ಕಾಂಗ್ರೆಸ್ ನಾಯಕರುಗಳಿಗೆ ಕ್ವಾರಂಟೈನ್ ನಿಯಮ ಅನ್ವಯಿಸುವುದಿಲ್ಲವೇ..? - ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್

02-08-20 12:47 pm       Mangalore Reporter   ಕರಾವಳಿ

ರಾಜ್ಯ ಸರಕಾರ ಕೊರೊನಾ ನಿಯಂತ್ರಣ ಮಾಡುವಲ್ಲಿ ಹಾಗು ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಏರು ಧ್ವನಿಯಲ್ಲಿ ಆರೋಪಿಸಿ ಬೊಬ್ಬೆರೆಯುತ್ತಿದ್ದ ಕಾಂಗ್ರೆಸ್ ನಾಯಕರು ಈಗ ಪೇಚಿಗೆ ಸಿಲುಕಿದ್ದಾರೆ.

ಮಂಗಳೂರು: ರಾಜ್ಯ ಸರಕಾರ ಕೊರೊನಾ ನಿಯಂತ್ರಣ ಮಾಡುವಲ್ಲಿ ಹಾಗು ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಏರು ಧ್ವನಿಯಲ್ಲಿ ಆರೋಪಿಸಿ ಬೊಬ್ಬೆರೆಯುತ್ತಿದ್ದ ಕಾಂಗ್ರೆಸ್ ನಾಯಕರು ಈಗ ಪೇಚಿಗೆ ಸಿಲುಕಿದ್ದಾರೆ. ಕಾಂಗ್ರೆಸ್ ಮುಖಂಡರೊಬ್ಬರ ಹಪಹಪಿ ಮನಸ್ಥಿತಿಯಿಂದಾಗಿ ಈಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಮೊದಲು ಗೊಂಡು ದ.ಕ ಜಿಲ್ಲೆಯ ಬಹತೇಕ ಎಲ್ಲಾ ಕಾಂಗ್ರೆಸ್ ನಾಯಕರು ಕ್ವಾರಂಟೈನ್ ಆಗುವ ಪರಿಸ್ಥಿತಿ ಸೃಷ್ಠಿಯಾಗಿದೆ. 

ಕೋವಿಡ್ 19 ಕ್ವಾರಂಟೈನ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ  ಡಿ.ಕೆ. ಶಿವಕುಮಾರ್ ಅವರು ದಕ್ಷಿಣ ಕನ್ನಡ  ಜಿಲ್ಲೆಗೆ  ಜುಲೈ 31 ರಂದು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜರವರು ಮತ್ತು ಕೊರೋನಾ  ಸೋಂಕಿಗೆ ಒಳಗಾಗಿ ಕ್ವಾರಂಟೈನ್ ಪೂರೈಸದಿರುವ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರು ಅವರ ರಾಜ್ಯಾಧ್ಯಕ್ಷರ ಎಡ ಬಲದಲ್ಲಿ ಸಾಮಾಜಿಕ ಅಂತರ ಕಾಯಿದೆ ಜಿಲ್ಲಾ ಪ್ರವಾಸದಲ್ಲಿ ಉಪಸ್ಥಿತರಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. 

ಇದೀಗ  ಐವನ್ ಡಿಸೋಜರವರಿಗೆ ಕೊರೋನ ದೃಢಪಟ್ಟಿದ್ದು ಇವರು ಭಾಗವಹಿಸಿರುವ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಾಮನಾಥ್ ರೈ ಹಾಗೂ ಯು.ಟಿ. ಖಾದರ್ ಕೂಡ ಜತೆಯಲ್ಲೇ ಇದ್ದರು. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಕಾಂಗ್ರೆಸ್ ನಾಯಕರು ಕ್ವಾರಂಟೈನ್ ಅಗಬೇಕಾಗಿದೆ. ಈಗಾಗಲೇ ಯು ಟಿ ಖಾದರ್ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಆದರೆ ಇತರರಿಗೆ ಈ ನಿಯಮ ಅನ್ವಯಿಸುವುದಿಲ್ಲವೇ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

ಈ ಜಿಲ್ಲಾ ಪ್ರವಾಸದಲ್ಲಿದ್ದ  ಡಿ ಕೆ ಶಿವಕುಮಾರ್ ಸಹಿತ ಅವರ ಜೊತೆಗಿದ್ದ ಕಾಂಗ್ರೆಸ್ ನಾಯಕರುಗಳು  ಯಾವಾಗ ಕ್ವಾರಂಟೈನ್ ಆಗುತ್ತಾರೆ...? ಇವರಿಗೆ ಈ ನೆಲದ ಕಾನೂನು ಅನ್ವಯವಾಗುದಿಲ್ಲವೆ...? ಕ್ವಾರಂಟೈನ್ ನಿಯಮಗಳಿಂದ ಕಾಂಗ್ರೆಸ್ ನಾಯಕರುಗಳಿಗೆ ವಿನಾಯಿತಿ ಇದೆಯೇ...? ಎಂಬುದನ್ನು ಕಾಂಗ್ರೆಸ್ ನಾಯಕರುಗಳು ರಾಜ್ಯದ ಜನತೆಗೆ ಸ್ಪಷ್ಟ ಪಡಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಒತ್ತಾಯಿಸಿದ್ದಾರೆ.