ಅರೆಕ್ಷಣದ ಸಿಟ್ಟು ಮೊಮ್ಮಗನ ಲಟ್ಟಣಿಗೆ ಪೆಟ್ಟು ; ಅಜ್ಜಿ ಶವ ಮನೆಯಲ್ಲೇ ಮುಚ್ಚಿಟ್ಟು ಐದಾರು ವರ್ಷಗಳಿಂದಲೂ ತಲೆಮರೆಸಿಕೊಂಡಿದ್ದ ತಾಯಿ, ಮಗ ! ಏರೋ ಇಂಜಿನಿಯರ್ ಆಗಬೇಕಿದ್ದ ಮಗ ಹೊಟೇಲಿನಲ್ಲಿ ಸರ್ವರ್ ಆಗಿಬಿಟ್ಟ!

07-10-22 07:31 pm       Bangalore Correspondent   ಕ್ರೈಂ

ಇದು ಕ್ರೈಮ್ ಸೀರಿಯಲ್ ಮಾಡೋಕೆ ಲಾಯಕ್ಕ್ ಆಗಿರೋ ರಿಯಲ್ ಕತೆ. ಯಾಕಂದ್ರೆ, ಈ ಕತೆಯಲ್ಲಿ ಕ್ರೈಮ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ನಾಲ್ಕೈದು ವರ್ಷಗಳ ಕಾಲ ಬೆನ್ನಿಗೆ ಬಿದ್ದು ತನಿಖೆ ನಡೆಸುವ ಪೊಲೀಸರ ಕತೆಯೂ ಇದೆ.

ಬೆಂಗಳೂರು, ಅ.7: ಇದು ಕ್ರೈಮ್ ಸೀರಿಯಲ್ ಮಾಡೋಕೆ ಲಾಯಕ್ಕ್ ಆಗಿರೋ ರಿಯಲ್ ಕತೆ. ಯಾಕಂದ್ರೆ, ಈ ಕತೆಯಲ್ಲಿ ಕ್ರೈಮ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ನಾಲ್ಕೈದು ವರ್ಷಗಳ ಕಾಲ ಬೆನ್ನಿಗೆ ಬಿದ್ದು ತನಿಖೆ ನಡೆಸುವ ಪೊಲೀಸರ ಕತೆಯೂ ಇದೆ. ಹೌದು.. 2016ರಲ್ಲಿ ನಡುವೆ ಅಚಾನಕ್ಕಾಗಿ ಕೊಲೆಯಾದ ಅಜ್ಜಿಯನ್ನು ಆಕೆಯ ಮೊಮ್ಮಗನೇ ತಾಯಿ ಜೊತೆ ಸೇರಿ ಮುಚ್ಚಿಟ್ಟು ಐದು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡು ಕೊನೆಗೂ ಸಿಕ್ಕಿಬಿದ್ದ ಕತೆಯದು.

ಕೆಂಗೇರಿಯ ಸ್ಯಾಟಲೈಟ್ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿ ಮೊಮ್ಮಗ ಸಂಜಯ, ಆತನ ತಾಯಿ ಶಶಿಕಲಾ ಮತ್ತು ಅಜ್ಜಿ ಶಾಂತಕ್ಕ ಜೊತೆಯಾಗೇ ವಾಸವಿದ್ದರು. ಚಿಕ್ಕಂದಿನಿಂದಲೇ ಬ್ರಿಲಿಯಂಟ್ ಆಗಿದ್ದ ಮೊಮ್ಮಗ ಸಂಜಯ್ (20) ಏರೋ ನಾಟಿಕಲ್ ಇಂಜಿನಿಯರಿಂಗ್ ಓದುತ್ತಿದ್ದ. 2016ರ ಆಗಸ್ಟ್ ನಲ್ಲಿ ಒಂದು ದಿನ ಕಾಲೇಜಿನಿಂದ ಬರುತ್ತಲೇ ಸಂಜಯ್ ತನ್ನ ಅಜ್ಜಿ ಮತ್ತು ತಾಯಿಗೆಂದು ಗೋಬಿ ಮಂಚೂರಿ ಪಾರ್ಸೆಲ್ ಹಿಡ್ಕೊಂಡು ಬಂದಿದ್ದ. ಆದರೆ ವಿಪರೀತ ಮಡಿವಂತಿಕೆ ಇಟ್ಟುಕೊಂಡಿದ್ದ ಅಜ್ಜಿ ಶಾಂತಕುಮಾರಿ(69) ಮೊಮ್ಮಗನ ಪಾರ್ಸೆಲ್ ನೋಡಿ ಸಿಡುಕಿದ್ದರು. ಯಾರ್ಯಾರೋ ಮಾಡಿದ್ದನ್ನು ನಾನು ತಿನ್ನೋಲ್ಲ. ಏನಂದ್ಕೊಂಡಿದ್ದೀಯಾ ನನ್ನನ್ನು.. ಇವನ್ನೆಲ್ಲ ನೀನೇ ತಿಂದು ಸಾಯಿ ಎಂದು ಅಜ್ಜಿ ತನ್ನ ಕೈಗಿತ್ತಿದ್ದ ಗೋಬಿಯನ್ನು ನೇರವಾಗಿ ಸಂಜಯ್ ಮುಖಕ್ಕೆ ಎಸೆದಿದ್ದಳು.

ಇಷ್ಟಕ್ಕೇ ಸಿಟ್ಟಿಗೆದ್ದ ಮೊಮ್ಮಗ, ಅಲ್ಲಿಯೇ ಇದ್ದ ಲಟ್ಟಣಿಗೆಯಲ್ಲಿ ಅಜ್ಜಿಯ ತಲೆಗೆ ಬಡಿದಿದ್ದ. ಹುಡುಗ ಕೊಟ್ಟ ಪೆಟ್ಟು ನಡು ನೆತ್ತಿಗೆ ಬಿದ್ದ ಕಾರಣ ಆಕೆ ಅಲ್ಲಿಯೇ ನೆಲಕ್ಕೆ ಕುಸಿದಿದ್ದಳು. ತಲೆಯಿಂದ ರಕ್ತ ಸೋರಿ, ಇಡೀ ಮೈಯೆಲ್ಲಾ ರಕ್ತದಲ್ಲಿ ತೋಯ್ದು ಹೋಗಿತ್ತು. ಹೊರಗಿದ್ದ ತಾಯಿ ಓಡಿ ಬಂದು, ನನ್ನ ತಾಯಿಯನ್ನು ಸಾಯಿಸಿ ಬಿಟ್ಯಲ್ಲಪ್ಪಾ... ನಿನ್ನನ್ನು ಬಿಡೋದಿಲ್ಲ.. ಪೊಲೀಸರಿಗೆ ಹೇಳಿ, ನಿನ್ನನ್ನು ಜೈಲಿಗೆ ಹಾಕುತ್ತೇನೆ ಎಂದು ಜೋರು ಮಾಡಿದ್ದಾಳೆ. ಆದರೆ, ತಾಯಿ ಕಾಲಿಗೆ ಬಿದ್ದ ಮಗ ಸಂಜಯ, ನೀನು ಪೊಲೀಸರಿಗೆ ಹೇಳಿದ್ರೆ ನಾನು ಜೈಲಿಗೆ ಹೋಗ್ತೀನಿ, ನೀನು ನನ್ನನ್ನು ಜೈಲಿಗೆ ಹಾಕಿ ಏನ್ಮಾಡ್ತೀಯಾ ಎಂದು ಹೆದರಿಸಿದ್ದಾನೆ.

Murder under Indian Penal Code: All you need to know about it

ಮಗನ ಕರುಣಾರ್ದ್ರ ಮಾತುಗಳಿಗೆ ಕಟ್ಟುಬಿದ್ದ ತಾಯಿ, ಅಜ್ಜಿಯ ಕೊಲೆ ವಿಚಾರವನ್ನು ಮುಚ್ಚಿಡಲು ಸಹಕರಿಸಿದ್ದಾಳೆ. ಅಲ್ಲದೆ. ಕೊಲೆಯಾಗಿ ಬಿದ್ದ ಅಜ್ಜಿಯನ್ನು ಹೊರಗೆ ಒಯ್ದರೆ ಜನ ನೋಡುತ್ತಾರೆ, ಹೇಳುವುದಕ್ಕೂ ಆಗೋದಿಲ್ಲ ಅಂತ ಮನೆಯೊಳಗೇ ಕಪಾಟಿನಲ್ಲಿ ಬಚ್ಚಿಟ್ಟು ಮುಚ್ಚಿದ್ದಾರೆ. ಆದರೆ ಕೆಲವು ದಿನ ಕಳೆಯುತ್ತಿದ್ದಂತೆ ಹೆಣ ವಾಸನೆ ಬಂದಿತ್ತು. ಕೆಮಿಕಲ್ ಹಾಕಿಟ್ಟು ವಾಸನೆ ಹೊರಗೆ ಬಾರದಂತೆ ನೋಡಿಕೊಂಡಿದ್ದರು. ಆನಂತರ, ಅಲ್ಲಿಗೇ ಸಿಮೆಂಟ್ ತುಂಬಿಸಿ ಹೊರಗೆ ವಾಸನೆ ಬರದಂತೆ ಮಾಡಿದ್ದರು. ಹೀಗೆಯೇ ಮೂರು ತಿಂಗಳ ಕಾಲ ಅಜ್ಜಿಯ ಶವ ಬಚ್ಚಿಟ್ಟು ಅದೇ ಮನೆಯಲ್ಲಿ ತಾಯಿ ಮಗ ವಾಸ ಮಾಡಿಕೊಂಡಿದ್ದರು.

Story of the trial in Uthra murder case - iPleaders

ಆನಂತರ, ತಾವು ಊರು ಶಿವಮೊಗ್ಗಕ್ಕೆ ಹೋಗಿ ಬರುವುದಾಗಿ ಹೇಳಿ ತಾಯಿ, ಮಗ ಮನೆ ಮಾಲೀಕನಿಗೆ ಹೇಳಿ ಹೊರಟಿದ್ದರು. ಆದರೆ ಆರು ತಿಂಗಳು ಕಳೆದರೂ ಇವರು ಮರಳಿ ಬಾರದೇ ಇದ್ದುದರಿಂದ ಮನೆ ಮಾಲೀಕ ಗಾಬರಿಗೊಂಡು ಮನೆಯಲ್ಲೊಮ್ಮೆ ಚೆಕ್ ಮಾಡಿಕೊಂಡು ಬರೋಣ ಎಂದು ತನ್ನಲ್ಲಿದ್ದ ಕೀಯಲ್ಲಿ ಮನೆಯ ಬಾಗಿಲು ತೆಗೆದಿದ್ದ. ಮನೆ ಒಳಗೆ ಹೋಗುತ್ತಲೇ ಏನೋ ವಿಚಿತ್ರ ವಾಸನೆ ತುಂಬಿಕೊಂಡಿತ್ತು. ಮೂಗಿಗೆ ಬಡಿಯುತ್ತಿದ್ದ ದುರ್ನಾತಕ್ಕೆ ಹೆದರಿ ಏನೋ ಸತ್ತಿರಬೇಕು ಎಂದು ಮೂಲೆ ಮೂಲೆಯಲ್ಲಿ ತಡಕಾಡಿದ್ದರು. ಮುಚ್ಚಿದ್ದ ಕಪಾಟು ತೆರೆದು ನೋಡಿದಾಗ, ಕರಟಿ ಹೋಗಿದ್ದ ಮನುಷ್ಯ ದೇಹದ ಕಳೇಬರ ಕಂಡಿತ್ತು. ಅಲ್ಲದೆ, ರಕ್ತದಲ್ಲಿ ತೋಯ್ದುಕೊಂಡಿದ್ದ ರೀತಿಯ ಸೀರೆಯೂ ಕಪಾಟಿನಲ್ಲೇ ಇತ್ತು.

Coimbatore: Class 12 boy killed by friends- The New Indian Express

ಏನೋ ಅಚಾತುರ್ಯ ಆಗಿರಬೇಕೆಂದುಕೊಂಡು ಮನೆ ಮಾಲೀಕ ಪೊಲೀಸರನ್ನು ಕರೆಸಿದ್ದ. ಆ ಮನೆಯಲ್ಲಿ ಬಾಡಿಗೆ ಬರುವಾಗ ಒಬ್ಬಳು ಅಜ್ಜಿ ಇದ್ದಳು. ಆನಂತರ, ಅಜ್ಜಿ ಕಾಣದಾಗಿದ್ದರು. ಅದೇ ಅಜ್ಜಿಯ ಹೆಣ ಆಗಿರಬೇಕು ಅಂತೆಲ್ಲ ಪೊಲೀಸರಿಗೂ ಅರೆಬರೆ ಮಾಹಿತಿಗಳನ್ನು ಮನೆ ಮಾಲೀಕ ಹೇಳಿಕೊಂಡಿದ್ದ. ಅಲ್ಲದೆ, ತಾಯಿ, ಮಗನ ವಿಳಾಸದ ಮಾಹಿತಿಯನ್ನೂ ನೀಡಿದ್ದ. 2017ರ ಮೇ 7ರಂದು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ತಾಯಿ ಶಶಿಕಲಾ ಮತ್ತು ಮಗ ಸಂಜಯನ ಮೊಬೈಲ್ ನಂಬರ್ ಆಧರಿಸಿ, ಬೆನ್ನು ಬಿದ್ದಿದ್ದರು.

Phone Tracker, IMEI Tracker - Mobile Number Tracker

ಇತ್ತ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ಮತ್ತು ಅಜ್ಜಿಯ ಕೊಲೆ ವಿಚಾರ ಬಯಲಾಗಿದ್ದು ಸಂಜಯನಿಗೂ ತಿಳಿದುಹೋಗಿತ್ತು. ಆತನ ಸ್ನೇಹಿತ ನಂದೀಶ್ ಎಂಬಾತ ಬೆಂಗಳೂರಿನಲ್ಲಿದ್ದುಕೊಂಡೇ ಆತನಿಗೆ ಮಾಹಿತಿ ನೀಡುತ್ತಿದ್ದ. ಮೊದಲಿಗೆ ತಮ್ಮೂರು ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ತೆರಳಿ ಅಲ್ಲಿ ನೆಲೆಸಿದ್ದ ತಾಯಿ, ಮಗ ಆನಂತರ, ಪೊಲೀಸರು ಬೆನ್ನು ಬಿದ್ದಿದ್ದಾರೆ ಅನ್ನೋದು ತಿಳಿಯುತ್ತಲೇ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿದ್ದರು. ಏರೋ ನಾಟಿಕಲ್ ಇಂಜಿನಿಯರಿಂಗ್ ಕಲಿತು ವಿಜ್ಞಾನಿಯೋ, ಹೆಲಿಕಾಪ್ಟರ್ ತಂತ್ರಜ್ಞನೋ ಆಗಬೇಕಿದ್ದ ಸಂಜಯ ಅಲ್ಲಿ ಹೊಟೇಲ್ ನಲ್ಲಿ ಸರ್ವರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ತಾಯಿ, ಮಗ ಅದ್ಹೇಗೋ ಜೀವನ ಮಾಡಿಕೊಂಡಿದ್ದರು. ಆದರೆ ಆತನ ಮೊಬೈಲ್ ಟ್ರೇಸ್ ಮಾಡುತ್ತಲೇ ಇದ್ದ ಪೊಲೀಸರು, ಯಾರ ಜೊತೆ ಹೆಚ್ಚು ಕನೆಕ್ಟ್ ಆಗಿದ್ದಾನೆ ಅನ್ನೋದನ್ನು ಪತ್ತೆ ಮಾಡಿದ್ದಾರೆ. ಬೆಂಗಳೂರಿನಲ್ಲಿದ್ದ ನಂದೀಶ್ ಜೊತೆ ಒಡನಾಟ, ಸಂಪರ್ಕ ಇರುವುದನ್ನರಿತು ಆತನನ್ನು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಪಡೆಯುತ್ತಾರೆ.

