ಬ್ರೇಕಿಂಗ್ ನ್ಯೂಸ್
09-11-22 04:28 pm HK News Desk ಕ್ರೈಂ
ಮಂಗಳೂರು, ನ.9: ಮಳಲಿ ಮಸೀದಿಯ ಕುರಿತು ಮಸೀದಿ ಕಮಿಟಿಯವರು ವಕ್ಫ್ ಆಸ್ತಿಯೆಂದು ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಮೂರನೇ ಸಿವಿಲ್ ಕೋರ್ಟ್ ವಜಾ ಮಾಡಿದ್ದು, ಇದು ಮೊದಲ ಹಂತದಲ್ಲಿ ಹಿಂದುಗಳಿಗೆ ಸಿಕ್ಕ ಜಯವಾಗಿದೆ. ನಾವು ಮೊದಲೇ ಅಲ್ಲಿ ದೇವಸ್ಥಾನ ಇರುವ ಬಗ್ಗೆ ಹೇಳಿದ್ದೆವು. ಜಿಲ್ಲಾಡಳಿತಕ್ಕೆ ಸರ್ವೆ ನಡೆಸಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದೆವು. ಈಗ ಕೋರ್ಟ್ ತೀರ್ಪು ನೀಡಿದ್ದು, ನಮ್ಮ ಅಹವಾಲನ್ನು ಎತ್ತಿಹಿಡಿದಿದೆ ಎಂಬುದಾಗಿ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಮಳಲಿ ಮಸೀದಿ ಕುರಿತ ತೀರ್ಪು ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಶರಣ್ ಪಂಪ್ವೆಲ್, ಕಳೆದ ಎಪ್ರಿಲ್ 19ರಂದು ಮಸೀದಿ ನವೀಕರಣ ಕಾರ್ಯಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಆನಂತರ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸಿದ್ದೆವು. ಈಗ ಮಸೀದಿ ಕಡೆಯ ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದು, ನಮಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ಮುಂದಿನ ವಿಚಾರಣೆ ಜನವರಿ 8ಕ್ಕೆ ಇರಲಿದ್ದು, ದೇವಸ್ಥಾನ ಎನ್ನುವ ಕುರಿತು ಎಲ್ಲ ದಾಖಲೆಗಳನ್ನು ಮುಂದಿಡುತ್ತೇವೆ. ಕೋರ್ಟ್ ತೀರ್ಪಿನ ಬಳಿಕ ಅದೇ ಜಾಗದಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದರು.
ನಾವು ಮಳಲಿಯ ಮುಸ್ಲಿಮರ ಜೊತೆ ಹೇಳುವುದು ಇಷ್ಟೇ, ವಿವಾದ ಬೇಡ. ಆ ಜಾಗವನ್ನು ಬಿಟ್ಟುಕೊಡಿ. ಸೌಹಾರ್ದದಿಂದ ಸಮಸ್ಯೆ ಇತ್ಯರ್ಥ ಮಾಡೋಣ ಎಂದು ಮನವಿ ಮಾಡುತ್ತೇನೆ. ನಾವು ಆ ಜಾಗದ ಬಳಿ ತಾಂಬೂಲ ಪ್ರಶ್ನೆ ಇಟ್ಟಾಗ ಅಲ್ಲಿ ಶಿವನ ಆರಾಧನೆ ಇತ್ತು ಎನ್ನುವುದು ತಿಳಿದುಬಂದಿದೆ. ಅದೇ ರೀತಿಯಲ್ಲಿ ಮುಂದಕ್ಕೆ ಅಷ್ಟಮಂಗಲ ಪ್ರಶ್ನೆ ಇಟ್ಟು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದೇ ರೀತಿಯ ದೇವಸ್ಥಾನ ರೂಪದಲ್ಲಿರುವ ಮಸೀದಿಗಳು ಹಲವು ಕಡೆ ಇವೆ, ಆ ಬಗ್ಗೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, ಸದ್ಯಕ್ಕೆ ಮಳಲಿ ಮಸೀದಿ ಕುರಿತು ಕಾನೂನು ಹೋರಾಟ ನಡೆಯುತ್ತಿದೆ. ಬೇರೆ ಕಡೆಯದನ್ನು ನಿಧಾನಕ್ಕೆ ನೋಡುತ್ತೇವೆ. ಈಗಾಗಲೇ ಜ್ಞಾನವಾಪಿ ಮಸೀದಿಯ ಕುರಿತು ತೀರ್ಪು ಬಂದಿದೆ. ದೇಶದಲ್ಲಿ ಇಂತಹ ಉದಾಹರಣೆ ಬಹಳಷ್ಟಿದೆ. ಕೋರ್ಟ್ ನಮ್ಮ ವಾದವನ್ನು ಎತ್ತಿಹಿಡಿದಿರುವುದು ದೊಡ್ಡ ಪ್ರೇರಣೆ ಸಿಕ್ಕಂತಾಗಿದೆ. ನಾವು ಜ್ಞಾನವಾಪಿ ರೀತಿಯಲ್ಲೇ ಸ್ಥಳದ ಸರ್ವೆ ನಡೆಸಲು ಕೇಳಿಕೊಂಡಿದ್ದೇವೆ. ಪುರಾತತ್ವ ಇಲಾಖೆಯಿಂದ ಸರ್ವೆ ಆಗಬೇಕು ಅನ್ನುವುದು ನಮ್ಮ ವಾದ. ಇದೇ ಬೇಡಿಕೆಯನ್ನು ಈಗಿನ ಜಿಲ್ಲಾಧಿಕಾರಿಗೂ ಇಡಲಿದ್ದೇವೆ. ನಮ್ಮ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಚಿದಾನಂದ ಕೆದಿಲಾಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗೋಪಾಲ ಕುತ್ತಾರ್, ಭುಜಂಗ ಕುಲಾಲ್, ಪುನೀತ್ ಅತ್ತಾವರ ಮತ್ತಿತರರಿದ್ದರು.
ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಸುದ್ದಿಗೋಷ್ಟಿಯ ಬಳಿಕ ಕದ್ರಿಯ ವಿಶ್ವ ಹಿಂದು ಪರಿಷತ್ ಕಚೇರಿಯ ಮುಂಭಾಗದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಮಳಲಿ ದೇವಸ್ಥಾನ ತಮ್ಮದು, ಅದನ್ನು ಕೂಡಲೇ ಬಿಟ್ಟು ಕೊಡುವಂತೆ ಘೋಷಣೆ ಕೂಗಿದರು.
Mangalore Malali Mosque Masjid row, court verdict is a victory for entire Hindu community says VHP in Mangalore, crackers were busted as a mark of celebration by VHP and Bajarangdal activists.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm