ಕಾಂಗ್ರೆಸ್ ಮುಖಂಡ ಐವನ್‍ಗೆ ಕೊರೊನಾ - ಕ್ವಾರಂಟೈನ್ ಆಗ್ತಾರಾ ಡಿಕೆಶಿ ಅಂಡ್ ಮಂಗಳೂರಿನ ಬಿಷಪ್

01-08-20 02:23 pm       Mangalore Reporter   ಕರಾವಳಿ

ವಿದಾನಪರಷತ್‍ನ ಮಾಜಿ ಸದಸ್ಯ ಐವನ್ ಡಿ’ಸೋಜ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ನೆನ್ನೆಯಷ್ಟೇ ಡಿಕೆಶಿ ಜೊತೆ ಹಲವೆಡೆ ಇವರು ತಿರುಗಾಡಿದ್ದರಿಂದ ಜೊತೆಗಿದ್ದವರು ಮತ್ತು ಅವರು ಭೇಟಿ ನೀಡಿರುವ ಮನೆಗಳಲ್ಲಿ ಆತಂಕ ಆವರಿಸಿದೆ.

ಮಂಗಳೂರು: ವಿದಾನಪರಷತ್‍ನ ಮಾಜಿ ಸದಸ್ಯ ಐವನ್ ಡಿ’ಸೋಜ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ನೆನ್ನೆಯಷ್ಟೇ ಡಿಕೆಶಿ ಜೊತೆ ಹಲವೆಡೆ ಇವರು ತಿರುಗಾಡಿದ್ದರಿಂದ ಜೊತೆಗಿದ್ದವರು ಮತ್ತು ಅವರು ಭೇಟಿ ನೀಡಿರುವ ಮನೆಗಳಲ್ಲಿ ಆತಂಕ ಆವರಿಸಿದೆ.

ಮೊನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಂಗಳೂರಿಗೆ ಭೇಟಿ ನೀಡಿದ್ದು, ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನ, ಮಾಜಿ ಸಚಿವ ಜನಾರ್ದನ ಪೂಜಾರಿ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಬಿಷಪ್ ಹೌಸ್, ಬೇಕಲ ಖಾಝಿ ಇಬ್ರಾಹಿಂ ಮುಸ್ಲಿಯಾರ್ ಅವರ ಮನೆಗೂ ಭೇಟಿ ನೀಡಿದ್ದರು. ಈ ಸಂದರ್ಭದಲ್ಲೇ ಐವನ್ ಡಿ’ಸೋಜ ಜೊತೆಗಿದ್ದರು. ಅಲ್ಲದೆ ಭಾರೀ ಸಂಖ್ಯೆಯ ಅಭಿಮಾನಿಗಳು ಡಿಕೆಶಿ ಜೊತೆಗಿದ್ದರು. ಶಾಸಕ ಖಾದರ್, ಹರೀಶ್ ಕುಮಾರ್, ರಮಾನಾಥ ರೈ, ಜೆ.ಆರ್.ಲೋಬೋ ಹೀಗೆ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು. ಇದಾದ ಮರುದಿನವೇ ತನಗೆ ಕೊರೊನಾ ಪಾಸಿಟಿವ್ ಬಂದಿದ್ದು, ನೀವೆಲ್ಲರೂ ಪ್ರಾರ್ಥಿಸಿ ಎಂದು ಐವನ್ ಟ್ವೀಟ್ ಮಾಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಮುಖಂಡರು ಮಾತ್ರವಲ್ಲದೆ, ಅವರ ಜೊತೆಗಿದ್ದವರು, ಅವರು ಭೇಟಿ ನೀಡಿರುವ ಮನೆಯವರಲ್ಲೂ ಆತಂಕ ಆವರಿಸಿದೆ. 

ನಿನ್ನೆ ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಡಿಕೆಶಿ ಸುದ್ದಿಗೋಷ್ಟಿ ನಡೆದಿತ್ತು. ಸುದ್ದಿಗೋಷ್ಟಿಯಲ್ಲಿ ಐವನ್ ಡಿಸೋಜ, ಮಾಜಿ ಸಚುವರಾದ ಯು.ಟಿ.‌ಖಾದರ್, ರಮಾನಾಥ ರೈ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಿಥುನ್ ರೈ ವೇದಿಕೆ ಹಂಚಿಕೊಂಡಿದ್ದರು. ಎಸಿ ಕೊಠಡಿಯಲ್ಲಿ ಸುದ್ದಿಗೋಷ್ಟಿ ನಡೆದಿದ್ದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರೆಲ್ಲ ಈಗ ಕ್ವಾರಂಟೈನ್ ಆಗಬೇಕಾಗಿದೆ.