ಬ್ರೇಕಿಂಗ್ ನ್ಯೂಸ್
26-07-21 04:04 pm MYKHEL: Sadashiva ಕ್ರೀಡೆ
ಟೋಕಿಯೋ: ಭಾರತದ ಪಾಲಿಗೆ ಶುಭ ಸುದ್ದಿಯೊಂದು ಕೇಳಿ ಬರುವುದರಲ್ಲಿದೆ. ಎಣಿಕೆಯಂತೆ ನಡೆದರೆ ಭಾರತದ ಪಾಲಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ದಿನವೊಂದು ಕಾಣಸಿಗಲಿದೆ. ಅದೇನೆಂದರೆ ಭಾರತದ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ್ಕೆ ಮುತ್ತಿಕ್ಕುವ ಸಾಧ್ಯತೆಯಿದೆ. ಯಾಕೆಂದರೆ ಚಿನ್ನ ಪದಕ ಗೆದ್ದಿರುವ ಚೀನಾದ ಲಿಫ್ಟರ್ ಉದ್ದೀಪನಾ ಮದ್ದು ಸೇವನಾ ಪರೀಕ್ಷೆಗೆ ಒಳಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಜುಲೈ 24ರಂದು ನಡೆದಿದ್ದ 49ಕೆಜಿ ವಿಭಾಗದ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿಯ ಪದಕ ಗೆದ್ದಿದ್ದರು. ಆದರೆ ಆವತ್ತು ಬಂಗಾರ ಗೆದ್ದಿದ್ದ ಚೀನಾದ ಲಿಫ್ಟರ್ ಹೌ ಝಿಹುಯ್ ಡೋಪಿಂಗ್ ಟೆಸ್ಟ್‌ಗೆ ಒಳಗಾಗಿದ್ದಾರೆ. ಅವರ ಫಲಿತಾಂಶ ಪಾಸಿಟಿವ್ ಬಂದರೆ ಚಾನುಗೆ ಬಂಗಾರದ ಪದಕ ಒಲಿಯಲಿದೆ.
ಚಿನ್ನ ಗೆದ್ದಿದ್ದ ಚೀನಾ ಸ್ಪರ್ಧಿ ಹೊರಕ್ಕೆ?
ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೀರಾಬಾಯ್ ಚಾನು ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 115 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿಯ ಪದಕ ತನ್ನದಾಗಿಸಿಕೊಂಡಿದ್ದರು. ಇದೇ ವಿಭಾಗದಲ್ಲಿ ಚೀನಾದ ಹೌ ಝಿಹುಯ್ ಚಿನ್ನದ ಪದಕ (94kg+116kg) ಜಯಿಸಿದ್ದರು. ಆದರೆ ಈಗ ಚೀನಾ ಸ್ಪರ್ಧಿ ಡೋಪಿಂಗ್ ನಡೆಸಿರುವ ಅನುಮಾನದಿಂದ ಆ್ಯಂಟಿ ಡೋಪಿಂಗ್ ಅಥಾರಿಟಿಯ ಅಧಿಕಾರಿಗಳು ಝಿಹುಯ್ ಅವರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ ಝಿಹುಯ್ ಉದ್ದೀಪನಾ ಸೇವಿಸಿದ್ದು ಕಂಡುಬಂದರೆ ವೇಟ್ ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಆ ಸ್ಪರ್ಧೆಯಿಂದ ಝಿಹುಯ್ ಅಮಾನತಾಗುತ್ತಾರೆ ಎಂದು ವರದಿಯೊಂದು ಹೇಳಿದೆ.
ದಾಖಲೆ ಬರೆದಿದ್ದ ಚಾನು
ಮಣಿಪುರದ ರಾಜಧಾನಿ ಇಂಪಾಲ್‌ನ ಪೂರ್ವ ಭಾಗದ ನಾನ್‌ಪೋಕ್ ಕಾಕ್ಚಿಂಗ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಮೀರಾಬಾಯಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತಾ ಸಾಧನೆ ಮಾಡಿದ್ದರು. ಅಷ್ಟೇ ಅಲ್ಲ, ಒಲಿಂಪಿಕ್ಸ್ ಇತಿಹಾಸದಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯೆ ಎಂಬ ದಾಖಲೆಗೂ ಕಾರಣರಾಗಿದ್ದರು. ಲಿಫ್ಟಿಂಗ್‌ನಲ್ಲಿ ಒಲಿಂಪಿಕ್ಸ್ ಮೊದಲ ಪದಕ ಗೆದ್ದ ಭಾರತೀಯೆ ಎಂಬ ದಾಖಲೆ ಕರ್ಣಂ ಮಲ್ಲೇಶ್ವರಿ ಹೆಸರಿನಲ್ಲಿದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮಲ್ಲೇಶ್ವರಿ ಭಾರತಕ್ಕೆ ಕಂಚು ಗೆದ್ದಿದ್ದರು.
