ಬ್ರೇಕಿಂಗ್ ನ್ಯೂಸ್
25-10-21 09:49 pm Mangaluru Correspondent ಕರಾವಳಿ
ಮಂಗಳೂರು, ಅ.25: ವೆನ್ಲಾಕ್ ಜಿಲ್ಲಾಸ್ಪತ್ರೆ ಅಂದ್ರೆ, ಹೇಳಿಕೊಳ್ಳೋಕೆ ಐದು ಜಿಲ್ಲೆಗಳ ವ್ಯಾಪ್ತಿಯ ಪಾಲಿಗೆ ಬಡಜನರ ಆಶಾಕಿರಣ. ಆದರೆ, ಅಲ್ಲಿನ ಸ್ಥಿತಿ ನೋಡಿದರೆ ಯಾರಿಗೂ ಬೇಡ ಅನ್ನುವಂತಾಗಿದೆ. ಸಾಕಷ್ಟು ಐಸಿಯು ಬೆಡ್, ಅತ್ಯಾಧುನಿಕ ಸೌಲಭ್ಯಗಳೆಲ್ಲ ಇದ್ದರೂ, ಅದನ್ನು ಬಳಸಿಕೊಳ್ಳದೆ ಬಡ ಜನರನ್ನು ಸಾವಿನ ಕೂಪಕ್ಕೆ ತಳ್ಳುತ್ತಿರುವ ದುರಂತವನ್ನು ಅಲ್ಲಿರುವ ಜನರೇ ಹೇಳುತ್ತಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಂದರೆ, ಇಲ್ಲಿ ನೋಡುವವರೇ ಇಲ್ಲ ಅನ್ನುವಂತಾಗಿದ್ದು, ಇದರಿಂದಾಗಿ ಬಡ ರೋಗಿಗಳು ವಿನಾಕಾರಣ ಸಾಯುತ್ತಿದ್ದಾರಂತೆ.
ಸೋಮವಾರ ಸಂಜೆ ಕಾಸರಗೋಡು ಜಿಲ್ಲೆಯ ಕಡೆಯಿಂದ ಸುಶೀಲ ಎಂಬ 55 ವರ್ಷದ ಮಹಿಳೆಯನ್ನು ಆಂಬುಲೆನ್ಸ್ ನಲ್ಲಿ ಕರೆತರಲಾಗಿತ್ತು. ಬರುವಾಗಲೇ ಉಸಿರಾಟದ ಸಮಸ್ಯೆ ಇದ್ದುದರಿಂದ ಅಲ್ಲಿನ ವೈದ್ಯರು ವೆನ್ಲಾಕ್ ತೆರಳುವಂತೆ ಹೇಳಿ ಕಳುಹಿಸಿದ್ದರು. ವೆನ್ಲಾಕ್ ಆಸ್ಪತ್ರೆಗೆ ಸಂಜೆ 5 ಗಂಟೆಗೆ ಬಂದಿದ್ದರೂ, ಇಲ್ಲಿನ ಮಂದಿ ಅರ್ಜಿ ಭರ್ತಿಗೊಳಿಸುವ ನೆಪದಲ್ಲಿ 45 ನಿಮಿಷ ಆಟವಾಡಿಸಿದ್ದಾರೆ. ಆನಂತರ, ಐಸಿಯು ಬೆಡ್ ಇದೆಯೆಂದು ಹಿಂದಿನ ಕಟ್ಟಡಕ್ಕೆ ಕಳಿಸಿದ್ದಾರೆ. ಆದರೆ, ಅಲ್ಲಿನ ಸಿಬಂದಿ ಐಸಿಯು ಬೆಡ್ ಇಲ್ಲ, ಫುಲ್ ಆಗಿದೆ ಎಂದು ಹೇಳಿದ್ದಾರೆ. ರೋಗಿಯ ಸ್ಥಿತಿ ವಿಪರೀತ ಇದ್ದರೂ, ಒಳಗೆ ಸೇರಿಸಿಕೊಳ್ಳದೆ ಆಂಬುಲೆನ್ಸ್ ನಲ್ಲಿಯೇ ಉಳಿಸಿದ್ದಾರೆ.
ಕೊನೆಗೆ, ಒಂದೂವರೆ ಗಂಟೆ ಸತಾಯಿಸಿದ ಬಳಿಕ ಏಳು ಗಂಟೆಗೆ ರೋಗಿಯನ್ನು ಅಡ್ಮಿಟ್ ಮಾಡಿಕೊಂಡಿದ್ದರು. ಆದರೆ, ರಾತ್ರಿ ಒಂಬತ್ತು ಗಂಟೆ ವೇಳೆಗೆ, ರೋಗಿ ಸತ್ತಿದ್ದಾರೆಂದು ವೆನ್ಲಾಕ್ ಸಿಬಂದಿ ತಿಳಿಸಿದ್ದಾರೆ. ರೋಗಿಯನ್ನು ಒಳಗೆ ಸೇರಿಸಿಕೊಳ್ಳದೇ ಸತಾಯಿಸಿದ್ದಲ್ಲದೆ, ಸಿಬಂದಿ ನಿರ್ಲಕ್ಷ್ಯ ವಹಿಸಿದ್ದರಿಂದ ಸಾವು ಸಂಭವಿಸಿದೆ ಎಂದು ರೋಗಿಯ ಸಂಬಂಧಿಕರು ಆರೋಪ ಮಾಡಿದ್ದಾರೆ. ಅಲ್ಲಿನ ದುರಂತ ಸ್ಥಿತಿಯನ್ನು ನೋಡಿದ ರೆಡ್ ಕ್ರಾಸ್ ಘಟಕದ ಹೆಲ್ಪ್ ಲೈನ್ ಸಿಬಂದಿ ಹೆಡ್ ಲೈನ್ ಕರ್ನಾಟಕಕ್ಕೆ ಫೋನ್ ಮಾಡಿ ತಿಳಿಸಿದ್ದಾರೆ.
ಭಾನುವಾರ ಒಂದೇ ದಿನ ಏಳು ಜನರು ಸತ್ತಿದ್ದಾರೆ. ಇಲ್ಲಿ ಯಾರೂ ಹೇಳೋರು, ಕೇಳೋರು ಇಲ್ಲದಾಗಿದೆ. ಸಂಜೆ ವೇಳೆಗೆ, ಬಡ ರೋಗಿಗಳು ಬಂದರೆ ಇಲ್ಲಿ ಕೇಳುವುದೇ ಇಲ್ಲ. ಒಳಗೆ ಸೇರಿಸಿಕೊಳ್ಳುವುದೂ ಇಲ್ಲ. ಇಲ್ಲಿನ ದುರಂತ ಸ್ಥಿತಿಯ ಬಗ್ಗೆ ಎಲ್ಲರಿಗೂ ಹೇಳಿದ್ದೇವೆ. ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇಟ್ಟುಕೊಂಡು ಬಂದರೂ, ಒಳಗೆ ತೆಗೆದುಕೊಳ್ಳುತ್ತಿಲ್ಲ. ಭಾನುವಾರ ಇಬ್ಬರು ಇದೇ ರೀತಿ ಉಸಿರಾಟದ ಸಮಸ್ಯೆಯಿಂದ ಬಂದಿದ್ದರು. ಆನಂತರ, ರಾತ್ರಿ ವೇಳೆಗೆ ಸಾವು ಕಂಡಿದ್ದಾರೆ. ಇಲ್ಲಿ ಅಡ್ಮಿಟ್ ಆಗಿದ್ದವರನ್ನೂ ಸರಿಯಾಗಿ ನೋಡಿಕೊಳ್ಳುವುದಿಲ್ಲ. ಕೆಲವೊಮ್ಮೆ ಡ್ರಿಪ್ಸ್ ಹಾಕಿದ್ದು ಮುಗಿದು ರಕ್ತ ಹೊರ ಬರುತ್ತಿರುತ್ತದೆ ಎಂದು ಅಲ್ಲಿನ ಸಿಬಂದಿ ಅಲವತ್ತುಕೊಂಡಿದ್ದಾರೆ.
