ಇಬ್ಬರು ಮಹಿಳೆಯರ ರುಂಡ ಕತ್ತರಿಸಿ ನರಬಲಿ ; ಧನ ಸಂಪತ್ತು ವೃದ್ಧಿಗಾಗಿ ಮಂತ್ರವಾದಿ ದಂಪತಿಯ ಪೈಶಾಚಿಕ ಕೃತ್ಯ, ನಾಪತ್ತೆ ಪ್ರಕರಣದ ಬೆನ್ನುಬಿದ್ದ ಕೇರಳ ಪೊಲೀಸರಿಗೆ ಶಾಕ್  

11-10-22 05:40 pm       HK News Desk   ಕ್ರೈಂ

ಮಾಟ, ಮಂತ್ರಕ್ಕೆ ಕುರಿ, ಕೋಳಿಯನ್ನು ಬಲಿ ಕೊಡುವುದು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವೃದ್ಧ ಮಂತ್ರವಾದಿ ಇಬ್ಬರು ಮಹಿಳೆಯರನ್ನು ಉಪಾಯದಿಂದ ಮನೆಗೆ ಕರೆಸಿ, ಅವರ ರುಂಡ ಮುಂಡವನ್ನೇ ಕತ್ತರಿಸಿ ನರಬಲಿ ಕೊಟ್ಟಿದ್ದಾನೆ.

ಕೊಚ್ಚಿ, ಅ.11: ಮಾಟ, ಮಂತ್ರಕ್ಕೆ ಕುರಿ, ಕೋಳಿಯನ್ನು ಬಲಿ ಕೊಡುವುದು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವೃದ್ಧ ಮಂತ್ರವಾದಿ ಇಬ್ಬರು ಮಹಿಳೆಯರನ್ನು ಉಪಾಯದಿಂದ ಮನೆಗೆ ಕರೆಸಿ, ಅವರ ರುಂಡ ಮುಂಡವನ್ನೇ ಕತ್ತರಿಸಿ ನರಬಲಿ ಕೊಟ್ಟಿದ್ದಾನೆ. ಎರಡು ತಿಂಗಳ ಅಂತರದಲ್ಲಿ ಕಾಣೆಯಾಗಿದ್ದ ಇಬ್ಬರು ಮಹಿಳೆಯರ ಬೆನ್ನುಬಿದ್ದ ಪೊಲೀಸರು ಮಂತ್ರವಾದಿಯ ಪೈಶಾಚಿಕ ಕೃತ್ಯವನ್ನು ಪತ್ತೆ ಮಾಡಿದ್ದಾರೆ.

ಪತ್ತನಂತಿಟ್ಟ ಜಿಲ್ಲೆಯ ಇಳಂತೂರು ಎನ್ನುವ ಗ್ರಾಮದಲ್ಲಿ ಭೀಭತ್ಸ ಘಟನೆ ಬೆಳಕಿಗೆ ಬಂದಿದೆ. ನರಬಲಿ ಕೊಟ್ಟು ಅಲೌಕಿಕ ಶಕ್ತಿಯನ್ನು ಒಲಿಸಿಕೊಂಡರೆ ಅಪಾರ ಧನಸಂಪತ್ತು ತಮ್ಮದಾಗುತ್ತದೆ ಎಂಬ ಮೂಢ ನಂಬಿಕೆಯಿಂದ ಮಂತ್ರವಾದಿ ದಂಪತಿ, ಪೈಶಾಚಿಕ ಕೃತ್ಯ ಎಸಗಿದ್ದಾರೆ ಎನ್ನುವ ಅಂಶ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಭಗವಾಲ್ ಸಿಂಗ್ ಎನ್ನುವ 65 ವರ್ಷದ ವ್ಯಕ್ತಿ ತನ್ನ ಮನೆಯಲ್ಲೇ ಮಂತ್ರವಾದ, ಮನೆಮದ್ದಿನಿಂದ ರೋಗ ಗುಣಪಡಿಸುತ್ತೇನೆಂದು ಹೇಳಿ ಔಷಧ ಕೊಡುತ್ತಿದ್ದ. ಭಗವಾಲ್ ಸಿಂಗ್ ಮಂತ್ರವಾದ, ಮನೆಮದ್ದಿನ ಕಾರಣಕ್ಕೆ ಪ್ರಸಿದ್ಧಿಯನ್ನೂ ಪಡೆದಿದ್ದ. ಪೊಲೀಸರು ಭಗವಾಲ್ ಸಿಂಗ್, ಆತನ ಪತ್ನಿ ಲೀಲಾ ಮತ್ತು ಕೃತ್ಯಕ್ಕೆ ಸಹಕರಿಸಿದ ಪೆರುಂಬಾವೂರು ನಿವಾಸಿ ಶಾಫಿ ಅಲಿಯಾಸ್ ರಶೀದ್ ಎಂಬಾತನನ್ನು ಬಂಧಿಸಿದ್ದಾರೆ.

Shocking: Kerala couple 'sacrifice' two women for prosperity; three held-  The New Indian Express

ಎರ್ನಾಕುಲಂ ಜಿಲ್ಲೆಯಲ್ಲಿ ಲಾಟರಿ ಮಾರುತ್ತಿದ್ದ ಇಬ್ಬರು ಮಹಿಳೆಯರ ನಾಪತ್ತೆ ಪ್ರಕರಣದ ಬೆನ್ನುಬಿದ್ದ ಪೊಲೀಸರು ತನಿಖೆ ನಡೆಸಿದಾಗ ನರಬಲಿ ಕೃತ್ಯ ಬಯಲಿಗೆ ಬಂದಿದೆ. ಕಳೆದ ಸೆಪ್ಟಂಬರ್ 26ರಂದು ಪಳನಿಯಮ್ಮ ಎಂಬ ಮಹಿಳೆ ತನ್ನ ತಂಗಿ ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಕೊಚ್ಚಿಯ ಕಡವಂತಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪದ್ಮಾ ಮೂಲತಃ ತಮಿಳನಾಡಿನ ಧರ್ಮಪುರಿ ನಿವಾಸಿಯಾಗಿದ್ದು, ಕಳೆದ ಕೆಲವು ತಿಂಗಳಿಂದ ಕೊಚ್ಚಿಯಲ್ಲಿ ವಾಸವಿದ್ದರು. ಲಾಟರಿ ಮಾರಾಟ ಮಾಡುತ್ತಿದ್ದ ಪದ್ಮಾಳ ಮೊಬೈಲ್ ನಂಬರ್ ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಶಾಫಿಯ ಜೊತೆಗೆ ಸಂಪರ್ಕ ಇದ್ದುದು ಪತ್ತೆಯಾಗಿತ್ತು. ಶಾಫಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡಬಲ್ ಮರ್ಡರ್ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಇದಕ್ಕೂ ಮುನ್ನ ಜೂನ್ 8ರಂದು ರೋಸ್ಲಿನ್ ಎಂಬ 49 ವರ್ಷದ ಮಹಿಳೆಯೂ ಕಾಣೆಯಾಗಿದ್ದರು. ಎರ್ನಾಕುಲಂ ಜಿಲ್ಲೆಯ ಕಾಲಡಿ ಎಂಬಲ್ಲಿ ಲಾಟರಿ ಮಾರುತ್ತಿದ್ದ ಮಹಿಳೆಯ ನಾಪತ್ತೆ ಬಗ್ಗೆ ಆಕೆಯ ಮಗಳು ಪೊಲೀಸ್ ದೂರು ನೀಡಿದ್ದರು. ಜೂನ್ 8ರಂದು ನಾಪತ್ತೆ ಆಗಿದ್ದರೂ ಉತ್ತರ ಪ್ರದೇಶದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಆಕೆಯ ಮಗಳು ಬಂದು ಪೊಲೀಸ್ ದೂರು ನೀಡಿದಾಗ ಆಗಸ್ಟ್ 17 ಆಗಿತ್ತು. ಪೊಲೀಸರು ಆ ಬಗ್ಗೆ ಹೆಚ್ಚೇನು ತನಿಖೆ ನಡೆಸದೆ ಪತ್ತೆಯಾಗದ ಪ್ರಕರಣ ಎಂದು ಬದಿಗಿಟ್ಟಿದ್ದರು. ಕೊಚ್ಚಿ ಪೊಲೀಸರು ತನಿಖೆ ನಡೆಸಿದ ವೇಳೆ ಶಾಫಿ ಬಾಯ್ಬಿಟ್ಟ ಮಾಹಿತಿಗಳು ಪೊಲೀಸರನ್ನೇ ದಂಗು ಬಡಿಸಿದ್ದು ಮಂತ್ರವಾದಿಯ ಕೈವಾಡದ ಬಗ್ಗೆ ಮಾಹಿತಿ ನೀಡಿದ್ದಾನೆ.

Two women killed in 'human sacrifice' in Kerala's Pathanamthitta district; 1  held | Cities News,The Indian Express

ಇದರಂತೆ, ಕೊಚ್ಚಿ ಪೊಲೀಸರು ಪತ್ತನಂತಿಟ್ಟ ಜಿಲ್ಲೆಯ ಇಳಂತೂರಿನಲ್ಲಿ ನೆಲೆಸಿದ್ದ ಮಂತ್ರವಾದಿ ದಂಪತಿಯನ್ನು ಬಂಧಿಸಿದ್ದಾರೆ. ಶಾಫಿ, ಮಹಿಳೆಯರನ್ನು ಹಣ ಕೊಡಿಸುವ ನಂಬಿಕೆ ಹುಟ್ಟಿಸಿ ಮಂತ್ರವಾದಿಯ ಮನೆಗೆ ಕರೆತರುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲಿಗೆ ಕರೆತರುತ್ತಿದ್ದ ಮಹಿಳೆಯನ್ನು ಮಂತ್ರವಾದಿ, ಅತ್ಯಂತ ಪೈಶಾಚಿಕವಾಗಿ ದೇವತೆಯನ್ನು ಸಂತುಷ್ಟಿ ಪಡಿಸುವ ನೆಪದಲ್ಲಿ ಕುತ್ತಿಗೆಯನ್ನು ಕತ್ತರಿಸುತ್ತಿದ್ದ. ಆನಂತರ, ಇಡೀ ದೇಹವನ್ನು ಕತ್ತರಿಸಿ ಬಳಿಕ ಮನೆ ಪರಿಸರದ ಗದ್ದೆಯಲ್ಲಿ ಹೂಳುತ್ತಿದ್ದ. ಒಂದೇ ರೀತಿಯಲ್ಲಿ ಇಬ್ಬರು ಮಹಿಳೆಯರನ್ನು ಸಂಪತ್ತು ಸಿಗುವ ಆಸೆಯಿಂದ ಬಲಿ ಕೊಡಲಾಗಿದೆ ಎನ್ನಲಾಗುತ್ತಿದ್ದು, ಪೊಲೀಸರು ಘಟನೆ ಬಗ್ಗೆ ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ.

ಭಗವಾಲ್ ಸಿಂಗ್ ಕುಟುಂಬ ಹಿಂದಿನಿಂದಲೂ ಮಂತ್ರವಾದ, ರೋಗಕ್ಕೆ ಔಷಧ ನೀಡುವ ಪದ್ಧತಿ ಅನುಸರಿಸಿಕೊಂಡು ಬಂದಿತ್ತು. ಭಗವಾಲ್ ಫೇಸ್ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳನ್ನೂ ಹೊಂದಿದ್ದು. ಸಾವಿರಾರು ಮಂದಿ ಫಾಲೋವರ್ ಗಳನ್ನು ಹೊಂದಿದ್ದಾನೆ. ಶಾಫಿಯೂ ಸೋಶಿಯಲ್ ಮೀಡಿಯಾದಲ್ಲಿಯೇ ಪರಿಚಯ ಆಗಿದ್ದ. ಬಳಿಕ ಹಣದಾಸೆಗೆ ಬಿದ್ದು ಮಹಿಳೆಯರನ್ನು ಮಂತ್ರವಾದಿಗೆ ಪರಿಚಯ ಮಾಡಿಸುತ್ತಿದ್ದ. ಈಗ ನರಬಲಿಗೆ ಒಳಗಾಗಿದ್ದಾರೆ ಎನ್ನಲಾಗುತ್ತಿರುವ ಇಬ್ಬರು ಮಹಿಳೆಯರು ಕೂಡ ಲಾಟರಿ ಮಾರಾಟ ಮಾಡುತ್ತಿದ್ದ ಬಡ ಮಹಿಳೆಯರಾಗಿದ್ದು ಅವರನ್ನು ಉಪಾಯದಿಂದ ನಂಬಿಸಿ ಶಾಫಿಯೇ ಮಂತ್ರವಾದಿ ಬಳಿ ಕರೆತಂದಿದ್ದ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ. 

Two women in Kerala were allegedly abducted, beheaded and buried as part of a suspected ‘witchcraft ritual’ to gain financial prosperity at Elanthoor village in Pathanamthitta district, the police said on Tuesday, adding that one person has been arrested in the case while two others are in custody.