ಬ್ರೇಕಿಂಗ್ ನ್ಯೂಸ್
27-10-21 04:44 pm Mangalore Reporter ಕರಾವಳಿ
ಮಂಗಳೂರು, ಅ.27: ಎಂಆರ್ ಪಿಎಲ್ ಪೆಟ್ರೋಲಿಯಂ ಸ್ಥಾವರದಿಂದ ಹೊರಬಿಡುವ ತ್ಯಾಜ್ಯ ಸ್ಥಳೀಯ ಜಲಮೂಲಗಳನ್ನು ಹಾಳುಗೆಡವುತ್ತಿರುವ ಬಗ್ಗೆ ಮಾಧ್ಯಮಗಳ ವರದಿಯನ್ನು ಆಧರಿಸಿ ಕರ್ನಾಟಕ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಮಾಲಿನ್ಯ ರಹಿತ ನೀರು ಮತ್ತು ಪರಿಸರ ಮೂಲಭೂತ ಹಕ್ಕಾಗಿದ್ದು, ಅದನ್ನು ಸಂರಕ್ಷಿಸುವುದು ಆಡಳಿತದ ಜವಾಬ್ದಾರಿ ಎಂದಿರುವ ಲೋಕಾಯುಕ್ತ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನೇ ಹೊಣೆಯಾಗಿಸಿ ಕೇಸು ದಾಖಲಿಸಿದೆ. ಅಲ್ಲದೆ, ಈ ಬಗ್ಗೆ ನ.2ರ ಒಳಗೆ ಕೈಗೊಂಡಿರುವ ಕ್ರಮಗಳು ಮತ್ತು ಸೂಕ್ತ ಸಾಕ್ಷ್ಯ ಸಹಿತ ವರದಿಯನ್ನು ನೀಡುವಂತೆ ಆದೇಶ ಮಾಡಿದೆ.
ಎಂಆರ್ ಪಿಎಲ್ ಘಟಕದಿಂದ ಹೊರಬರುವ ಕಪ್ಪು ಆಯಿಲ್ ಮಿಶ್ರಿತ ತ್ಯಾಜ್ಯ ಸ್ಥಳೀಯ ಜಲಮೂಲಗಳನ್ನು ಸೇರುತ್ತಿದೆ. ಅಲ್ಲದೆ, ಇದೇ ನೀರು ಫಲ್ಗುಣಿ ನದಿಯನ್ನು ಸೇರುತ್ತಿದ್ದು, ಸಾರ್ವಜನಿಕರಿಗೆ ಗಂಭೀರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಕುರಿತ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ, ಲೋಕಾಯುಕ್ತ ಸುಮೋಟೋ ಕೇಸು ದಾಖಲಿಸಿದೆ. ಜಲಮೂಲಗಳು, ನದಿ, ತೋಡಿನಲ್ಲಿ ಹರಿಯುವ ನೀರಿನ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಮನುಷ್ಯರು, ಇತರ ಜೀವಿಗಳು, ಹಕ್ಕಿಗಳ ಆರೋಗ್ಯದ ದೃಷ್ಟಿಯಿಂದ ನೀರನ್ನು ಮಲಿನವಾಗದಂತೆ ಕಾಪಾಡಬೇಕಿದೆ.


ನೈರ್ಮಲ್ಯಯುತ ಪರಿಸರ ಮತ್ತು ಮಾಲಿನ್ಯ ರಹಿತ ನೀರನ್ನು ಪಡೆಯುವುದು ಸಂವಿಧಾನದ ಆರ್ಟಿಕಲ್ 21ರ ಪ್ರಕಾರ ಮನುಷ್ಯನ ಮೂಲಭೂತ ಹಕ್ಕು. ಹೀಗಾಗಿ ಮಾಲಿನ್ಯ ರಹಿತ ಪರಿಸರವನ್ನು ಕಾಪಾಡುವುದು ಸರಕಾರದ ಕರ್ತವ್ಯ ಮತ್ತು ಹೊಣೆಯಾಗಿರುತ್ತದೆ ಎಂದು ಹೇಳಿರುವ ಲೋಕಾಯುಕ್ತ ನ್ಯಾಯಮೂರ್ತಿ, ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ 23 ಪುಟಗಳ ನೋಟೀಸನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ತಹಸೀಲ್ದಾರ್ ಮತ್ತು ಎಂಆರ್ ಪಿಎಲ್ ಆಡಳಿತ ನಿರ್ದೇಶಕರಿಗೂ ಲೋಕಾಯುಕ್ತ ನೋಟೀಸ್ ಜಾರಿ ಮಾಡಿದೆ.
ಇತ್ತೀಚೆಗೆ ಎಂಆರ್ ಪಿಎಲ್ ತ್ಯಾಜ್ಯ ತೋಕೂರು ಭಾಗದ ತೋಡುಗಳಲ್ಲಿ ಮತ್ತು ಪರಿಸರದ ಕೃಷಿ, ಗದ್ದೆಗಳಲ್ಲಿ ಕಂಡುಬಂದಿರುವ ಬಗ್ಗೆ ಡಿವೈಎಫ್ಐ ಕಾರ್ಯಕರ್ತರು ಸರಕಾರದ ಗಮನ ಸೆಳೆಯುವ ಸಲುವಾಗಿ ಪ್ರತಿಭಟನೆ ನಡೆಸಿದ್ದರು. ಪರಿಸರ ನಿಯಂತ್ರಣ ಮಂಡಳಿ ಕಚೇರಿಯ ಮುಂದೆಯೂ ಪ್ರತಿಭಟನೆ ನಡೆಸಿದ್ದರು. ಆದರೆ, ಸ್ಥಳೀಯ ಅಧಿಕಾರಿ ವರ್ಗವಾಗಲೀ, ಜನಪ್ರತಿನಿಧಿಗಳಾಗಲೀ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು.
The Lokayukta, which has registered a suo motu complaint against Dakshina Kannada (DK) district deputy commissioner (DC), has served notices to the deputy commissioner and several other officials. It has taken serious view of the fact that effluents from the industrial area at Jokatte are flowing into the rivulet and River.
11-06-26 01:53 pm
HK News Staffer
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 10:03 pm
HK News Staffer
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
11-06-26 11:43 am
HK News Staffer
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm