮಿಟಿಯವರು ಹೇಳುವ ಪ್ರಕಾರ, ಇದೇ ರೀತಿಯಲ್ಲಿ ಹಲವು ಹೆಣ್ಮಕ್ಕಳಿಗೆ ಪುಂಡರು ಕಿರುಕುಳ ನೀಡಿದ್ದಾರಂತೆ. ಕೈಕಂಬ ಭಾಗದಲ್ಲಿ ವಿಕೃತ ಕಾಮಿಗಳ ಗ್ಯಾಂಗ್ ಸಕ್ರಿಯವಾಗಿದ್ದು, ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದಾರೆ. ಸದ್ಯಕ್ಕೆ ಮೂವರು ಸಿಕ್ಕಿಬಿದ್ದಿದ್ದು ಪೋಕ್ಸೋ ಕಾಯ್ದೆಯಡಿ ಬಂಧನವಾಗಿದ್ದಾರೆ. ಗ್ಯಾಂಗಿನಲ್ಲಿ ಇನ್ನೂ ಹಲವು ಯುವಕರು ಇದ್ದಾರೆ ಎನ್ನುವ ಮಾಹಿತಿ ಪೊಲೀಸರಲ್ಲಿದೆ.
ಇದೇ ರೀತಿ ಹಲವು ಹುಡುಗಿಯರು ಪೀಡನೆಗೊಳಗಾಗಿದ್ದಾರೆ ಎನ್ನಲಾಗುತ್ತಿದ್ದು, ಮನೆಯವರಿಗೆ ದೂರು ನೀಡುವಂತೆ ಕಮಿಷನರ್ ಶಶಿಕುಮಾರ್ ಸೂಚಿಸಿದ್ದಾರೆ. ಸದ್ಯಕ್ಕೆ ಮುಸ್ಲಿಂ ಯುವತಿಯರೇ ಟಾರ್ಗೆಟ್ ಆಗಿರುವಂತೆ ಕಾಣುತ್ತಿದೆ. ತನಿಖೆಯಲ್ಲಿ ಬೇರೆ ಹುಡುಗಿಯರನ್ನೂ ಇದೇ ರೀತಿ ತಮ್ಮ ತೀಟೆಗೆ ಬಳಸಿಕೊಂಡಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರ ತನಿಖೆಯಲ್ಲಿ ತಿಳಿದುಬರಬೇಕು. ಹರಾಮಿ ಬುದ್ಧಿಯ ವಿಕೃತ ಕಾಮಿಗಳ ಬೆನ್ನು ಮೂಳೆ ಮುರಿದರಷ್ಟೇ ಬುದ್ಧಿ ಬರಬಹುದು.
ಪೊಲೀಸ್ ಲಾಠಿಯ ರುಚಿ ನೋಡಿಲ್ಲ..!
ಹಿಂದೆಲ್ಲಾ ಯಾವುದೇ ಕೇಸ್ ಆಗಲೀ, ಆರೋಪಿಗಳು ಠಾಣೆ ಮೆಟ್ಟಿಲೇರಲು ಭಯ ಪಡುತ್ತಿದ್ದರು. ಪ್ರತಿ ಠಾಣೆಯಲ್ಲೂ ಎಂಟ್ರಿಯಾಗುತ್ತಲೇ ಪೊಲೀಸ್ ಲಾಠಿಯಷ್ಟೇ ಮಾತಾಡುತ್ತಿದ್ದ ದಿನಗಳಿದ್ದವು. ಅಪರಾಧ ವಿಭಾಗದಲ್ಲಿ ಜಯಂತ್ ಶೆಟ್ಟಿ, ಪ್ರಭುದೇವ ಮಾನೆ, ಅಶೋಕನ್ ಇರುತ್ತಿದ್ದಾಗ ಅದೆಷ್ಟೋ ಮಂದಿ ಠಾಣೆಯಲ್ಲೇ ಹುಚ್ಚೆ, ಹಿಕ್ಕೆ ಎರಡನ್ನೂ ಮಾಡುತ್ತಿದ್ದರು. ಚಡ್ಡಿಯಲ್ಲೇ ಕುಂಡೆ ಒಸರುತ್ತಿದ್ದವರನ್ನು ಅವರ ಕೈಯಲ್ಲೇ ಸ್ವಚ್ಛಗೊಳಿಸುತ್ತಿದ್ದ ದಿನಗಳಿದ್ದವು. ಈಗೆಲ್ಲಾ ಆ ರೀತಿಯ ಲಾಠಿ ರುಚಿ ಆರೋಪಿಗಳಿಗೆ ಸಿಗಲ್ಲ. ಕೊಲೆಗಾರರು, ವಿಕೃತ ಕಾಮಿಗಳು ಪೊಲೀಸರ ಹೆದರಿಕೆಯೇ ಇಲ್ಲದೆ ಏನೇನೋ ಮಾಡುತ್ತಿದ್ದಾರೆ. ಒಮ್ಮೆ ಜೈಲಿಗೆ ಹೋಗಿ ಹೊರಗೆ ಬಂದಾಗ ಎದೆಯುಬ್ಬಿಸಿಕೊಂಡು ನಡೆಯುತ್ತಾರೆ. ತಲೆಗೆ ಮತ್ತೊಂದು ಮುಂಡಾಸು ಬಂದ ಹಾಗೆ..
Video:
The Mangalore police have arrested three men from Gurupura Kaikamba for using school girls for sex and then blackmailing them of uploading their sex videos on social media.
06-10-25 05:27 pm
HK News Desk
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 07:19 pm
Mangalore Correspondent
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm