ರಾಜ್ಯದಲ್ಲಿ ಆಕ್ಟಿವ್ ಆಗಿದೆಯಾ ಐಸಿಸ್ ಸ್ಲೀಪರ್ ಸೆಲ್ ? ಕರಾವಳಿಯಲ್ಲಿ ಆಕ್ಟಿವ್ ಆದ ಸ್ಯಾಟಲೈಟ್ ಫೋನ್ ಗಳು

01-08-20 07:51 am       Headline Karnataka News Network   ಕರಾವಳಿ

ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಐಸಿಸ್ ಉಗ್ರರು ನೆಲೆಯೂರಿದ್ದಾರೆಂದು ವಿಶ್ವಸಂಸ್ಥೆ ನೀಡಿರುವ ವರದಿ ಕರಾವಳಿಯಲ್ಲಿ ಸಂಚಲನ ಮೂಡಿಸಿದೆ. ಕಳೆದ ಎರಡು ತಿಂಗಳಿಂದ ಕರಾವಳಿ ಭಾಗದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಗಳು ಏಕ್ಟಿವ್ ಆಗಿರುವುದು ಈಗಾಗ್ಲೇ ಗುಪ್ತಚರ ಅಧಿಕಾರಿಗಳಿಗೆ ತಲೆನೋವು ತಂದಿದ್ದೆ.

ಮಂಗಳೂರು : ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಐಸಿಸ್ ಉಗ್ರರು ನೆಲೆಯೂರಿದ್ದಾರೆಂದು ವಿಶ್ವಸಂಸ್ಥೆ ನೀಡಿರುವ ವರದಿ ಕರಾವಳಿಯಲ್ಲಿ ಸಂಚಲನ ಮೂಡಿಸಿದೆ. ಕಳೆದ ಎರಡು ತಿಂಗಳಿಂದ ಕರಾವಳಿ ಭಾಗದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಗಳು ಏಕ್ಟಿವ್ ಆಗಿರುವುದು ಈಗಾಗ್ಲೇ ಗುಪ್ತಚರ ಅಧಿಕಾರಿಗಳಿಗೆ ತಲೆನೋವು ತಂದಿದ್ದರೆ, ಇದೀಗ ಐಸಿಸ್ ಉಗ್ರರು ದಾಳಿಗೆ ಸಂಚು ನಡೆಸಿದ್ದಾರೆ ಎನ್ನುವ ವರದಿ ಆಘಾತ ಮೂಡಿಸಿದೆ. 

ಪಾಕ್, ಬಾಂಗ್ಲಾ ಮೂಲದ 150ರಿಂದ 200 ರಷ್ಟು ಉಗ್ರರು ತಮ್ಮ ಮುಖಂಡನ ದಾಳಿಗೆ ಪ್ರತೀಕಾರ ತೀರಿಸಲು ಪ್ರಬಲ ಸಂಚು ರೂಪಿಸಿದ್ದಾರೆಂದು ವಿಶ್ವಸಂಸ್ಥೆ ವರದಿ ಹೇಳಿದೆ. ಇದೇ ಸಂದರ್ಭದಲ್ಲಿ ಸ್ಯಾಟಲೈಟ್ ಫೋನ್ ಗಳು ಕರಾವಳಿಯಲ್ಲಿ ಸದ್ದು ಮಾಡುತ್ತಿದ್ದು ನಿಷೇಧಿತ ತುರಾಯಾ ಫೋನ್ ಗಳು ಅರಣ್ಯ ಪ್ರದೇಶದಲ್ಲಿ ಸಕ್ರಿಯವಾಗಿರುವುದನ್ನು ಗುಪ್ತಚರ ಅಧಿಕಾರಿಗಳು ದೃಢಪಡಿಸಿದ್ದಾರೆ.

ಆದರೆ, ಫೋನ್ ಜಾಡು ಹಿಡಿದು ಹೋದ ಗುಪ್ತಚರ ಹಾಗು ಆಂತರಿಕ ಭದ್ರತೆ ಇಲಾಖೆಯ ಅಧಿಕಾರಿಗಳಿಗೆ  ಅದನ್ನು ಟ್ರೇಸ್ ಮಾಡಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಧರ್ಮಸ್ಥಳ ಬಳಿಯ ಬೆಳಾಲು, ಉಡುಪಿ ಜಿಲ್ಲೆಯ  ಕಾರ್ಕಳ ಬಳಿಯ ಬಜಗೋಳಿ, ಉತ್ತರ ಕನ್ನಡ ಜಿಲ್ಕೆಯ ಕೆಲಭಾಗ ದಲ್ಲಿ  ಹೀಗೆ ಎಲ್ಲೆಲ್ಲಿಂದಲೋ ಫೋನ್ ಸಂಪರ್ಕ ಆಗಿರುವ ಲೊಕೇಷನ್ ಮಾತ್ರ ಟ್ರೇಸ್ ಮಾಡಲಾಗಿದೆ. 

ಈಗ ವಿಶ್ವಸಂಸ್ಥೆಯೂ ಕರ್ನಾಟಕ, ಕೇರಳದಲ್ಲಿ ಉಗ್ರರು ನೆಲೆಯೂರಿದ್ದನ್ನು ಹೇಳಿರುವುದು ಸ್ಯಾಟಲೈಟ್ ಫೋನ್ ಏಕ್ಟಿವ್ ಆಗಿದ್ದರ ಹಿಂದೆ ಟೆರರ್ ಲಿಂಕ್ ಇರಬಹುದೇ ಎನ್ನುವ ಶಂಕೆಗೆ ಮೂಡಲಾರಂಭಿದಿದೆ . ಟೆರರ್ ಲಿಂಕ್ ಬಗ್ಗೆ ಅನುಮಾನ ಕೇಳಿಬಂದಿದ್ದರೂ, ಅದಕ್ಕೆ ಯಾವುದೇ ಆಧಾರ ಇರಲಿಲ್ಲ. ಈಗ ಫೋನ್ ಸ್ಯಾಟಲೈಟ್ ಆ್ಯಕ್ಟಿವ್ ಆಗಿರುವುದಕ್ಕೂ ಟೆರರಿಸ್ಟ್ ಗಳು   ಆಗಿರುವುದಕ್ಕೂ ಡೈರೆಕ್ಟ್ ಲಿಂಕ್ ಇರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಪೊಲೀಸರು ಸೈಲಂಟ್ ಆಗಿರುವಾಗಲೇ ಉಗ್ರರು ಸೇಡು ತೀರಿಸಲು ಸಂಚು ನಡೆಸಿದ್ದಾರೆಯೇ ಅನ್ನೋ ಶಂಕೆ ಬಲಗೊಳ್ಳುತ್ತಿದೆ.