ಕೋವಿಡ್ ಎರಡನೇ ಅಲೆಯ ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಇಬ್ಬರು ಸಿಬಂದಿಯನ್ನು ಹೆಲ್ಪ್ ಲೈನ್ ಡೆಸ್ಕ್ ನಲ್ಲಿ ಇಡಲಾಗಿದೆ. ಆಂಬುಲೆನ್ಸ್, ಅಂತ್ಯಕ್ರಿಯೆ, ಚಿಕಿತ್ಸೆ ಹೀಗೆ ಎಲ್ಲ ಜವಾಬ್ದಾರಿಯನ್ನು ಹೊತ್ತು ವ್ಯವಸ್ಥೆ ಮಾಡಲು ಹೆಲ್ಪ್ ಲೈನ್ ಸಿಬಂದಿ ಇರುತ್ತಾರೆ. ಆದರೆ, ಅಲ್ಲಿನ ಸ್ಥಿತಿಯನ್ನು ನೋಡಿ ರೋಸಿಹೋಗಿದ್ದಾಗಿ ಹೇಳುತ್ತಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಹಗಲಿನಲ್ಲಿ ಕೆಎಂಸಿ ವೈದ್ಯರು, ಕಲಿಕಾ ಹಂತದ ವಿದ್ಯಾರ್ಥಿಗಳು, ನರ್ಸ್ ಗಳು ಬಂದು ಕೆಲಸ ಮಾಡುತ್ತಾರೆ. ವೆನ್ಲಾಕ್ ಆಸ್ಪತ್ರೆಯನ್ನು ಕೆಎಂಸಿ ಗುತ್ತಿಗೆ ಪಡೆದಿರುವ ಕಾರಣ, ಅಲ್ಲಿನ ಜವಾಬ್ದಾರಿಯನ್ನೂ ಅದೇ ಸಂಸ್ಥೆ ಹೊತ್ತುಕೊಂಡಿದೆ. ಇದಕ್ಕಾಗಿ ಸರಕಾರದಿಂದ ದೊಡ್ಡ ಮೊತ್ತದ ಪಾವತಿಯೂ ಆಗುತ್ತದೆ. ಫುಲ್ ಟೈಮ್ ವೈದ್ಯರ ನೇಮಕ ಆಗದ ಕಾರಣ ವೆನ್ಲಾಕ್ ಹೊಣೆಯನ್ನು ಕೆಎಂಸಿಗೆ ನೀಡಲಾಗಿತ್ತು.
ಹೀಗಿದ್ದರೂ, ಅಲ್ಲಿನ ಸ್ಥಿತಿ ಉತ್ತಮಗೊಂಡಿಲ್ಲ. ಬಡ ರೋಗಿಗಳ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಸೀರಿಯಸ್ ಕಂಡಿಶನಲ್ಲಿ ಬರುವ ಮಂದಿಯನ್ನು ನಿರ್ಲಕ್ಷ್ಯ ವಹಿಸುವುದು, ಐಸಿಯು ಇದ್ದರೂ ಇಲ್ಲ ಎನ್ನುತ್ತಿರುವ ಸಿಬಂದಿಯ ವರ್ತನೆಯಿಂದಾಗಿ ರೋಗಿಗಳು ವಿನಾಕಾರಣ ಪ್ರಾಣ ಬಿಡುತ್ತಿದ್ದಾರೆ ಅನ್ನುವುದು ಅಲ್ಲೇ ಇರುವ ಆಂಬುಲೆನ್ಸ್ ಚಾಲಕರೊಬ್ಬರ ಮಾತು.
Mangalore Wenlock Hospital negligence Patients found dying in Ambulance due to shortage of ICU Beds. Shushila (55) from Kasaragod who was suffering from a serious Breathing issue died after she was made to wait 1.5 hours in the Ambulance stating there are no ICU beds.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm