ಬ್ರೇಕಿಂಗ್ ನ್ಯೂಸ್
12-10-22 08:04 pm HK News Desk ಕ್ರೈಂ
ಕೊಚ್ಚಿ, ಅ.12: ದೇವರ ನಾಡು ಕೇರಳದಲ್ಲಿ ದೇಶವೇ ಬೆಚ್ಚಿಬೀಳುವ ಕೃತ್ಯ ನಡೆದಿರುವುದು ಬಯಲಿಗೆ ಬಂದಿದೆ. ಸಂಪತ್ತು ವೃದ್ಧಿಸುತ್ತದೆ, ಯೌವ್ವನ ಮರಳುತ್ತದೆ ಎನ್ನುವ ಮೌಢ್ಯ ನಂಬಿಕೆಗೆ ಬಲಿಬಿದ್ದ ಮನೆಯಲ್ಲಿ ಮಸಾಜ್ ಮಾಡುತ್ತಿದ್ದ ದಂಪತಿ ಇಬ್ಬರು ಮಹಿಳೆಯರನ್ನು ಭೀಭತ್ಸ ರೀತಿಯಲ್ಲಿ ತಲೆಯನ್ನು ಒಡೆದು ಕೊಂದಿದ್ದಲ್ಲದೆ, ಮಹಿಳೆಯರ ದೇಹದ ಕೆಲವು ಭಾಗಗಳನ್ನು ಬೇಯಿಸಿ ತಿಂದಿರುವ ಹೇಯ ಕೃತ್ಯ ಬೆಳಕಿಗೆ ಬಂದಿದೆ.
ಪತ್ತನಂತಿಟ್ಟ ಜಿಲ್ಲೆಯ ಎಳಂದೂರು ಗ್ರಾಮದಲ್ಲಿ ಭಗವಾಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಹೇಯ ಕೃತ್ಯ ಎಸಗಿದವರಾಗಿದ್ದು, ಅ.10ರಂದು ಪ್ರಕರಣ ಬೆಳಕಿಗೆ ಬರುತ್ತಲೇ ಅಕ್ಷರಸ್ಥರ ನಾಡು ಎಂದು ಕರೆಸಿಕೊಂಡಿರುವ ಕೇರಳ ಬೆಚ್ಚಿ ಬಿದ್ದಿತ್ತು. ಇದೀಗ ಮೂವರು ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಭಯಾನಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಆರೋಪಿಗಳು ಮಹಿಳೆಯರನ್ನು ಕೊಂದಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಲ್ಲದೆ, ಭಗವಾಲ್ ಸಿಂಗ್ ಪತ್ನಿ ಲೈಲಾ ಮಹಿಳೆಯರ ದೇಹದ ಭಾಗಗಳನ್ನು ಪದಾರ್ಥ ರೂಪದಲ್ಲಿ ತಿಂದಿದ್ದಾಗಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ. ಅಲ್ಲದೆ, ಈ ಕೃತ್ಯವನ್ನು ಮಹಮ್ಮದ್ ಶಫಿ ಸೂಚನೆಯಂತೆ ಮಾಡಿದ್ದಾಗಿ ತಿಳಿಸಿದ್ದಾಳೆ.
ಮಹಮ್ಮದ್ ಶಫಿ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಭಗವಾಲ್ ಸಿಂಗ್ ಗೆ ಪರಿಚಯ ಆಗಿದ್ದು, ನರಬಲಿ ಕೊಟ್ಟರೆ ಸಂಪತ್ತು ವೃದ್ಧಿಸುವುದಾಗಿ ದಂಪತಿಯನ್ನು ನಂಬಿಸಿದ್ದ ಎನ್ನಲಾಗಿದೆ. ಮೊದಲಿಗೆ ಜೂನ್ ತಿಂಗಳಲ್ಲಿ ಮಹಮ್ಮದ್ ಶಫಿಯೇ ಕಾಲಡಿ ನಿವಾಸಿ ರೋಸ್ಲಿನ್(52) ಎಂಬಾಕೆಯನ್ನು ದಂಪತಿಯ ಮನೆಗೆ ಕರೆತಂದಿದ್ದ. ಆಕೆಯನ್ನು ಬೆಡ್ಡಿಗೆ ಕಟ್ಟಿ ಜೀವಂತ ಇರುವಾಗಲೇ ತಲೆಯನ್ನು ಮಚ್ಚಿನಿಂದ ಒಡೆದು ಸೀಳಿ ಹಾಕಿದ್ದರು. ಅದರಿಂದ ಮನೆಯ ಗೋಡೆ ಸೇರಿದಂತೆ ಎಲ್ಲ ಕಡೆಯೂ ರಕ್ತ ಚೆಲ್ಲಿತ್ತು. ಆನಂತರ, ಕುತ್ತಿಗೆಯನ್ನು ಕತ್ತರಿಸಿ ರಕ್ತವನ್ನು ಇಡೀ ಮನೆಯಲ್ಲಿ ತೋಯುವಂತೆ ಮಾಡಿದ್ದರು. ನಂತರ, ದೇಹದ ಕೆಲವು ಭಾಗಗಳನ್ನು ತೆಗೆದಿರಿಸಿ, 50ಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿದ್ದರು. ಅಲ್ಲದೆ, ಶಫಿ ಸೂಚನೆಯಂತೆ ಕೆಲವು ಮಂತ್ರಗಳನ್ನು ಪಠಣ ಮಾಡಿದ್ದರು. ಕೊನೆಗೆ, ದೇಹದ ಕೆಲವು ಭಾಗಗಳನ್ನು ಬೇಯಿಸಿ ತಿಂದು, ಉಳಿದವನ್ನು ಮನೆ ಹಿಂಬದಿಯಲ್ಲಿ ಎರಡು ಗುಂಡಿ ತೋಡಿ ಪ್ರತ್ಯೇಕವಾಗಿ ಮಣ್ಣಿನಲ್ಲಿ ಹೂತಿದ್ದರು.
ನರಬಲಿ ಕೊಟ್ಟರೂ ಮನೆಯಲ್ಲಿ ಸಂಪತ್ತು ವೃದ್ಧಿಯಾಗದೇ ಇರುವುದರ ಬಗ್ಗೆ ಭಗವಾಲ್ ಸಿಂಗ್ ಶಫಿ ಬಳಿ ಪ್ರಶ್ನೆ ಹಾಕಿದ್ದ. ಅದಕ್ಕೆ ಇನ್ನೊಂದು ಮಹಿಳೆಯನ್ನು ಅದೇ ರೀತಿಯಲ್ಲಿ ನರಬಲಿ ಕೊಟ್ಟು ಅಮಾನುಷ ಶಕ್ತಿಯನ್ನು ಮೆಚ್ಚಿಸುವಂತೆ ಸೂಚಿಸಿದ್ದ. ಅದರಂತೆ, ಸೆಪ್ಟಂಬರ್ ತಿಂಗಳ ಕೊನೆಯಲ್ಲಿ ಕೊಚ್ಚಿಯಲ್ಲಿ ನೆಲೆಸಿದ್ದ ತಮಿಳ್ನಾಡು ಮೂಲದ ಪದ್ಮಾ(50) ಎಂಬಾಕೆಯನ್ನು ಪುಸಲಾಯಿಸಿ ದಂಪತಿಯ ಮನೆಗೆ ಶಫಿ ಕರೆತಂದಿದ್ದ. ಹಿಂದಿನ ರೀತಿಯಲ್ಲೇ ಪದ್ಮಾಳನ್ನೂ ಮಲಗಿಸಿ ಅಮಾನುಷವಾಗಿ ಕೊಂದಿದ್ದಲ್ಲದೆ, ಪದಾರ್ಥ ಮಾಡಿ ಸೇವಿಸಿದ್ದರು. ಅಲ್ಲದೆ, ರಕ್ತವನ್ನು ಮನೆಯಲ್ಲಿ ಚೆಲ್ಲಿ ಮಂತ್ರೋಚ್ಚಾರಣೆಯನ್ನೂ ಮಾಡಿದ್ದರು. ಕೊನೆಗೆ ದೇಹವನ್ನು ತುಂಡರಿಸಿ ಮನೆ ಹಿಂಬದಿಯಲ್ಲಿ ಮತ್ತೆರಡು ಗುಂಡಿಗಳನ್ನು ತೋಡಿ ಹೂತು ಹಾಕಿದ್ದರು.
ಮಹಿಳೆಯರ ದೇಹದ ಕೆಲವು ಭಾಗಗಳನ್ನು ತಿಂದರೆ ಯೌವನ ಬರುತ್ತೆ ಎಂಬುದಾಗಿ ಶಫಿ ಹೇಳಿದ್ದ ಎಂದು ಲೈಲಾ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಸದ್ಯಕ್ಕೆ ಮೂವರನ್ನೂ ಬಂಧಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದೇಶದ ಕೆಲವೆಡೆ ಅಮಾನುಷ ಶಕ್ತಿಯನ್ನು ಒಲಿಸುವುದಕ್ಕಾಗಿ ನರಬಲಿ ಕೊಟ್ಟ ಒಂದಷ್ಟು ಉದಾಹರಣೆಗಳಿದ್ದರೂ, ಅಘೋರಿಗಳ ರೀತಿ ಹೆಣವನ್ನು ಭಕ್ಷಿಸಿದ್ದು ಅತ್ಯಂತ ಅಪರೂಪದ ಪ್ರಕರಣ. ಅತ್ಯಂತ ಅಮಾನುಷ ರೀತಿಯ ಘಟನೆ ಕೇರಳದ ಕುಗ್ರಾಮದಲ್ಲಿ ನಡೆದಿದ್ದು, ಸಂಪತ್ತು ವೃದ್ಧಿಗಾಗಿ ಮನುಷ್ಯ ಇಂಥ ಹೀನ ಕೆಲಸವನ್ನೂ ಮಾಡುತ್ತಾನಲ್ಲಾ ಎಂದು ಜನ ನಾಚಿಕೆ ಪಡುವಂತಾಗಿದೆ.
ಎಳಂದೂರು ಗ್ರಾಮದಲ್ಲಿ ಭಗವಾಲ್ ಸಿಂಗ್ ಎಲ್ಲರಿಗೂ ಪರಿಚಿತ ವ್ಯಕ್ತಿಯಾಗಿದ್ದ. ಈತ ಈ ರೀತಿ ಮಾಡಿದ್ದಾನೆ ಎಂದರೆ ಅಲ್ಲಿನ ಜನ ನಂಬುವ ಸ್ಥಿತಿಯಲ್ಲಿ ಇಲ್ಲ. ಭಗವಾಲ್ ಸಿಂಗ್ ನನ್ನ ಬಾಲ್ಯದ ಸ್ನೇಹಿತ. ಆತನ ತಂದೆಯೂ ಮಸಾಜ್ ಥೆರಪಿಸ್ಟ್ ಆಗಿದ್ದರು. ಅದೇ ವೃತ್ತಿಯನ್ನು ಭಗವಾಲ್ ಮುಂದುವರಿಸಿದ್ದ. ಈಗ ಈ ರೀತಿ ಮಾಡಿದ್ದಾನಂದ್ರೆ, ನಂಬೋಕೆ ಆಗ್ತಿಲ್ಲ. ಇದರ ಹಿಂದಿನ ಕಾರಣ ಏನಿದ್ದಿರಬಹುದು ಅನ್ನುವುದು ತಿಳಿದಿಲ್ಲ ಎಂದು ನೆರೆಮನೆಯ ವ್ಯಕ್ತಿಯೊಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಮಂಗಳವಾರ ಮೂವರು ಆರೋಪಿಗಳನ್ನೂ ತಲೆಗೆ ಬಟ್ಟೆ ಮುಚ್ಚಿಕೊಂಡು ಕರೆತಂದಿದ್ದು, ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
Two women were allegedly sacrificed as part of a ritual in a remote Kerala village by three people, including a couple, to gain wealth and prosperity. The body parts of the victims Padma and Roslyn were cut into pieces and buried in the backyard. Blood was splattered on walls and floor as part of the black magic ritual.
22-04-25 01:00 pm
Bangalore Correspondent
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm