Virat Kohli, Premanand Maharaj: ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಲು ವಿರಾಟ್ ಕೊಹ್ಲಿಗೆ ₹5 ಕೋಟಿ ನೀಡಲಾಗಿತ್ತಾ? ಸಿಎಂ ಯೋಗಿಗೆ ಬರೆದ ಪತ್ರದಲ್ಲಿ ಉಲ್ಲೇಖ

07-10-26 09:13 pm       HK News Staffer   ಕ್ರೀಡೆ

ಪ್ರೇಮಾನಂದ ಮಹಾರಾಜ್ ಅವರ ವೃಂದಾವನ ಆಶ್ರಮಕ್ಕೆ ಭೇಟಿ ನೀಡಲು ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ₹5 ಕೋಟಿ ನೀಡಲಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಆರೋಪವನ್ನು ಕೊಹ್ಲಿಯ ಅಧಿಕೃತ ವಕ್ತಾರರು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಹೇಳಿಕೆ ಸುಳ್ಳು, ಆಧಾರರಹಿತ ಮತ್ತು ವಾಸ್ತವಾಂಶಕ್ಕೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ, ಅ.7: ಪ್ರೇಮಾನಂದ ಮಹಾರಾಜ್ ಅವರ ವೃಂದಾವನ ಆಶ್ರಮಕ್ಕೆ ಭೇಟಿ ನೀಡಲು ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ₹5 ಕೋಟಿ ನೀಡಲಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಆರೋಪವನ್ನು ಕೊಹ್ಲಿಯ ಅಧಿಕೃತ ವಕ್ತಾರರು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಹೇಳಿಕೆ ಸುಳ್ಳು, ಆಧಾರರಹಿತ ಮತ್ತು ವಾಸ್ತವಾಂಶಕ್ಕೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಹಲವು ಬಾರಿ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾಗಿದ್ದಾರೆ. 2023ರ ಜನವರಿಯಲ್ಲಿ ವೃಂದಾವನದ ಆಶ್ರಮಕ್ಕೆ ಮೊದಲ ಬಾರಿ ಭೇಟಿ ನೀಡಿದ್ದ ದಂಪತಿ, ಬಳಿಕವೂ ಹಲವು ಸಂದರ್ಭಗಳಲ್ಲಿ ಆಶ್ರಮಕ್ಕೆ ತೆರಳಿದ್ದಾರೆ. ಕೊಹ್ಲಿ ಭೇಟಿಗಳು ವೈಯಕ್ತಿಕ ನಂಬಿಕೆ ಮತ್ತು ಆಧ್ಯಾತ್ಮಿಕ ಗೌರವದಿಂದ ನಡೆದಿವೆ ಎಂದು ಕೊಹ್ಲಿ ವಕ್ತಾರರು ತಿಳಿಸಿದ್ದಾರೆ.

ಕೊಹ್ಲಿ ವಿರುದ್ಧ ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ಅಧ್ಯಕ್ಷ ದಿನೇಶ್ ಶರ್ಮಾ ಅಲಿಯಾಸ್‌ ‘ಫಲಹರಿ ಮಹಾರಾಜ್’ ₹5 ಕೋಟಿ ಆರೋಪ ಮಾಡಿದ್ದರು. ರಾಜಸ್ಥಾನ ಮೂಲದ ಖಾಸಗಿ ಕಂಪನಿ ಅಥವಾ ರಿಯಲ್ ಎಸ್ಟೇಟ್‌ ವಲಯಕ್ಕೆ ಸಂಬಂಧಿಸಿದವರು ಕೊಹ್ಲಿಯನ್ನು ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಕರೆತರಲು ₹5 ಕೋಟಿ ವೆಚ್ಚ ಮಾಡಿದ್ದಾರೆ ಎಂದು ದಿನೇಶ್ ಶರ್ಮಾ ಆರೋಪಿಸಿದ್ದರು. 

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಬರೆದ ಪತ್ರದಲ್ಲಿ ಈ ಆರೋಪಗಳನ್ನು ಮಾಡಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಕೊಹ್ಲಿ ವಕ್ತಾರ, “ವಿರಾಟ್ ಕೊಹ್ಲಿ ಅವರು ಪ್ರೇಮಾನಂದ ಮಹಾರಾಜ್ ಅವರ ಮೇಲಿನ ಆಳವಾದ ನಂಬಿಕೆ ಮತ್ತು ಗೌರವದಿಂದ ಆಶ್ರಮಕ್ಕೆ ಭೇಟಿ ನೀಡುತ್ತಾರೆ”. ಇಬ್ಬರ ನಡುವೆ ಯಾವುದೇ ಹಣದ ವ್ಯವಹಾರದ ಆಧಾರದ ಮೇಲೆ ಭೇಟಿ ನಡೆದಿಲ್ಲ ಎಂದು ಹೇಳಿದ್ದಾರೆ. ಇಂತಹ ಆರೋಪಗಳನ್ನು ವರದಿ ಅಥವಾ ಹಂಚಿಕೊಳ್ಳುವ ಮೊದಲು ವಾಸ್ತವಾಂಶ ಪರಿಶೀಲಿಸುವಂತೆಯೂ ಮನವಿ ಮಾಡಿದ್ದಾರೆ.

ವಿರಾಟ್ ಮತ್ತು ಅನುಷ್ಕಾ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಪ್ರೇಮಾನಂದ ಮಹಾರಾಜ್ ದಂಪತಿಗೆ ಜೀವನ, ಯಶಸ್ಸು, ಸೇವೆ ಮತ್ತು ಆಂತರಿಕ ನೆಮ್ಮದಿಯ ಕುರಿತು ಸಲಹೆಗಳನ್ನು ನೀಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ವೈರಲ್ ಆಗಿವೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕವೂ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲೂ ಜೀವನದಲ್ಲಿ ಯಶಸ್ಸು, ಹೆಸರು ಮತ್ತು ಹಣಕ್ಕಿಂತ ಮನಸ್ಸಿನ ನೆಮ್ಮದಿ ಮುಖ್ಯ ಎಂಬ ಸಂದೇಶವನ್ನು ಮಹಾರಾಜ್ ನೀಡಿದ್ದರು.

Cricketer Virat Kohli’s spokesperson has strongly rejected a claim that the former India captain was paid ₹5 crore to visit spiritual leader Premanand Maharaj’s ashram in Vrindavan, calling the allegation “completely false, baseless and factually incorrect.”