ವರದಿ ಸುಳ್ಳಾ, ನಿಜವಾ?
"ಮಹಿಳಾ ವೇಟ್ ಲಿಫ್ಟಿಂಗ್ ಮುಗಿದ ಬಳಿಕ ಬಂಗಾರ ಗೆದ್ದಿದ್ದ ಚೀನಾ ಲಿಫ್ಟರ್ ಹೌ ಝಿಹುಯ್ ಅವರು ಟೋಕಿಯೋದಲ್ಲೇ ಉಳಿಯುವಂತೆ ಮತ್ತು ಅವರಿಗೆ ಉದ್ದೀಪನಾ ಪರೀಕ್ಷೆ ನಡೆಸುವುದಾಗಿ ಉದ್ದೀಪನಾ ವಿರೋಧಿ ಸಂಸ್ಥೆ ಹೇಳಿತ್ತು. ಅದರಂತೆ ಝಿಹುಯ್‌ಗೆ ಖಂಡಿತಾ ಉದ್ದೀಪನಾ ಪರೀಕ್ಷೆ ಮಾಡಲಾಗಿದೆ," ಎಂದು ಮೂಲವೊಂದು ಎನ್‌ಎನ್‌ಐಗೆ ಮಾಹಿತಿ ನೀಡಿದೆ ಎನ್ನಲಾಗಿದೆ. ಆದರೆ ಈ ವರದಿಯನ್ನು ಕೆಲವರು ಸುಳ್ಳು ಎಂದು ತಳ್ಳಿಹಾಕುತ್ತಲೂ ಇದ್ದಾರೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಕೂಡ ಈ ಬಗ್ಗೆ ಯಾವುದೇ ಪುರಾವೆಯಿಲ್ಲ ಎಂದು ವರದಿಯನ್ನು ತಳ್ಳಿ ಹಾಕಿದೆ. ಅಂದ್ಹಾಗೆ, ಸ್ಪರ್ಧೆಯ ವೇಳೆ ಮೀರಾಬಾಯ್ 87+115 ಕೆಜಿಯಂತೆ ಒಟ್ಟು 202 ಕೆಜಿ ಭಾರತ ಎತ್ತಿದ್ದರೆ, ಝಿಹುಯ್ ಅವರು 94+116 ಕೆಜಿಯಂತೆ ಒಟ್ಟು 210 ಕೆಜಿ ತೂಕ ಎತ್ತಿದ್ದರು.
(Kannada Copy of Mykhel Kannada)
17-10-25 08:39 pm
HK News Desk
ಆರೆಸ್ಸೆಸ್ ಚಟುವಟಿಕೆ ಕಡಿವಾಣಕ್ಕೆ ಕೌಂಟರ್ ; ಸಾರ್ವಜ...
17-10-25 05:27 pm
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗೆ ಬ್ರೇಕ...
16-10-25 09:04 pm
ನವೆಂಬರಲ್ಲಿ ಅಧಿಕಾರ ಬಿಡಲು ಹೈಕಮಾಂಡ್ ಹೇಳಿಲ್ಲ, ಸಿದ...
16-10-25 04:44 pm
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
17-10-25 05:25 pm
HK News Desk
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
17-10-25 09:36 pm
Mangalore Correspondent
1971ರ ಭಾರತ - ಪಾಕ್ ಯುದ್ಧದಲ್ಲಿ ಹೆಲಿಕಾಪ್ಟರ್ ನಿಂದ...
16-10-25 10:37 pm
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ...
16-10-25 05:09 pm
ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನ ಕೋಗಿಲೆ ದಿನೇಶ...
16-10-25 01:11 pm
17-10-25 03:27 pm
Bangalore Correspondent
Vitla Honeytrap case, Police, Mangalore: ಬಶೀರ...
17-10-25 03:23 pm
ಆತ್ಮಶಕ್ತಿ ಬೆನ್ನಲ್ಲೇ ಒಡಿಯೂರು ಸಹಕಾರಿ ಬ್ಯಾಂಕಿಗೂ...
17-10-25 11:56 am
ಕೆಪಿಸಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಹಲವ...
17-10-25 11:53 am
ಹುಷಾರಿಲ್ಲದ ವೈದ್ಯೆ ಪತ್ನಿಯನ್ನು ಕೈಯಾರೆ ಇಂಜೆಕ್ಷನ್...
15-10-25 04:51 pm