Punjab AIG Ashish Kapoor arrested for taking Rs 1 crore bribe - India News

ಐದು ವರ್ಷ ಕಳೆದಿದ್ದರಿಂದ ಇನ್ನೇನೂ ಆಗಲ್ಲ, ಕೇಸ್ ಬಿದ್ದು ಹೋಗಿರಬಹುದು ಅಂದ್ಕೊಂಡಿದ್ದ ತಾಯಿ, ಮಗನನ್ನು ಪೊಲೀಸರು ಮೊನ್ನೆ ಮೊನ್ನೆ ಹಿಡಿದು ಬೆಂಗಳೂರಿಗೆ ಕರ್ಕೊಂಡು ಬಂದಿದ್ದಾರೆ. ಮೊದಲಿಗೆ ತಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಕತೆ ಕಟ್ಟಿದ್ದರೂ, ಇಬ್ಬರನ್ನೂ ಬೇರೆ ಬೇರೆಯಾಗಿ ಕುಳ್ಳಿರಿಸಿ ಬಾಯಿ ಬಿಡಿಸಿದಾಗ ತಾಯಿ ಮಗನ ಬಾಯಲ್ಲೇ ಅಸಲಿ ಸತ್ಯ ಹೊರಬಿದ್ದಿತ್ತು. ಅರೆಕ್ಷಣದ ಸಿಟ್ಟು, ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಟ್ಟು ಅಜ್ಜಿಯನ್ನೇ ಹೊಡೆದು ಕೊಂದು ಬಿಟ್ಟಿದ್ದಲ್ಲದೆ, ಅದನ್ನು ಮುಚ್ಚಿಟ್ಟು ಮೂರು ತಿಂಗಳ ಕಾಲ ಶವದ ಜೊತೆಗೇ ವಾಸವಿದ್ದು ಐದಾರು ವರ್ಷಗಳಿಂದಲೂ ದಿಕ್ಕು ತಪ್ಪಿಸುತ್ತಲೇ ವಾಸ ಮಾಡಿಕೊಂಡಿದ್ದ ತಾಯಿ ಮಗ ಕಡೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಏರೋ ನಾಟಿಕಲ್ ಇಂಜಿಯರ್ ಆಗಬೇಕಿದ್ದ ಹುಡುಗ ಸಂಜಯ ತನ್ನ ಬಾಳನ್ನೇ ಹಾಳು ಮಾಡಿಕೊಂಡು ಜೈಲು ಸೇರಿದ್ದಾನೆ. ಮಗನೆಂಬ ಮಮಕಾರಕ್ಕೆ ಬಿದ್ದು ಕೊಲೆ ಕೃತ್ಯ ಮುಚ್ಚಿಟ್ಟಿದ್ದ ತಾಯಿ ಶಶಿಕಲಾ ಮತ್ತು ಆನಂತರ ಸಂಜಯ ತಪ್ಪಿಸಿಕೊಳ್ಳಲು ಸಹಕರಿಸಿದ್ದ ನಂದೀಶ ಎಲ್ಲರೂ ಜೈಲು ಸೇರಿದ್ದಾರೆ.

ವೃದ್ಧೆ ಶಾಂತಕುಮಾರಿಯ ಕೊಲೆ ವಿಚಾರ ಪೊಲೀಸರಿಗೂ ಸವಾಲಾಗಿತ್ತು. ಈ ನಡುವೆ, ಮೂರನೇ ಆರೋಪಿಯಾಗಿ ನಂದೀಶ್ ವಶಕ್ಕೆ ಪಡೆದು ತನಿಖೆ ನಡೆಸಿದ್ದರೂ ನೈಜ ಆರೋಪಿಗಳು ಸಿಕ್ಕಿರಲಿಲ್ಲ. ತಾಯಿ, ಮಗ ಆಗಾಗ ತಮ್ಮ ವಾಸ ಸ್ಥಾನ ಬದಲಾಯಿಸಿದ್ದರಿಂದ ಪೊಲೀಸರ ಕೈಗೆ ಸಿಗದಾಗಿದ್ದರು. ಆದರೆ ಕೆಂಗೇರಿ ಪೊಲೀಸರು ಇದನ್ನೇ ಸವಾಲಾಗಿ ಸ್ವೀಕರಿಸಿ ಮಹಾರಾಷ್ಟ್ರ ಗಡಿಯಲ್ಲಿಯೇ ನಿಗಾ ಇಟ್ಟಿದ್ದರು. ಇದೀಗ ಮಹಾರಾಷ್ಟ್ರ ಗಡಿ ಭಾಗದಿಂದಲೇ ಆರೋಪಿ ಸಂಜಯ್ ನನ್ನು ಅರೆಸ್ಟ್ ಮಾಡಿದ್ದು ತಾಯಿಯನ್ನು ಬಂಧಿಸಿದ್ದಾರೆ.

Bangalore crime news, grand son and mother kill grandmother, arrested after five years. Grandson who desired to become a pilot is now working as a waiter.