ವೃದ್ಧೆಯ ಚಿನ್ನದ ಸರ ಕಸಿದು ಪರಾರಿಗೆ ಯತ್ನ ; ಮೂವರು ಮಂಗಳಮುಖಿಯರ ಹಿಡಿದಿಟ್ಟ ಸಾರ್ವಜನಿಕರು 

13-10-22 01:47 pm       HK News Desk   ಕ್ರೈಂ

ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ಸುಲಿಗೆಕೋರರನ್ನ ಸಾರ್ವಜನಿಕರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.‌

ಕಾರ್ಕಳ, ಅ.13: ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ಸುಲಿಗೆಕೋರರನ್ನ ಸಾರ್ವಜನಿಕರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.‌

ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಮಹಿಳೆಯರ ಸೋಗಿನಲ್ಲಿದ್ದ ಮೂವರು ಮಂಗಳಮುಖಿಯರು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಕೂಡಲೇ ವೃದ್ಧ ಮಹಿಳೆ ಬೊಬ್ಬೆ ಹೊಡೆದಿದ್ದು ಮೂವರು ದುಷ್ಕರ್ಮಿಗಳನ್ನು ಸಾರ್ವಜನಿಕರು ಸೆರೆಹಿಡಿದು ಕೂಡಿಹಾಕಿದ್ದಾರೆ. ಬಳಿಕ ಪೊಲೀಸರು ಆಗಮಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ದುಷ್ಕರ್ಮಿಗಳು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ನಿವಾಸಿಗಳು ಎನ್ನಲಾಗುತ್ತಿದ್ದು, ಮಂಗಳಮುಖಿಗಳಂತೆ ತೋರುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವೃದ್ಧೆ ಆಸ್ಪತ್ರೆಯಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಅವರ ಹಿಂಬದಿಯಲ್ಲಿ ಮೂವರು ಮಂಗಳಮುಖಿಯರು ನಿಂತಿದ್ದು ವೃದ್ಧೆಯ ಗಮನ ಬೇರೆಡೆ ಸೆಳೆದು ಚಿನ್ನದ ಸರವನ್ನು ಕಸಿದು ಓಡಲು ಯತ್ನಿಸಿದ್ದಾರೆ. ಆಗ ವೃದ್ಧೆ ಬೊಬ್ಬೆ ಹಾಕಿದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಸುಲಿಗೆಕೋರರನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಕಾರ್ಕಳ ತಾಲೂಕು ಆಸ್ಪತ್ರೆಯ ಸಿಬ್ಬಂದಿಯೊಬ್ಬರ ಸರ ಕಳ್ಳತನ ನಡೆದಿತ್ತು.

Transgenders try to snatch gold from an old woman in Karkala, three caught and thrashed by Public. The three are said to be from Manjeshwar, Kasargod.